ಭಾರತಕ್ಕೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಂದು ‘ಪ್ರಮುಖರಕ್ಷಣಾ ಭಾಗೀದಾರ’ ಎಂಬ ಸ್ಥಾನಮಾನವನ್ನು ಕೊಡುವ ಶರತ್ತುಗಳನ್ನು ಅಮೆರಿಕನ್ ರಕ್ಷಣಾ ಕಾರ್ಯದರ್ಶಿ ಅಸ್ಥೊನ್‍ಕಾರ್ಟರ್ ಭೇಟಿ ಕಾಲದಲ್ಲಿ ಅಂತಿಮಗೊಳಿಸಲಾಗಿದೆ. ಈ ಮೂಲಕ ಮೋದಿ ಸರಕಾರ ದೇಶವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳೊಂದಿಗೆ ಒಂದು ಮಿಲಿಟರಿ ಮೈತ್ರಿಯಲ್ಲಿ ಸಿಲುಕಿಸುವತ್ತ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.
ಒಂದು ‘ಪ್ರಮುಖ ರಕ್ಷಣಾ ಭಾಗೀದಾರ’ ಎಂಬ ಸ್ಥಾನಮಾನ ಆಸ್ಟ್ರೇಲಿಯ, ನೂಝಿಲೆಂಡ್, ಫಿಲಿಪೈನ್ಸ್, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಅದರ ನಿಕಟ ಮಿಲಿಟರಿ ಮಿತ್ರದೇಶಗಳಿಗೆ ಸಮನಾದದ್ದು.
ಈ ಹಿಂದಿನ ‘ಸಮರ ಸಾಗಾಣಿಕೆ ವಿನಿಮಯ ಒಪ್ಪಂದ ಮನವಿ ಪತ್ರ’ (ಎಲ್‍ಇಎಂಒಎ) ಬೆನ್ನಲ್ಲಿ ಬಂದಿರುವ ಈ ಹೊಸ ಒಪ್ಪಂದ ಭಾರತದ ಸಾರ್ವಭೌಮತೆ ಮತ್ತು ಸಾಮರಿಕ ಸ್ವಾಯತ್ತತೆಯನ್ನು ಮತ್ತಷ್ಟು ಅತಿಕ್ರಮಿಸುತ್ತದೆ, ಇದನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸುತ್ತದೆ ಎಂದು ಪೊಲಿಟ್‍ಬ್ಯುರೊ ಹೇಳಿಕೆ ತಿಳಿಸಿದೆ.
ಮೋದಿ ಸರಕಾರ ಈ ಒಪ್ಪಂದದ ಪೂರ್ಣಪಾಟವನ್ನು ಸಾರ್ವಜನಿಕಗೊಳಿಸಿಲ್ಲ. ಭಾರತ ಸಾರ್ವಭೌಮತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಜೀವನ್ಮರಣ ಪರಿಣಾಮ ಬೀರುವ ಈ ಒಪ್ಪಂದಗಳನ್ನು ಜನತೆಯ ಮುಂದಿಡಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.