ದಿಲ್ಲಿಯ ಕೋಮುವಾದಿ ಹಿಂಸಾಚಾರದ ಮೇಲೆ ಸಂ ಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಪೋಲೀಸರು ಮತ್ತು ಸರಕಾರ ಹಿಂಸಾಚಾರಕ್ಕೆ ಹೊಣೆಗಾರರಾದ ಗಲಭೆಕೋರರನ್ನು ಗುರುತಿಸಲು ಮುಖ ಗುರುತಿಸುವ ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ಹೇಳಿಕೊಂಡಿರುವುದನ್ನು ಬಲವಾಗಿ ಖಂಡಿಸಿದೆ.
ಈ ತಂತ್ರಜ್ಞಾನ ಪ್ರತಿಭಟನಾಕಾರರನ್ನು ಕಾನೂನಿನ ಉಲ್ಲಂಘನೆಯೊಂದಿಗೆ ನಿಖರವಾಗಿ ತಳಕು ಹಾಕುತ್ತದೆ. ಎಂದೇನೂ ಇಲ್ಲ. ಅಲ್ಲದೆ ಪೋಲೀಸರು ಗಲಭೆನಿರತ ಜನಜಂಗುಳಿಗೆ ಅನುಕೂಲ ಕಲ್ಪಿಸಿಕೊಡುವುದರಲ್ಲಿ ಮಾತ್ರವೇ ಅಲ್ಲ, ಸಿಸಿಟಿವಿ ಕ್ಯಾಮರಾಗಳನ್ನು ಒಡೆದು ಹಾಕುವಲ್ಲಿಯೂ ಶಾಮೀಲಾಗಿದ್ದರು ಎನ್ನುವುದಕ್ಕೆ ಸ್ಪಷ್ಟವಾದ ವೀಡಿಯೋಗಳಿವೆ ಎಂಬುದೂ ಬೆಳಕಿಗೆ ಬಂದಿದೆ. ಅಂದರೆ ವೀಡಿಯೋಗಳನ್ನು ಸಾಕ್ಷಿಯಾಗಿ ಬಳಸಲು ಪಕ್ಷಪಾತಪೂರ್ಣ ರೀತಿಯಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಇನ್ನೂ ಆಶ್ಚರ್ಯಕಾರೀ ಸಂಗತಿಯೆಂದರೆ, ದಿಲ್ಲಿ ಪೋಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ೨೦೧೮ರಲ್ಲಿ ಈ ತಂತ್ರಜ್ಞಾನದ ನಿಖರತೆ ಕೇವಲ ೨ಶೇ. ಎಂದು ದಿಲ್ಲಿ ಹೈಕೋರ್ಟಿನಲ್ಲಿ ಒಪ್ಪಿಕೊಂಡಿದ್ದವು. ಇದು ೨೦೧೯ರಲ್ಲಿ ೧ಶೇ.ಕ್ಕೆ ಇಳಿದಿದೆ. ಅಲ್ಲದೆ ಇದು ಲಿಂಗ ವ್ಯತ್ಯಾಸವನ್ನೂ ಗುರುತಿಸಲಾರದು ಎಂದು ಹೇಳಲಾಗಿದೆ.
ಗೃಹಮಂತ್ರಿಗಳು ಸೂಚಿಸಿದ ಉದ್ದೇಶಕ್ಕೆ ಈ ತಂತ್ರಜ್ಞಾನವನ್ನು ಬಳಸಲು ಯಾವುದೇ ಕಾನೂನು ಚೌಕಟ್ಟು ಇಲ್ಲ, ಅಥವ ಯಾವುದೇ ನ್ಯಾಯಾಂಗದ ಆದೇಶವಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂತಹ ತಂತ್ರಜ್ಞಾನವನ್ನು ಮನಬಂದಂತೆ ಬಳಸುವುದು ಖಾಸಗಿತ್ವದ ಹಕ್ಕುಗಳ ಮತ್ತು ಪ್ರತಿಭಟನೆಯ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ತಾನು ದೃಢವಾಗಿ ಬೊಟ್ಟು ಮಾಡಬಯಸುವುದಾಗಿ ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.
ಈ ತಂತ್ರಜ್ಞಾನ ಗಲಭೆಕೋರರ ಜಾತಿ, ಮತ, ಧಾರ್ಮಿಕ ಗುರುತಿನ ಬೇಧಭಾವ ಮಾಡುವುದಿಲ್ಲ ಎಂಬ ಗೃಹಮಂತ್ರಿಗಳ ಸೂಚನೆಯನ್ನು ಪೊಲಿಟ್‌ಬ್ಯುರೊ ಬಲವಾಗಿ ತಿರಸ್ಕರಿಸಿದೆ. ಇದನ್ನು ಮೇಲೆ ಹೇಳಿರುವ ಕಾರಣಗಳಿಗಾಗಿ ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿದೆ ಎಂದು ಅದು ಹೇಳಿದೆ.