ಅಗಸ್ಟ್ 22, 1914
ಬ್ರಿಟಶರನ್ನು ಸಶಸ್ತ್ರ ಕ್ರಾಂತಿಯ ಮೂಲಕ ಓಡಿಸಿ ಭಾರತದ ಸ್ವಾತಂತ್ರ್ಯ ಸಾಧಿಸುವ ಉದ್ದೇಶದಿಂದ ಕೆನಡಾದ ವ್ಯಾಂಕೂವರ್ ನಗರದಿಂದ ಹಡಗು ಒಂದರಲ್ಲಿ ಮೊದಲ ತಂಡದ ಪ್ರಯಾಣ. ತಂಡದ ನಾಯಕ ಗದರ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಬಾ ಸೋಹನ್ ಸಿಂಗ್ ಭಕ್ನಾ, ಅಂತಿಮವಾಗಿ ಎಂಟು ಸಾವಿರ ಗದರ್ ಕ್ರಾಂತಿಕಾರಿಗಳು ಭಾರತ ಸೇರಿ ಕ್ರಾಂತಿಕಾರಿ ಚಟುವಟಿಕೆ ಆರಂಭ.
ಗದರ್ ಚಳುವಳಿ ದಮನ ಮಾಡಲು ಬ್ರಿಟಶ್ ಸರಕಾರ ಹಲವರನ್ನು ಬಂಧಿಸಿತು, ಹಲವರಿಗೆ ಗಲ್ಲು ಶಿಕ್ಷೆ ಆಯಿತು. ಹಲವರನ್ನು ಗಡಿಪಾರು ಮಾಡಲಾಯಿತು. ಗದರ್ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಕಾರಿ ತಿರುವು ಕೊಟ್ಟು ಮುಂದಿನ ಕ್ರಾಂತಿಕಾರಿಗಳಿಗೆ ಸ್ಫೂರ್ತಿ ಯಾಯಿತು. ಗದರ್ ವೀರರ ಒಂದು ತೊರೆ ಮುಂದೆ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸದಸ್ಯರಾದರು.