ರಾಜ್ಯದಲ್ಲಿ ಮಾರ್ಪಾಟುಗೊಳ್ಳುತ್ತಿರುವ ಕೋವಿಡ್-19ರ ವೈರಾಣುವಿನಿಂದ ರಕ್ಷಿಸಲು ನಿಜಕಾಳಜಿಯನ್ನು ತೋರಿಸುವಂತೆ ಮುಖ್ಯಮಂತ್ರಿಗಳನ್ನು ಸಿಪಿಐ(ಎಂ) ಬಲವಾಗಿ ಒತ್ತಾಯಿಸಿದೆ.
ಬರೀ ಮಾರ್ಗ ಸೂಚಿಗಳಿಂದ ಬಾಯಿಪ್ರಚಾರದ ಮಾತುಗಳಿಂದ ಅದನ್ನು ತಡೆಯಲು ಮತ್ತು ಜನತೆಯನ್ನು ಹಾಗೂ ರಾಜ್ಯವನ್ನು ಆರ್ಥಿಕ ಸಂಕಷ್ಠದಿಂದ ರಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅಗತ್ಯ ನೆರವನ್ನು ಘೋಷಿಸಬೇಕೆಂದು ಒತ್ತಾಯಿಸುತ್ತದೆ.
ತಾವು ಖಾಸಗೀ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಒದಗಿಸಲು ನಿರ್ಧರಿಸುವ ವೇಳೆಗೆ ಹಲವಾರು ವೈರಾಣು ಬಾಧಿತರು ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ವೆಂಟಿಲೇಟರ್ ಗಳು ಇಲ್ಲದೇ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಮತ್ತು ಖಾಸಗೀ ಆಸ್ಪತ್ರೆಗಳ ಲಕ್ಷಾಂತರ ರೂಗಳ ಲೂಟಿಗೆ ಒಳಗಾಗಿದ್ದಾರೆ.
ದೈಹಿಕ ಅಂತರ ಕಾಯ್ದುಕೊಳ್ಳಲು ಹೇಳುತ್ತಾರೆ, ಸಾರಿಗೆ ವಾಹನಗಳಲ್ಲಿ ಕುರಿಗಳಂತೆ ತುಂಬುತ್ತಾರೆ.
ಜನತೆ ದುಡಿಯುವ ಪ್ರದೇಶಗಳಲ್ಲಿ ಸುರಕ್ಷತೆಯ ಕುರಿತಂತೆ ಆತಂಕಿತರಾಗಿದ್ದಾರೆ. ಮಕ್ಕಳಿಗೆ ಶಿಕ್ಷಣದ ಮೂಲಕ ಸಿಗುತ್ತಿದ್ದ ನೆರವು ಸಿಗುತ್ತಿಲ್ಲ.
ಸಿಪಿಐ(ಎಂ) ಕಳೆದ ವರ್ಷದಿಂದಲೇ ಅದಾಯ ತೆರಿಗೆ ವ್ಯಾಪ್ತಿಗೆ ಬಾರದ, ಪ್ರತಿ ಕುಟುಂಬದ ತಲಾ ವ್ಯಕ್ತಿಗೆ 10 ಕೇಜಿ ಆಹಾರ ಧಾನ್ಯ ಮತ್ತು ಮಾಸಿಕ 7,500 ರೂ ನೆರವು ನೀಡಬೇಕೆಂಬ ಒತ್ತಾಯವನ್ನು ಪರಿಗಣಿಸದೇ ಜನತೆಯನ್ನು ಸಂಕಷ್ಠಕ್ಕೆ ದೂಡಿದೆ. ಈಗಲಾದರೂ, ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವುದನ್ನು ನಿಲ್ಲಿಸಿ, ಜನತೆಗೆ ನೆರವಾಗುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.
ಯು.ಬಸವರಾಜ, ರಾಜ್ಯ ಸಮಿತಿ ಕಾರ್ಯದರ್ಶಿ
ಕೆ.ಶಂಕರ್, ರಾಜ್ಯ ಮುಖಂಡರು
ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ, ಉಡುಪಿ ಜಿಲ್ಲಾ ಸಮಿತಿ.