ಡಿಜಿಟಲ್ ಸುದ್ದಿ ಸಂಸ್ಥೆಯಾದ ನ್ಯೂಸ್ಕ್ಲಿಕ್ ನ ಕಚೇರಿ ಮತ್ತು ಅದರ ಸಂಪಾದಕರು ಹಾಗೂ ಮಾಲಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿ ನಡೆಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ.
ಈ ಇ.ಡಿ. ಕಾರ್ಯಾಚರಣೆ ಒಂದು ಸ್ವತಂತ್ರ ಸುದ್ದಿ ತಾಣವನ್ನು ಬೆದರಿಸುವ ಮತ್ತು ದಮನ ಮಾಡುವ ಒಂದು ನಾಚಿಕೆಗೆಟ್ಟ ಪ್ರಯತ್ನ. ನ್ಯೂಸ್ಕ್ಲಿಕ್ ರೈತರ ಹೋರಾಟಗಳಿಗೆ ವಿಶ್ವಾಸಾರ್ಹ ಮತ್ತು ವ್ಯಾಪಕ ಪ್ರಸಾರವನ್ನು ಕೊಡುತ್ತಿತ್ತು.
ಸ್ವತಂತ್ರ ಮಾಧ್ಯಮಗಳಿಗೆ ಕಿರುಕುಳ ಕೊಡಲು ಮತ್ತು ಅವುಗಳ ಬಾಯಿಮುಚ್ಚಿಸಲು ಮೋದಿ ಸರಕಾರ ಕೇಂದ್ರೀಯ ಏಜೆನ್ಸಿಗಳನ್ನು ಬಳಸುತ್ತಿದೆ ಎಂದಿರುವ ಪೊಲಿಟ್ಬ್ಯುರೊ ನ್ಯೂಸ್ಕ್ಲಿಕ್ ಮತ್ತು ಅದರ ನಿರ್ವಾಹಕರ ಮೇಲೆ ಹಗೆಸಾಧಕ ಕ್ರಮಗಳನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದೆ