ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜಾರ್ಜ್ ಫ್ಲೋಯ್ಡ್ ಕೊಲೆಗೆ ಜಗತ್ತಿನಾದ್ಯಂತ ವ್ಯಾಪಕ ಖಂಡನೆ ಮತ್ತು ಜನಾಂಗವಾದಿ ಹಿಂಸಾಚಾರವನ್ನು ನಿಲ್ಲಿಸಿ ಸಾಮಾಜಿಕ ಸಾಮರಸ್ಯ ಮತ್ತು ನ್ಯಾಯವನ್ನು ಖಾತ್ರಿಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಈ ಅಂತರ್ ರಾಷ್ಟ್ರೀಯ ಸೌಹಾರ್ದತೆಯಲ್ಲಿ ಸಿಪಿಐ(ಎಂ) ಕೂಡ ಸೇರಿಕೊಳ್ಳುವುದಾಗಿ ಪಕ್ಷದ ಪೊಲಿಟ್ ಬ್ಯುರೊ ಹೇಳಿದೆ.
ಅಮೆರಿಕ ಕೂಡಲೇ ನ್ಯಾಯದ ಕೈಮೇಲಾಗುವಂತೆ ಮಾಡಬೇಕು ಮತ್ತು ಇಂತಹ ಜನಾಂಗವಾದಿ ಹಿಂಸಾಚಾರ ಎಸಗುವವರನ್ನು ಅಮೆರಿಕಾದ ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಪೊಲಿಟ್ ಬ್ಯುರೊ ಆಗ್ರಹಿಸಿದೆ.