ಜಾತ್ಯತೀತ ಪ್ರಜಾಪ್ರಭುತ್ವದ ದೃಢಚಿತ್ತದ ರಕ್ಷಕರು

ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಯ ಸಾಂವಿಧಾನಿಕ ಖಾತ್ರಿಯನ್ನು ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವಿಲ್ಲದೆ ಸ್ಥಾಪಿಸಲು ಸಾಧ್ಯವಿಲ್ಲ. ಕಮ್ಯುನಿಸ್ಟರು, ಹಿಂದೆಯೂ ಭಾರತದಲ್ಲಿ ಇಂತಹ ಒಂದು ಜಾತ್ಯತೀತ ಪ್ರಜಾಪ್ರಭುತ್ವವನ್ನು ಅತ್ಯಂತ ದೃಢಚಿತ್ತದಿಂದ ಎತ್ತಿ ಹಿಡಿದಿದ್ದಾರೆ ಮತ್ತು ಇಂದೂ ಕೂಡ ಎತ್ತಿ ಹಿಡಿಯುತ್ತಿದ್ದಾರೆ.

ಸೀತಾರಾಮ್ ಯೆಚುರಿ

Communist Part 100 copyನಾವೀಗ ಅಕ್ಟೋಬರ್ 17, 1920ರಂದು ಭಾರತ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ಶತಮಾನೋತ್ಸವ ಆಚರಣೆಯನ್ನು ಪೂರ್ಣಗೊಳಿಸುತ್ತಿದ್ದೇವೆ.

ಕೊವಿಡ್-19 ಮಹಾಸೋಂಕು, ದೀರ್ಘಕಾಲ ಎಳೆದ ರಾಷ್ಟ್ರೀಯ ಲಾಕ್‌ಡೌನ್‌ಗಳು ಮತ್ತು ದೈಹಿಕ ಅಂತರ ಮುಂತಾದ ನಿರ್ಬಂಧಗಳು ಶತಮಾನೋತ್ಸವ ಕಾರ್ಯಕ್ರಮಗಳನ್ನು ಕಂಡರಿಸಿದ ರೀತಿಯಲ್ಲಿ ಗಟ್ಟಿಯಾಗಿ ನೆರವೇರಿಸುವುದಕ್ಕೆ ಅಡ್ಡಿಯಾದವು. ಆದರೂ, ಈ ಮಿತಿಗಳೊಳಗೆ, ವರ್ಚುವಲ್ ಮಾಧ್ಯಮಗಳು, ಮತ್ತು  ಡಿಜಿಟಲ್ ಸಂಪರ್ಕಗಳನ್ನು ಬಳಸಿಕೊಂಡು, ಪಕ್ಷವು ಕಳೆದ ನೂರು ವರ್ಷಗಳಲ್ಲಿ ಭಾರತೀಯ ಇತಿಹಾಸದ ವಿವಿಧ ಘಟ್ಟಗಳಲ್ಲಿ ಕಮ್ಯುನಿಸ್ಟರು ವಹಿಸಿದ ಪಾತ್ರವನ್ನು ಎತ್ತಿ ತೋರುವ ಕಾರ್ಯಕ್ರಮಗಳನ್ನು ನಡೆಸಿದೆ.

ರಾಷ್ಟ್ರೀಯ ಅಜೆಂಡಾವನ್ನು ರೂಪಿಸುವಲ್ಲಿ

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ, ಮತ್ತು ನಂತರ, ಪಕ್ಷದ ನೇತೃತ್ವದ ಭವ್ಯ ಹೋರಾಟಗಳು, ಅಸಂಖ್ಯಾತ ಕ್ರಾಂತಿಕಾರಿಗಳು ಮತ್ತು ಹುತಾತ್ಮರ ಅಪಾರ ತ್ಯಾಗಗಳ ಮೂಲಕ ಭಾರತೀಯ ಇತಿಹಾಸದ ವಿಕಾಸಕ್ಕೆ ತಮ್ಮ ಕೊಡುಗೆಗಳನ್ನು ನೀಡಿದವು ಎಂಬುದನ್ನು ನೋಡಿದ್ದೇವೆ. ಜನಗಳ ನಿಜವಾದ ತಲ್ಲಣಗಳು ಮತ್ತು ಸಮಸ್ಯೆಗಳನ್ನು ರಾಷ್ಟೀಯ ಅಜೆಂಡಾಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದವು.

ಇವುಗಳಲ್ಲಿ, ಭಾರತದ ಅಪಾರ ವೈವಿಧ್ಯತೆಯನ್ನು ಗುರುತಿಸುವುದು, ಮತ್ತು ನಮ್ಮ ದೇಶದಲ್ಲಿ  ಇರುವ ಹಲವಾರು ಭಾಷೆಗಳ ನಡುವೆ ಸಮಾನತೆಯ ಅಗತ್ಯವನ್ನು ಮತ್ತು ಅದನ್ನು ಖಾತ್ರಿಪಡಿಸಬೇಕಾಗಿದೆ ಎಂಬುದು ವಿವಿಧ ಭಾಗಗಳಲ್ಲಿ ಒಂದು ಭಾಷಾವಾರು ಮರು ಸಂಘಟನೆಗಾಗಿ ಹೋರಾಟಕ್ಕೆ ಹಾದಿ ಮಾಡಿಕೊಟ್ಟಿತು. ಇದಕ್ಕೆ ನೇತೃತ್ವ ನೀಡಿದವರಲ್ಲಿ ಕಮ್ಯುನಿಸ್ಟರು ಇದ್ದರು. ದೇಶಾದ್ಯಂತ ಕಮ್ಯುನಿಸ್ಟರ ನೇತೃತ್ವದ ಭೂಹೋರಾಟಗಳು ಭೂಸುಧಾರಣೆಯ ಪ್ರಶ್ನೆಯನ್ನು ರಾಷ್ಟ್ರೀಯ ಅಜೆಂಡಾಕ್ಕೆ ತಂದವು. ರಾಷ್ಟçವಾದದ ವಿಷಯದಲ್ಲೂ ಸಂಕುಚಿತ ಮತ್ತು ಕೆಲ ವಿಭಾಗಗಳನ್ನು ಹೊರಗಿಡುವ ರಾಷ್ಟ್ರವಾದಕ್ಕೆ ಎದುರಾಗಿ ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರವಾದವನ್ನು ವಿಕಾಸಗೊಳಿಸುವಲ್ಲಿ ಭಾರತೀಯ ಕಮ್ಯುನಿಸ್ಟರ ಕೊಡುಗೆಗಳು ಕೂಡ ಬಹಳ ಮಹತ್ವದ್ದು.

ಕಣ್ಣೋಟಗಳ ಸಮರ

ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಮೂಡಿಬಂದ ಮೂರು ಕಣ್ಣೋಟಗಳ ನಡುವಿನ ಸತತ ಸಮರದ ಒಂದು ಫಲವಾಗಿ ಎಲ್ಲರನ್ನೂ ಒಳಗೊಳ್ಳುವ ಭಾರತದ ಪರಿಕಲ್ಪನೆ ಮೂಡಿಬಂತು. ಮುಖ್ಯಧಾರೆಯ ಕಾಂಗ್ರೆಸ್ ಕಣ್ಣೋಟ ಸ್ವತಂತ್ರ ಭಾರತವು ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರವಾಗಿರುತ್ತದೆ ಎಂದು ಪರಿಕಲ್ಪಿಸಿತು. ಕಮ್ಯುನಿಸ್ಟರು ಇದನ್ನು ಒಪ್ಪುತ್ತಲೇ, ಇನ್ನೂ ಮುಂದೆ ಹೋಗಿ, ಸ್ವತಂತ್ರ ಭಾರತ ಬಂಡವಾಳಶಾಹಿ ಅಭಿವೃದ್ಧಿ ಪಥವನ್ನು ಅನುಸರಿಸಿದರೆ, ಇಂತಹ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರಕ್ಕೆ ತಾಳಿಕೆಯಿರುವುದಿಲ್ಲ ಎಂದರು. ಹೀಗೆ ಕಮ್ಯುನಿಸ್ಟರು ನಾವು ಸಾಧಿಸುವ ರಾಜಕೀಯ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ಭಾರತೀಯನ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯವಾಗಿ ವಿಸ್ತರಿಸಬೇಕು ಎಂಬ ಕಣ್ಣೋಟವನ್ನು ಹೊಂದಿದ್ದರು. ಇದು ಸಾಧ್ಯವಾಗುವುದು ಸಮಾಜವಾದದ ಅಡಿಯಲ್ಲಿ ಮಾತ್ರ.

ಇವೆರಡಕ್ಕೂ ವಿರುದ್ಧವಾಗಿದ್ದ ಮೂರನೇ ಕಣ್ಣೊಟ, ಸ್ವತಂತ್ರ ಭಾರತದ ಚಾರಿತ್ರ್ಯವನ್ನು ಅದರ ಜನರ ಧಾರ್ಮಿಕ ಸಂಯೋಜನೆಯಿಂದ ನಿರ್ಧರಿಸಬೇಕು ಎಂದು ವಾದಿಸಿತು. ಈ ಕಣ್ಣೋಟದ ಎರಡು ಆವೃತ್ತಿಗಳಿದ್ದವು-ಮುಸ್ಲಿಂ ಲೀಗ್ ಒಂದು ‘ಇಸ್ಲಾಮಿಕ್ ಪ್ರಭುತ್ವ’ದ ಪ್ರತಿಪಾದನೆ ಮಾಡುತ್ತಿತ್ತು, ಮತ್ತು ಆರೆಸ್ಸೆಸ್ ತನ್ನ ‘ಹಿಂದುರಾಷ್ಟ್ರ’ವನ್ನು ಪ್ರತಿಪಾದಿಸುತ್ತಿತ್ತು. ಮುಸ್ಲಿಂ ಲೀಗ್ ದೇಶದ ದುರದೃಷ್ಟಕರ ವಿಭಜನೆಯೊಂದಿಗೆ ಯಶಸ್ವಿಯಾಯಿತು. ಇದರಲ್ಲಿ ಬ್ರಿಟಿಶರ ಕಸರತ್ತುಗಳು, ನೆರವು ಮತ್ತು ಕುಮ್ಮಕ್ಕು ಚೆನ್ನಾಗಿ ಕೆಲಸ ಮಾಡಿತು. ಇದರೆಲ್ಲ ದುಷ್ಪರಿಣಾಮಗಳೊಂದಿಗೆ, ಈಗಲೂ ಇದು ಉದ್ವಿಗ್ನತೆಗಳನ್ನು ಕೆದಕುತ್ತಲೇ ಇದೆ. ಇನ್ನು, ಸ್ವಾತಂತ್ರ್ಯದ ವೇಳೆಯಲ್ಲಿ ಗುರಿ ಸಾಧಿಸುವಲ್ಲಿ ವಿಫಲವಾದ ಆರೆಸ್ಸೆಸ್, ಸ್ವತಂತ್ರ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರ ಭಾರತವನ್ನು, ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ನಮೂನೆಯ ‘ಹಿಂದುರಾಷ್ಟ್ರ’ವಾಗಿ ಪರಿವರ್ತಿಸುವ ತನ್ನ ಪರಿಯೋಜನೆಯನ್ನು ಮುಂದುವರೆಸಿತು.

ಸ್ಪಷ್ಟವಾಗಿಯೂ, ಒಂದು ರೀತಿಯಲ್ಲಿ, ಇಂದಿನ ತಾತ್ವಿಕ ಸಮರಗಳು ಮತ್ತು ರಾಜಕೀಯ ಸಂಘರ್ಷಗಳು ಈ ಮೂರು ಕಣ್ಣೋಟಗಳ ನಡುವಿನ ಮುಂದುವರಿಕೆಯೇ ಆಗಿವೆ.

ಜಾತ್ಯತೀತ ಪ್ರಜಾಪ್ರಭುತ್ವ

ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಎರಡು ಭಿನ್ನ, ಪ್ರತ್ಯೇಕ ಲಕ್ಷಣಗಳಲ್ಲ ಎಂಬ ಸಂಗತಿಯನ್ನು ಗುರುತಿಸಿರುವುದು ಒಂದು ಎಲ್ಲರನ್ನೂ ಒಳಗೊಳ್ಳುವ ಭಾರತದ ಕಮ್ಯುನಿಸ್ಟ್ ಕಣ್ಣೋಟದ ಅವಿಭಾಜ್ಯ ಭಾಗವೇ ಆಗಿದೆ. ಭಾರತದ ವಾಸ್ತವತೆಯಲ್ಲಿ, ಇವು ಸ್ವಭಾವತಃ ಅವಿಭಾಜ್ಯವಾಗಿರುವಂತವುಗಳು. ಭಾರತದ ವೈವಿಧ್ಯತೆಯ ಎಲ್ಲ ಗುಣ ವಿಶೇಷಗಳ ರಕ್ಷಣೆ ಮತ್ತು ಅವುಗಳಿಗೆ ಸಮಾನತೆ, ನಿರ್ದಿಷ್ಟವಾಗಿ, ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಪ್ರಜಾಪ್ರಭುತ್ವದ ಅನಿವಾರ್ಯ ಅಂಶ. ಅದೇ ರೀತಿಯಲ್ಲಿ, ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳಿಲ್ಲದೆ ಜಾತ್ಯತೀತತೆಗೆ ತಾಳಿಕೆಯಿರದು. ನಿಜ ಹೇಳಬೇಕೆಂದರೆ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಯ ಸಾಂವಿಧಾನಿಕ ಖಾತ್ರಿಯನ್ನು ಒಂದು ಚೈತನ್ಯಶೀಲ ಪ್ರಜಾಪ್ರಭುತ್ವವಿಲ್ಲದೆ ಸ್ಥಾಪಿಸಲು ಸಾಧ್ಯವಿಲ್ಲ. ಕಮ್ಯುನಿಸ್ಟರು, ಹಿಂದೆಯೂ ಭಾರತದಲ್ಲಿ ಇಂತಹ ಒಂದು ಜಾತ್ಯತೀತ ಪ್ರಜಾಪ್ರಭುತ್ವವನ್ನು ಅತ್ಯಂತ ದೃಢಚಿತ್ತದಿಂದ ಎತ್ತಿ ಹಿಡಿದಿದ್ದಾರೆ ಮತ್ತು ಇಂದೂ ಕೂಡ ಎತ್ತಿ ಹಿಡಿಯುತ್ತಿದ್ದಾರೆ.

ನಿಜ ಹೇಳಬೇಕೆಂದರೆ, 1920ರಷ್ಟು ಹಿಂದೆಯೇ, ಸಿಪಿಐ ಸ್ಥಾಪನೆಯಾದ ಕೆಲವೇ ಸಮಯದಲ್ಲಿ, ಎಂ.ಎನ್.ರಾಯ್ ಆಗ ಕೋಮು ಗಲಭೆಗಳು ಉತ್ಕಟಗೊಂಡಿದ್ದ ಹಿನ್ನೆಲೆಯಲ್ಲಿ, ಕೋಮುವಾದಿ ವಿಭಜನೆಗಳಿಗೆ ಏಕೈಕ ಪತ್ಯೌಷಧಿ ಎಲ್ಲ ಜಾತಿಗಳು ಮತ್ತು ಸಮುದಾಯಗಳಿಗೆ ಸೇರಿದ ದುಡಿಯುವ ಜನಗಳ ವರ್ಗ ಐಕ್ಯತೆ ಎಂದು ಪಕ್ಷದ ಪರವಾಗಿ ಬರೆದಿದ್ದರು. ಕಮ್ಯುನಿಸ್ಟರ ಅಸ್ತಿತ್ವದ ಈ ಇಡೀ ಶತಮಾನದಾದ್ಯಂತ, ತಮ್ಮ ಕೆಲಸದಲ್ಲಿ ಈ ‘ಶ್ರಮಜೀವಿಗಳ ಐಕ್ಯತೆ’ಯನ್ನು ಬಲಪಡಿಸುವುದರ ಮೇಲೆ ಒತ್ತು ನೀಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ, 1920ರಲ್ಲಿ ಸ್ಥಾಪನೆಯಾದಂದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಪ್ರತಿಯೊಂದು ವಾರ್ಷಿಕ ಅಧಿವೇಶನದಲ್ಲಿ, ಸಿಪಿಐ ರಾಷ್ಟ್ರೀಯ ಆಂದೋಲನದ ಅಜೆಂಡಾದಲ್ಲಿ ಏನಿರಬೇಕು ಎಂದು ಒಂದು ಪ್ರಣಾಳಿಕೆಯನ್ನು ಸಲ್ಲಿಸುತ್ತಿತ್ತು (ಅಹಮದಾಬಾದ್, 1921; ಗಯಾ, 1922 ಮುಂತಾಗಿ)

ಇವುಗಳಲ್ಲಿ 1926ರ ಗುವಾಹಾಟಿ ಅಧಿವೇಶನದಲ್ಲಿ ಸಲ್ಲಿಸಿದ ಪ್ರಣಾಳಿಕೆ, ನಿರ್ದಿಷ್ಟವಾಗಿ ಆಗ ನಡೆಯುತ್ತಿದ್ದ ಕೋಮು ಘರ್ಷಣೆಗಳ ಬಗ್ಗೆ ಹೇಳಿತ್ತು. ಶ್ರಮಜೀವಿಗಳ ಐಕ್ಯತೆಯನ್ನು ಬಲಪಡಿಸಬೇಕು ಎಂದು ಕಾಂಗ್ರೆಸ್ ಅಧಿವೇಶನವನ್ನು ಆಗ್ರಹಿಸುತ್ತ ಪ್ರಣಾಳಿಕೆ ಹೀಗೆ ಹೇಳಿತ್ತು:

ಕಳೆದ ಕೆಲವು ವರ್ಷಗಳಿಂದ ದೇಶವನ್ನು ವಿಧ್ವಂಸಗೊಳಿಸುತ್ತಿರುವ ಕೋಮು ಘರ್ಷಣೆಗಳಿಂದ ಹಲವರು ಧೈರ್ಯಗೆಟ್ಟಿರಬಹುದು. ಖಂಡಿತವಾಗಿಯೂ ಇದು ಒಂದು ಧೈರ್ಯಗೆಡಿಸುವ ವಿದ್ಯಮಾನವೇ. ಆದರೆ ಇಲ್ಲಿಯೂ ಕೂಡ ಒಂದು ಜನತೆಯ ಪಕ್ಷ ಇತ್ಯರ್ಥ ಕಂಡುಕೊಳ್ಳುತ್ತದೆ. ಮೇಲ್ವರ್ಗಗಳು ಹಕ್ಕುಗಳು ಮತ್ತು ವಿಶೇಷ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದರೆ, ಎರಡೂ ಕೋಮುಗಳ ಜನಸಮುದಾಯಗಳ ನಡುವೆ ಅತ್ಯಗತ್ಯವಾದೊಂದು ಸಮಾನ ಅಂಶವಿದೆ. ಅದೆಂದರೆ  ಶೋಷಣೆ. ಹಿಂದು ಮತ್ತು ಮುಸ್ಲಿಂ ಕಾರ್ಮಿಕರು ಒಂದೇ ಕಾರ್ಖಾನೆಯಲ್ಲಿ ಬೆವರು ಸುರಿಸುತ್ತಾರೆ. ಹಿಂದು ಮತ್ತು ಮುಸ್ಲಿಂ ರೈತರು ಪಕ್ಕ-ಪಕ್ಕದಲ್ಲೇ ಭೂಮಿಯ ಮೇಲೆ ಶ್ರಮಿಸುತ್ತಾರೆ, ಭೂಮಾಲಕ, ಲೇವಾದೇವಿಗಾರ, ಮತ್ತು ಸಾಮ್ರಾಜ್ಯಶಾಹಿಗಳ ಏಜೆಂಟರಿAದ ಸಮಾನವಾಗಿ ದರೋಡೆ ಗೊಳಗಾಗುತ್ತಾರೆ. ಮುಸ್ಲಿಂ ಕಾರ್ಮಿಕನಿಗೆ ಆತನ ಧರ್ಮದವನೇ ಮಾಲಕನಾಗಿದ್ದಾಗ ಹೆಚ್ಚು ಸಂಬಳವೇನೂ ಕೊಡುವುದಿಲ್ಲ. ಅಥವ ಹಿಂದು ಭೂಮಾಲಕ ತನ್ನ ಹಿಂದು ಗೇಣಿದಾರನಿಂದ ಮುಸ್ಲಿಂ ಗೇಣಿದಾರನಿಗಿಂತ ಕಡಿಮೆ ಗೇಣಿಯನ್ನೇನೂ ವಸೂಲಿ ಮಾಡುವುದಿಲ್ಲ.

“ಇದೇ ನಿಯಮ ಶೋಷಿತ ಮಧ್ಯಮ ವರ್ಗಗಳಿಗೂ(ಸಣ್ಣ ಬುದ್ಧಿ ಜೀವಿಗಳು, ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು ಇತ್ಯಾದಿ) ಅನ್ವಯಿಸುತ್ತದೆ. ಶೋಷಣೆಯ ಸಮಾನ ಬಂಧದಿAದ ಒಂದಾಗಿರುವ ಸಮಸ್ತ ಜನತೆಯ 98ಶೇ. ಜನಗಳಿಗೆ ಕೋಮುವಾದಿ ಘರ್ಷಣೆಗಳಲ್ಲಿ ತೊಡಗಲು ಕಾರಣಗಳೇನೂ ಇಲ್ಲ. ಅವರು ತಮ್ಮ ಆರ್ಥಿಕ ಹಿತಗಳ ಬಗ್ಗೆ ಪ್ರಜ್ಞಾಶೀಲರಾಗುವಂತೆ ಮಾಡಿ, ತಮ್ಮ ಸಮಾನ ಶತ್ರುವಿನ ವಿರುದ್ಧ, ಶೋಷಣೆಯ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ಧೀರ ನೇತೃತ್ವ ಕೊಡಿ. ಆಗ ಕೋಮುವಾದಿ ಘರ್ಷಣೆಯನ್ನು ಪ್ರಚೋದಿಸುವ ಕಪಟ ಧೋರಣೆಯ ಬುಡವೇ ಕಿತ್ತುಕೊಂಡು ಹೋಗುತ್ತದೆ. ನಿಜ, ಇದನ್ನು ನಾಳೆ ಬೆಳಗಾಗುವುದರ ಒಳಗೆ ಮಾಡಲು ಸಾಧ್ಯವಿಲ್ಲ. ಆದರೆ ರಾಷ್ಟೀಯ ಆಂದೋಲನದ ಜೀವ ತಿನ್ನುತ್ತಿರುವ ಕೋಮುವಾದದ ಕ್ಯಾನ್ಸರ್‌ಗೆ ಬೇರೆ ಯಾವ ಮದ್ದೂ ಇಲ್ಲ”

ಜಾತ್ಯತೀತತೆ

ಜಾತ್ಯತೀತತೆ ಎಂದರೆ ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಿಸುವುದು-ಇದು ಕಮ್ಯುನಿಸ್ಟರ ನೀತಿಬದ್ಧ ನಿಲುವು. ಇದರ ಅರ್ಥ, ಪ್ರಭುತ್ವ ಒಬ್ಬ ವ್ಯಕ್ತಿಯ ನಂಬಿಕೆಯ ಸ್ವಾತಂತ್ರ್ಯವನ್ನು ದೃಢವಾಗಿ ರಕ್ಷಿಸುತ್ತದೆ, ಆದರೆ ತಾನು ಯಾವುದೇ ಧರ್ಮವನ್ನು ಪ್ರತಿಪಾದಿಸುವುದಿಲ್ಲ ಅಥವ ಆದ್ಯತೆ ನೀಡುವುದಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದನ್ನು ಕಾರ್ಯತಃ ಎಲ್ಲ ಧರ್ಮಗಳಿಗೆ ಸಮಾನತೆ ಎಂಬ ನಿರೂಪಣೆಗೆ ಇಳಿಸಲಾಗಿದೆ. ಇದರಲ್ಲೇ ಬಹುಸಂಖ್ಯಾತರ ಧಾರ್ಮಿಕ ನಂಬಿಕೆಗಳ ಪರವಾದ ಪಕ್ಷಪಾತ ಅಡಕಗೊಂಡಿದೆ. ನಿಜವಾಗಿ, ಇಂದು ಇದು ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳ ಅಪಪ್ರಚಾರಕ್ಕೆ ಗ್ರಾಸ ಒದಗಿಸುತ್ತದೆ.

ಆದ್ದರಿಂದ ಕಮ್ಯುನಿಸ್ಟರಿಗೆ, ಜಾತ್ಯತಿತತೆಯ ಅಥವ ಜಾತ್ಯತೀತ ಪ್ರಜಾಪ್ರಭುತ್ವದ ರಕ್ಷಣೆ ಎಂಬುದು ಮಹತ್ವ ಪಡೆದಿರುವುದು ಭಾರತದ ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರವಾದದ ರಕ್ಷಣೆಗೆ, ಆಮೂಲಕ ಭಾರತೀಯ ಸಂವಿಧಾನದ ರಕ್ಷಣೆಗೆ ಮಾತ್ರವೇ ಅಲ್ಲ; ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಮತ್ತು ಸಮಾನತೆಯ ಸಂವಿಧಾನಿಕ ಖಾತ್ರಿಯನ್ನು, ಪ್ರಜಾಪ್ರಭುತ್ವದ ಸಾರವನ್ನು ಈಡೇರಿಸಿಕೊಳ್ಳಲು ಮಾತ್ರವೇ ಅಲ್ಲ; ಅತ್ಯಂತ ಶೋಷಿತ ವರ್ಗಗಳ ನಡುವೆ ವರ್ಗ ಐಕ್ಯತೆಯನ್ನು ಬಲಪಡಿಸಿ, ಸಮಾಜವಾದದ ಗುರಿಸಾಧನೆಯತ್ತ ಮುನ್ನಡೆಯಲಿಕ್ಕಾಗಿಯೂ ಅಷ್ಟೇ ಮಹತ್ವಪೂರ್ಣವಾಗಿದೆ. ಕೋಮುವಾದ ಈ ಐಕ್ಯತೆಯನ್ನೇ ಛಿದ್ರಗೊಳಿಸುತ್ತದೆ ಮತ್ತು ಭಾರತದ ಚರಿತ್ರೆಯನ್ನು ಹಿಂದಕ್ಕೆ ನಡೆಯುವ, ಹಿಂದುಳಿಕೆಯ ಒಂದು ದಾರಿಯತ್ತ ಒಯ್ಯುತ್ತದೆ.

ಜಾತ್ಯತೀತತೆಯ ರಕ್ಷಣೆಯ ಹೋರಾಟದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯಿಂದ ಭಾರತದಲ್ಲಿ ಜಾತ್ಯತೀತ  ಪ್ರಜಾಪ್ರಭುತ್ವಕ್ಕೆ ಬೆದರಿಕೆಯನ್ನು ವಿಶ್ಲೇಷಿಸುತ್ತ ಸಿಪಿಐ(ಎಂ) ಪಾರ್ಟಿ ಕಾರ್ಯಕ್ರಮ, 2000 ಹೀಗೆ ಹೇಳಿತ್ತು: “ಕೋಮುವಾದಿ ಮತ್ತು ಫ್ಯಾಸಿಸ್ಟ್ ಮಾದರಿಯ ಆರ್.ಎಸ್.ಎಸ್. ನೇತೃತ್ವದ ಕೂಟದ ಬೆಳವಣಿಗೆಯೊಂದಿಗೆ ಮತ್ತು ಕೇಂದ್ರದಲ್ಲಿ ಅದು ಅಧಿಕಾರ ವಹಿಸುವುದರೊಂದಿಗೆ ಜಾತ್ಯತೀತತೆಯ ತಳಪಾಯಕ್ಕೆ ಆಪತ್ತು ಬಂದಿದೆ. ಪ್ರಭುತ್ವದ ಸಂಸ್ಥೆಗಳು, ಆಡಳಿತ, ಶಿಕ್ಷಣ ವ್ಯವಸ್ಥೆ ಮತ್ತು ಮಾಧ್ಯಮವನ್ನು ಕೋಮುಗ್ರಸ್ತಗೊಳಿಸಲು ವ್ಯವಸ್ಥಿತ ಪ್ರಯತ್ನಗಳು ಸಾಗಿವೆ.”(ಪರಿಚ್ಛೇದ 5.7)

ಮುಂದುವರೆದು ಪಕದ್ಷ ಕಾರ್ಯಭಾರವನ್ನು ಕಾರ್ಯಕ್ರಮ ಹೀಗೆ ಗಮನಿಸುತ್ತದೆ: “ಧಾರ್ಮಿಕ ಕೋಮುವಾದದ ಆಧಾರದಲ್ಲಿ, ಫ್ಯಾಸಿಸ್ಟ್ ಪ್ರವೃತ್ತಿಗಳು ನೆಲೆ ಪಡೆದುಕೊಳ್ಳುವ ಅಪಾಯದ ವಿರುದ್ಧ ಎಲ್ಲ ಮಟ್ಟಗಳಲ್ಲೂ ದೃಢವಾಗಿ ಹೋರಾಡಬೇಕು”(ಪರಿಚ್ಛೇದ 5.8)

ಭಾರತದ ಸಂವಿಧಾನಿಕ ವ್ಯವಸ್ಥೆಗೆ ಸರಕಾರದಲ್ಲಿರುವ ಬಿಜೆಪಿ ಒಡ್ಡುವ ಗಂಭೀರ ಅಪಾಯಗಳನ್ನು ಗಮನಿಸುತ್ತ ಪಕ್ಷದ ಕಾರ್ಯಕ್ರಮ ಹೀಗೆ ಹೇಳುತ್ತದೆ: “ಭಾರತೀಯ ಜನತಾಪಕ್ಷವು ಇತರ ಧರ್ಮಗಳ ಬಗೆಗಿನ ದ್ವೇಷ, ಅಸಹನೆ ಮತ್ತು ಅತಿರಾಷ್ಟ್ರೀಯವಾದಿ ಅಂಧತ್ವದ ಮೇಲೆ ಆಧರಿಸಿದ, ಪ್ರತಿಗಾಮಿ ಹೂರಣದ ವಿಭಜಕ ಹಾಗೂ ಕೋಮುವಾದಿ ವೇದಿಕೆಯನ್ನು ಹೊಂದಿರುವ ಪ್ರತಿಗಾಮಿ ಪಕ್ಷವಾಗಿದೆ. ಫ್ಯಾಸಿಸ್ಟ್ ಸ್ವರೂಪದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಿಜೆಪಿಗೆ ಮಾರ್ಗದರ್ಶನ ಮಾಡುತ್ತಾ ಅದರ ಮೇಲೆ ಪ್ರಾಬಲ್ಯ ಹೊಂದಿರುವುದರಿಂದ ಅದು ಸಾಧಾರಣ ಬಂಡವಾಳಶಾಹಿ ಪಕ್ಷವಲ್ಲ. ಬಿಜೆಪಿ ಅಧಿಕಾರದಲ್ಲಿರುವಾಗ ಆರೆಸ್ಸೆಸ್‌ಗೆ ಪ್ರಭುತ್ವಾಧಿಕಾರದ ಸಾಧನಗಳೊಂದಿಗೆ ಮತ್ತು ಪ್ರಭುತ್ವದ ಯಂತ್ರದೊಂದಿಗೆ ಸಂಪರ್ಕಾವಕಾಶ ದೊರೆಯುತ್ತದೆ. ಹಿಂದುತ್ವ ಸಿದ್ಧಾಂತವು ಪುನರುತ್ಥಾನವಾದವನ್ನು ಪ್ರೋತ್ಸಾಹಿಸುತ್ತದೆ ಮತ್ತು ಒಂದು ಹಿಂದೂರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶದಿಂದ ಭಾರತದ ಬಹುಮುಖಿ ಸಂಸ್ಕೃತಿಯನ್ನು ತಿರಸ್ಕರಿಸುತ್ತದೆ.” (ಪರಿಚ್ಛೇದ 7.14)

ಕಾರ್ಪೊರೇಟ್-ಕೋಮುವಾದಿ ಸಖ್ಯತೆ:

ಪ್ರಸಕ್ತ ಸಂದರ್ಭದಲ್ಲಿ, 2019ರ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಗಳನ್ನು ವಿಶ್ಲೇಷಿಸುತ್ತ ಸಿಪಿಐ(ಎಂ) ಕೇಂದ್ರ ಸಮಿತಿ, ಭಾರತೀಯ ಆಳುವ ವರ್ಗಗಳು ಈಗ ಒಂದು ಕಾರ್ಪೊರೇಟ್ ಕೋಮುವಾಗಿ ಸಖ್ಯತೆಯನ್ನು ಗಟ್ಟಿಗೊಳಿಸಿವೆ, ಇದರಿಂದಾಗಿ ಅವು ಹೆಚ್ಚುಹೆಚ್ಚಾಗಿ ಸಾಮ್ರಾಜ್ಯಶಾಹಿಯ ಅಡಿಯಾಳು ಮಿತ್ರರಾಗುತ್ತಿವೆ ಎಂದು ಗಮನಿಸಿತ್ತು. ಇದನ್ನು ಸ್ಪಷ್ಟವಾಗಿ, ಕೇಂದ್ರ ಸಮಿತಿ ನಿರ್ಣಯಗಳಲ್ಲಿ ಗಮನಿಸಿರುವಂತೆ, ನಂತರದ ಬೆಳವಣಿಗೆಗಳು ಸಾಬೀತು ಪಡಿಸಿವೆ.

ಕೊವಿಡ್ ಮಹಾಸೋಂಕು ಮತ್ತು ಲಾಕ್‌ಡೌನ್‌ಗಳಿಂದಾಗಿ ಜನಗಳ ಚಟುವಟಿಕೆಗಳ ಮೇಲೆ ಹೇರಿದ ನಿರ್ಬಂಧಗಳನ್ನು ದುರುಪಯೋಗ ಪಡಿಸಿಕೊಂಡು ಹೇಗೆ ಈ ಆರೆಸ್ಸೆಸ್/ಬಿಜೆಪಿ/ಮೋದಿ ನೇತೃತ್ವದ ಸರಕಾರ ಭಾರತೀಯ ಸಂವಿಧಾನ ವ್ಯವಸ್ಥೆಯನ್ನು ಸಮಸ್ತವಾಗಿ ಧ್ವಂಸ ಮಾಡುವ ಗುರಿಯಿಂದ ಒಂದು ದಾಳಿಯನ್ನು ಮಾಡುತ್ತಿದೆ ಎಂಬುದನ್ನು ಪೊಲಿಟ್‌ಬ್ಯುರೊ ಮತ್ತು ಕೇಂದ್ರ ಸಮಿತಿ ವರದಿಗಳಲ್ಲಿ ಗಮನಿಸಲಾಗಿದೆ. ನವ-ಉದಾರವಾದಿ ಸುಧಾರಣೆಗಳ ಉಗ್ರ ಅನುಸರಣೆ-ದೊಡ್ಡ ಪ್ರಮಾಣದಲ್ಲಿ ಖಾಸಗೀಕರಣ, ರಾಷ್ಟ್ರೀಯ ಆಸ್ತಿಗಳ ಲೂಟಿ, ನಮ್ಮ ಕೃಷಿಯನ್ನು ಒತ್ತೆಯಿಡುವ ಹೊಸ ಕೃಷಿ ಮಸೂದೆಗಳು, ಇವುಗಳ ಜೊತೆಗೆ ಕಾರ್ಮಿಕ ವರ್ಗ, ರೈತಾಪಿಗಳು ಮತ್ತು ದುಡಿಯುವ ಜನಗಳ ಹಕ್ಕುಗಳ ಮೇಲೆ ಕ್ರೂರ ಆಕ್ರಮಣಗಳು; ಕೋಮುವಾದಿ ಧ್ರುವೀಕರಣವನ್ನು ಘೋರವಾಗಿ ತೀಕ್ಷ್ಣಗೊಳಿಸುತ್ತಿರುವುದು ಮತ್ತು ಮುಸ್ಲಿಮರ ಮೇಲೆ ಗುರಿಯಿಡುವುದು; ಭಿನ್ನಮತವನ್ನು ‘ರಾಷ್ಟ್ರ-ವಿರೋಧಿ’ ಎಂದು ಪರಿಗಣಿಸಿ ಕರಾಳ ಕಾನೂನುಗಳ ಅಡಿಯಲ್ಲಿ ಬ್ಯಾಪಕ ಬಂಧನಗಳು, ನಾಗರಿಕ ಸ್ವಾತಂತ್ರ್ಯಗಳು, ಮಾನವ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಹಲ್ಲೆಗಳು ಇತ್ಯಾದಿ ಇತ್ಯಾದಿ. ಈ ಎಡೆಬಿಡದ ಪ್ರಹಾರಗಳನ್ನು ಜನತೆಯ ಐಕ್ಯ ಸಾಮರ್ಥ್ಯವನ್ನು ಅಣಿನೆರೆಸುವ ಮೂಲಕ ಪ್ರತಿರೋಧಿಸಬೇಕು.

ಇದಕ್ಕೆ ಕೋಮುವಾದಿ ಶಕ್ತಿಗಳು ಮತ್ತು ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ವಿರುದ್ಧ ಹೋರಾಟಗಳು ಎರಡು ಪ್ರತ್ಯೇಕ ಭಾಗಗಳಲ್ಲ, ಬದಲಿಗೆ ದೇಶವನ್ನು ರಕ್ಷಿಸುವ ಮತ್ತು ಶ್ರಮಜೀವಿ ವರ್ಗಗಳ ಹಿತಸಾಧನೆಯ ಭಾರತೀಯ ಜನತೆಯ ಒಂದು ಸಮಗ್ರ ಹೋರಾಟದ ಭಾಗ ಎಂಬುದನ್ನು ಗುರುತಿಸಬೇಕಾಗುತ್ತದೆ. ಇಂದಿನ ಸಂದರ್ಭದಲ್ಲಿ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟ ಭಾರತೀಯ ಸಂವಿಧಾನವನ್ನು ರಕ್ಷಿಸುವ ಮತ್ತು ಅದು ಜನತೆಗೆ ನೀಡಿರುವ ಖಾತ್ರಿಗಳನ್ನು ರಕ್ಷಿಸುವುದಷ್ಟೇ ಅಲ್ಲ, ಅವುಗಳ ಈಡೇರಿಕೆಯೂ ಆಗುವಂತೆ ಖಾತ್ರಿ ಪಡಿಸುವ ಹೋರಾಟದ ಅವಿಭಾಜ್ಯ ಅಂಗ. ಒಂದು ವರ್ಷದ ಕಾಲ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆಯ ಶತಮಾನೋತ್ಸವ ಆಚರಣೆಗಳು ಭಾರತ ಮತ್ತು ಅದರ ದುಡಿಯುವ ಜನತೆಯ ರಕ್ಷಣೆಯ ಹೋರಾಟವನ್ನು ಬಲಗೊಳಿಸುವ ನಮ್ಮ ದೃಢನಿರ್ಧಾರವನ್ನು ದ್ವಿಗುಣಗೊಳಿಸಬೇಕು.

ಇದೊಂದು ದುರ್ಗಮ ಹೋರಾಟ, ಏಕೆಂದರೆ ಈ ಮೋದಿ ಸರಕಾರ ಭಾರತವನ್ನು ಅಮೆರಿಕನ್ ಸಾಮ್ರಾಜ್ಯಶಾಹಿಯ ‘ಸೇವಕಿ’ಯಾಗಿ ಪರಿವರ್ತಿಸುತ್ತಿದೆ. ಈ ಬಹುಮುಖೀ ಸವಾಲುಗಳನ್ನು ಎದುರಿಸಿ ಸೋಲಿಸುವುದು ನಿಮ್ಮ ಕ್ರಾಂತಿಕಾರಿ ಗುರಿಸಾದನೆಯತ್ತ ಸಾಗುವಲ್ಲಿ ಸದ್ಯದ ಆವಶ್ಯಕತೆಯಾಗಿದೆ.

ಸಿಪಿಐ ಸ್ಥಾಪನೆಯಾದ ಕೆಲವೇ ಸಮಯದಲ್ಲಿ, ಎಂ.ಎನ್.ರಾಯ್ ಆಗ ಕೋಮು ಗಲಭೆಗಳು ಉತ್ಕಟಗೊಂಡಿದ್ದ ಹಿನ್ನೆಲೆಯಲ್ಲಿ, ಕೋಮುವಾದಿ ವಿಭಜನೆಗಳಿಗೆ ಏಕೈಕ ಪತ್ಯೌಷಧಿ ಎಲ್ಲ ಜಾತಿಗಳು ಮತ್ತು ಸಮುದಾಯಗಳಿಗೆ ಸೇರಿದ ದುಡಿಯುವ ಜನಗಳ ವರ್ಗ ಐಕ್ಯತೆ ಎಂದು ಪಕ್ಷದ ಪರವಾಗಿ ಬರೆದಿದ್ದರು.  ಕಮ್ಯುನಿಸ್ಟರ ಅಸ್ತಿತ್ವದ ಈ ಇಡೀ ಶತಮಾನದಾದ್ಯಂತ, ತಮ್ಮ ಕೆಲಸದಲ್ಲಿ ಈ ‘ಶ್ರಮಜೀವಿಗಳ ಐಕ್ಯತೆ’ಯನ್ನು ಬಲಪಡಿಸುವುದರ ಮೇಲೆ ಒತ್ತು ನೀಡಿದ್ದಾರೆ.

1920ರಲ್ಲಿ ಸ್ಥಾಪನೆಯಾದಂದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಪ್ರತಿಯೊಂದು ವಾರ್ಷಿಕ ಅಧಿವೇಶನದಲ್ಲಿ, ಸಿಪಿಐ./ವರ್ಕರ್ಸ್ ಅಂಡ್ ಪೆಸಂಟ್ಸ್ ಪಾರ್ಟಿ ರಾಷ್ಟ್ರೀಯ ಆಂದೋಲನದ ಅಜೆಂಡಾದಲ್ಲಿ ಏರಬೇಕು ಎಂದು ಒಂದು ಪ್ರಣಾಳಿಕೆಯನ್ನು ಸಲ್ಲಿಸುತ್ತಿತ್ತು.

ಪಕ್ಕದಲ್ಲಿರುವುದು 1927ರ ಮದ್ರಾಸ್ ಅಧಿವೇಶನಕ್ಕೆ  ಒಂದು ರಾಷ್ಟ್ರೀಯ ಸಂವಿಧಾನ ಸಭೆ, ವಯಸ್ಕ ಮತದಾನ ಮತ್ತು ಪೂರ್ಣ ಸ್ವಾತಂತ್ರ್ಯ ಕುರಿತ ಪ್ರಣಾಳಿಕೆ.

Leave a Reply

Your email address will not be published. Required fields are marked *