ಗಣ್ಯ ಮಾನ್ಯ ಸಾಹಿತಿಗಳ ಜೀವ ಬೆದರಿಕೆಯ ಮೇಲೆ ಕ್ರಮವಹಿಸದ ರಾಜ್ಯ ಸರಕಾರ

ರಾಜ್ಯದ ಪ್ರಗತಿಪರ, ಗಣ್ಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಶ್ರೀಮತಿ ಬಿ.ಟಿ.ಲಲಿತಾನಾಯಕ್‌ ಮುಂತಾದ 64 ಜನ ಗಣ್ಯರನ್ನು ಅವಹೇಳನಕಾರಿಯಾಗಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ಸದರಿ ವಿಷಯಗಳಿಗೆ ಸಂಬಂದಿಸಿ ಜೀವ ಬೆದರಿಕೆ ಪತ್ರಗಳು ಬರುತ್ತಲೇ ಇವೆ.

ಆದಾಗಲೂ ಇಂತಹ ಗಣ್ಯರ ಕುರಿತ ಅವಹೇಳನಕಾರಿ ನಡೆ ಹಾಗೂ ಜೀವ ಬೆದರಿಕೆಯ ಗುಂಡಾಗಿರಿ ರಾಜಕೀಯವನ್ನು ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಮತ್ತು ಸರಕಾರ ಈ ಕುರಿತಂತೆ ಕಠಿಣವಾಗಿ ವ್ಯವಹರಿಸದಿರುವುದು ಇಂತಹ ಕೋಮುವಾದಿ ಪುಂಡು ಪೋಕರಿಗಳ ಚಟುವಟಿಕೆಗಳು ಹೆಚ್ಚಳಗೊಳ್ಳಲು ಕಾರಣವಾಗಿದೆ.

ಸರಕಾರದ ಈ ಪ್ರಾಣಾಂತಕ ಮೌನವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೇ ಬೆದರಿಕೆ ಪತ್ರದ ಮೂಲವನ್ನು ಭೇದಿಸಲು ಪರಿಣಾಮಕಾರಿ ತನಿಖೆಯನ್ನು ಕೈಗೊಂಡು, ಆರೋಪಿಗಳನ್ನು ಬಂಧಿಸಿ ಶಿಕ್ಷಿಸಲು ಅಗತ್ಯ ಕ್ರಮವಹಿಸಲು ಸಿಪಿಐ(ಎಂ) ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

ಇಂತಹ ನಾಡಿಗಾಗಿ ದುಡಿದ ಗಣ್ಯರಿಗೆ ಜೀವ ಬೆದರಿಕೆ ಒಡ್ಡುವುದನ್ನು ತಡೆಯಲು, ಕಠಿಣ ಕ್ರಮವಹಿಸುವಂತೆ ಒತ್ತಾಯಿಸಿದೆ.

ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *