ಕೋಮು ದ್ವೇಷಪ್ರಚಾರ: ಶಿಕ್ಷಿಸಲು ಕಾನೂನನ್ನು ಕಟ್ಟುನಿಟ್ಟಾಗಿ ಬಳಸಿ

ಕೊವಿಡ್-19 ಮಹಾಮಾರಿಯ ವಿರುದ್ಧ ಸಮರದಲ್ಲಿ ಭಾರತದ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಕೋಮುವಾದಿ ದಾಳಿಗಳಿಗೆ ಗುರಿಪಡಿಸಲಾಗುತ್ತಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಹೊಲಸು ಬೈಗುಳಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟಿಂಗ್‌ಗಳನ್ನು ಆಳುವ ಪಕ್ಷದ ಬೆಂಬಲಿಗ ಬಾಲ(ಟ್ರಾಲ್)ಗಳು ತಮ್ಮ ಕರ್ತವ್ಯವೆಂಬಂತೆ ಪಸರಿಸುತ್ತಿವೆ. ಇದನ್ನು ಒಪ್ಪಲು ಖಂಡಿತಾ ಸಾಧ್ಯವಿಲ್ಲ. ಅವರು ಸಂವಿಧಾನಿಕ ಮೂಲಾಂಶಗಳನ್ನೇ ಉಲ್ಲಂಘಿಸುತ್ತಿದ್ದಾರೆ. ಇಂತಹ ಅಪರಾಧಗಳ ವಿರುದ್ಧ ಕ್ರಮಕೈಗೊಳ್ಳಬೆಕು, ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.
ಕೇಂದ್ರದಲ್ಲಿನ ಆಳುವ ಪಕ್ಷದ ಕೃಪಾಪೋಷಣೆಯ ಅಡಿಯಲ್ಲಿ ನಡೆಯುತ್ತಿರುವ ಈ ಕೋಮುವಾದಿ ದ್ವೇಷ ಪ್ರಚಾರ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ಬದುಕುತ್ತಿರುವ ಲಕ್ಷಾಂತರ ಭಾರತೀಯರ ಜೀವನೋಪಾಯಗಳನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ಕಳೆದ ವರ್ಷ, 2019 ರಲ್ಲಿಯೇ, ಕೊಲ್ಲಿ ಪ್ರದೇಶದ ಮತ್ತು ಪಶ್ಚಿಮ ಏಶ್ಯಾದ ದೇಶಗಳಿಗೆ ಉತ್ತರಪ್ರದೇಶ, ಬಿಹಾರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಲದಿಂದ ಸುಮಾರು 3 ಲಕ್ಷ ಭಾರತೀಯರು ಅಲ್ಲೆಲ್ಲ ಈಗಾಗಲೇ  ಇರುವ ಲಕ್ಷಾಂತರ ಭಾರತೀಯರ ಜತೆಗೂಡಿದ್ದಾರೆ. ಇಂದು ಜಗತ್ತಿನಲ್ಲಿ ಭಾರತೀಯ ಮೂಲದ ವಲಸಿಗರದ್ದೇ ಅತಿ ದೊಡ್ಡ ಸಂಖ್ಯೆ-ಸುಮಾರು 1.75 ಕೋಟಿ.
ಕೇಂದ್ರ ಸರಕಾರ ತಕ್ಷಣವೇ `ಅನಾಹುತ ನಿರ್ವಹಣೆ ಕಾಯ್ದೆ’ (ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆಕ್ಟ್)ಯ ಅಂಶಗಳನ್ನು ಬಳಸಿ, ರಾಜಕೀಯ ಮುಖಂಡರು ಮತ್ತು ಉನ್ನತ ಹುದ್ದೆಗಳಲ್ಲಿ ಇರುವ ಇತರರೂ ಸೇರಿದಂತೆ ವಿಷಪೂರ್ಣ ಕೋಮುವಾದಿ ದ್ವೇಷವನ್ನು ಹರಡಿಸಿ ಮಹಾಮಾರಿಯ ವಿರುದ್ಧ ಎಲ್ಲ ಭಾರತೀಯರ ಐಕ್ಯ ಹೋರಾಟವನ್ನು ಛಿದ್ರಗೊಳಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಬಿಜೆಪಿ ಕೇಂದ್ರ ಸರಕಾರ ಎಲ್ಲ ಭಾರತೀಯರ ಬದುಕಿನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂಬುದನ್ನು ಧರ್ಮ, ಜಾತಿ, ಲಿಂಗ ಅಥವ ವಿಕಲತೆಯ ಬೇಧಭಾವವಿಲ್ಲದೆ ಖಾತ್ರಿಪಡಿಸಬೇಕು ಎಂದು ಒತ್ತಿ ಹೇಳಿದೆ.corona-asymptomatic communalism
ಇಂತಹ ಜನಗಳ ವಿರುದ್ಧ ಕ್ರಮಕೈಗೊಳ್ಳುವ ಬದಲು, ಕಾನೂನು ಅಲ್ಪಸಂಖ್ಯಾತರನ್ನೇ ಗುರಿಮಾಡಿ ಅವರ ವಿರುದ್ಧವೇ ಕ್ರಮ ಕೈಗೊಳ್ಳುತ್ತಿರುವಂತೆ ಕಾಣುತ್ತಿದೆ. ಇಂತಹ ದ್ವೇಷದ ವಿರುದ್ಧ ಮಾತನಾಡುವ ಪತ್ರಕರ್ತರು ಮತ್ತು ಕಾರ್ಯಕರ್ತರಿಗೆ ಕಿರುಕುಳ ಕೊಡಲಾಗುತ್ತಿದೆ, ಅವರನ್ನು ದಂಡಿಸಲಾಗುತ್ತಿದೆ, ಶಿಕ್ಷಿಸಲಾಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಸರಕಾರದ ಸಾಕುನಾಯಿಗಳಂತಿರುವ ಮಾಧ್ಯಮ ಗುಂಪುಗಳು ಇಂತಹ ವಿಷಭರಿತ ಪ್ರಚಾರಗಳ ಗಿಳಿಪಾಟಗಳನ್ನು ಮುಂದುವರಿಸುತ್ತಿವೆ. ಇದು ಸ್ವೀಕಾರಾರ್ಹವಲ್ಲ.
ಇಂತಹ ಕ್ರಿಮಿನಲ್‌ಗಳನ್ನು ಶಿಕ್ಷಿಸಲು ಕಾನೂನನ್ನು ಕಟ್ಟುನಿಟ್ಟಾಗಿ ಬಳಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಒತ್ತಾಯಿಸಿದೆ.

Leave a Reply

Your email address will not be published. Required fields are marked *