ಸೆಪ್ಟೆಂಬರ್ 11, 1973
ಸೆಪ್ಟೆಂಬರ್ 11 ಎಂದರೆ ಭೀಕರ ಭಯೋತ್ಪಾದನಾ ಕೃತ್ಯ (ನ್ಯೂಯಾರ್ಕ್ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ)ನಡೆದ ದಿನ ಅಂತ ಎಲ್ಲರಿಗೂ ಗೊತ್ತು. ಇನ್ನೊಂದು ಸೆಪ್ಟೆಂಬರ್ 11ರಂದು (1973) ಅಷ್ಟೇ ಭೀüಕರವಾದ ಭಯೋತ್ಪಾದನಾ ಕೃತ್ಯ ಚಿಲಿ ರಾಜಧಾನಿಯಲ್ಲಿ ನಡೆದಿತ್ತು.
ಜಗತ್ತಿನ ಮೊದಲ ಚುನಾಯಿತ ಸೋಶಲಿಸ್ಟ್ ಅಧ್ಯಕ್ಷ ಅಲೆಂದೆಯನ್ನು ಸಿಐಎ ಬೆಂಬಲಿತ ಚಿಲಿ ಮಿಲಿಟರಿ ಜನರಲ್ ಅಗಸ್ಟೊ ಪಿನೊಶೆ ಕೊಲೆ ಮಾಡಿಸಿದ. ಮಾತ್ರವಲ್ಲ ಚುನಾಯಿತ ಸರಕಾರ ಉರುಳಿಸಿ ಕ್ಷಿಪ್ರಕ್ರಾಂತಿ ನಡೆಸಿ ಬಂದ ಮಿಲಿಟರಿ ಸರ್ವಾಧಿಕಾರ ಸಾವಿರಾರು (ನ್ಯೂಯಾರ್ಕ್ ಕೃತ್ಯದಲ್ಲಿ ಸತ್ತವರಿಗಿಂತಲೂ ಹೆಚ್ಚು) ರಾಜಕೀಯ ಕಾರ್ಯಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಿ ಕೊಂದಿತು.
ಮಿಲಿಟರಿ ಸರ್ವಾಧಿಕಾರದ ಈ ಭಯೋತ್ಪಾದಕ ಕೊಲೆಗಳು ಹಲವು ವರ್ಷಗಳ ಕಾಲ ನಡೆದವು. ಪಿನೊಶೆ ಸರಕಾರಕ್ಕೆ ಅಮೆರಿಕನ್ ಸರಕಾರ ಎಲ್ಲಾ ಬೆಂಬಲ ನೀಡಿತು. ಅಲೆಂದೆ ಅಧ್ಯಕ್ಷರಾಗಿ ಕೆಲವೇ ದಿನಗಳಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಮತ್ತು ವಿಧೇಶಾಂಗ ಸಚಿವರು ಅವರ ಸರಕಾರವನ್ನು ಆದಷ್ಟು ಬೇಗನೆ ಅಗತ್ಯ ಬಿದ್ದರೆ ಅವರ ಕೊಲೆ ಮಾಡಿ ಉರುಳಿಸಬೇಕು ಎಂದು ನಿರ್ಧರಿಸಿದ್ದರು ಎಂದು ಆ ಮೇಲೆ ಗೊತ್ತಾಗಿದೆ.