ಸಿಪಿಐ ಎಂ ಕೇಂದ್ರ ಸಮಿತಿಯ 18 ನೇ ಲೋಕಸಭಾ ಚುನಾವಣೆಯ ಪರಾಮರ್ಶೆ

(ಜೂನ್ 28-30, 2024 ರ ವರೆಗೆ ದೆಹಲಿಯಲ್ಲಿ ನಡೆದ ಸಿಪಿಐ ಎಂ ನ ಕೇಂದ್ರ ಸಮಿತಿಯ ಸಭೆಯಲ್ಲಿ ಅಂಗೀಕಾರವಾದದ್ದು)

ಹದಿನೆಂಟನೇ ಲೋಕಸಭಾ ಚುನಾವಣೆಯ ಫಲಿತಾಂಶಗಳು ಬಿಜೆಪಿ ಗೆ ಗಣನೀಯ ಹಿನ್ನೆಡೆ ಆಗಿರುವುದನ್ನು ತೋರಿಸುತ್ತದೆ. ಭಾರತದ ಮತದಾರರು ಸಂವಿಧಾನದ ರಕ್ಷಣೆ, ಭಾರತ ಗಣತಂತ್ರದ ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಸ್ವರೂಪದ ರಕ್ಷಣೆಯನ್ನು ಪ್ರತಿಪಾದಿಸುತ್ತಾ ಮತ್ತು ಜನರ ಜೀವನೋಪಾಯದ ಪರಿಸ್ಥಿತಿಗಳು ತೀವ್ರವಾಗಿ  ಹದಗೆಡುತ್ತಿರುವುದರ ವಿರುದ್ಧ ತೀವ್ರ ಕಾಳಜಿಯನ್ನು ಅಭಿವ್ಯಕ್ತಿಸುತ್ತಾ, ಬಿಜೆಪಿ ಗೆ ಅದು 2014 ಮತ್ತು 2019 ರಲ್ಲಿ ಪಡೆದ ಬಹುಮತವನ್ನು ನಿರಾಕರಿಸಿ ತೀರ್ಪು ನೀಡಿದ್ದಾರೆ. ನಾಲ್ಕು ನೂರಕ್ಕೂ ಹೆಚ್ಚು ಲೋಕ ಸಭಾ ಸ್ಥಾನಗಳಿಗಾಗಿ ಪ್ರಚಾರ ಮಾಡಿದ ಬಿಜೆಪಿ ಈಗ 240 ಸ್ಥಾನಗಳು ಅಂದರೆ ಹಿಂದಿನ ಲೋಕಸಭೆಯಲ್ಲಿ ಅದಕ್ಕೆ ಇದ್ದ 303 ಸ್ಥಾನಗಳಿಗಿಂತ 63 ಸ್ಥಾನಗಳು ಕಡಿಮೆ ಇರುವ ಸ್ಥಿತಿಗೆ ದೂಡಲ್ಪಟ್ಟಿದೆ. ಇದು ಶೇ 20 ಕ್ಕೂ ಹೆಚ್ಚು ಕಡಿತ. ಬಹುಮತಕ್ಕೆ ಬಿಜೆಪಿ ಗೆ 32 ಸ್ಥಾನಗಳ ಕೊರತೆ ಇದೆ. ಹೀಗಿದ್ದರೂ ಅದರ ಮಿತ್ರ ಪಕ್ಷಗಳು 52 ಸ್ಥಾನಗಳನ್ನು ಗೆದ್ದಿದ್ದರಿಂದ ಅದರ ಕೂಟಕ್ಕೆ ಅಂದರೆ ಎನ್.ಡಿ.ಎ ಗೆ 292 ಸ್ಥಾನಗಳು ದೊರೆತು, ಬಹುಮತಕ್ಕಿಂತ 20 ಸ್ಥಾನಗಳು ಹೆಚ್ಚಿಗೆ ದೊರೆತಂತಾಗಿದೆ. ಬಿಜೆಪಿ ಯ ಮತಗಳ ಪಾಲಿನಲ್ಲಿ ಸ್ವಲ್ಪ ಕಡಿಮೆ ಯಾಗಿದ್ದು ಅದು ಶೇ.37.7 ರಿಂದ ಶೇ.36.56 ಕ್ಕೆ ಇಳಿದಿದೆ. ಆದ್ದರಿಂದ ಬಿಜೆಪಿ ಕಳೆದೊಂದು ದಶಕದಲ್ಲಿ ಅದು ಪೋಷಿಸಿದ ಕೋಮುವಾದಿ ಭಾವನೆಗಳನ್ನು ಗಟ್ಟಿಗೊಳಿಸಿ, ತನ್ನ ಕಾರ್ಪೊರೇಟ್- ಕೋಮುವಾದಿ ಕಾರ್ಯಸೂಚಿಯನ್ನು ಇನ್ನೂ ಆಳಗೊಳಿಸಿ, ಜನರ ಜೀವನೋಪಾಯಗಳ ಮೇಲೆ ಇನ್ನೂ ಹೆಚ್ಚಿನ ಹಲ್ಲೆಯನ್ನು ನವ ಉದಾರವಾದಿ ಸುಧಾರಣೆಗಳ ಮೂಲಕ ಮಾಡುವ ಸಾಧ್ಯತೆಯನ್ನು ಉಳಿಸಿಕೊಂಡಿದೆ.

ಇಂಡಿಯಾ ಕೂಟದ ಪಕ್ಷಗಳು ಸಂದರ್ಭದ ಅಗತ್ಯಗಳಿಗೆ ಸರಿಯಾಗಿ ಸ್ಪಂದಿಸಿ ಧೀರ ಹೋರಾಟಗಳ ಮೂಲಕ 232 ಸ್ಥಾನಗಳನ್ನು, ಅಂದರೆ ಬಹುಮತಕ್ಕಿಂತ 38 ಸ್ಥಾನ ಕಡಿಮೆ ಪಡೆದವು. ಚುನಾವಣಾ ಆಯೋಗದ ದತ್ತಾಂಶಗಳ ಪ್ರಕಾರ ಒಟ್ಟು ಚಲಾಯಿತ ಮತಗಳಲ್ಲಿ ಎನ್.ಡಿ.ಎ ಕೂಟದ ಅಂಗ ಪಕ್ಷಗಳು ಒಟ್ಟು ಶೇ 42.5 ಮತಗಳನ್ನು ಪಡೆದವು. ಇಂಡಿಯ ಕೂಟದ ಪಕ್ಷಗಳು ಶೇ 40.6 ಮತಗಳನ್ನು ಪಡೆದವು. ಎರಡು ಕೂಟಗಳ ನಡುವಿನ ಮತಗಳ ಅಂತರ ಶೇ 2 ಕ್ಕಿಂತ ಕಡಿಮೆ (ಶೇ 1.9 ರಷ್ಟು). ಇದು ಜನರ ಪ್ರತಿರೋಧ ಮತ್ತು ಶಕ್ತಿಯುತ ಹೋರಾಟಗಳಿಗೆ ಹೆಚ್ಚಿನ ಅವಕಾಶಗಳಿವೆ ಎಂಬುದನ್ನೂ ತೋರಿಸುತ್ತದೆ.

ಸಿಪಿಐ (ಎಂ) ನ ಚುನಾವಣಾ ಕಾರ್ಯತಂತ್ರ ನಡೆ

ಏಪ್ರಿಲ್ 2022 ರಲ್ಲಿ ಕಣ್ಣೂರಿನಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಇತರ ತೀರ್ಮಾನಗಳ ಜೊತೆಗೆ ಹೀಗೆ ತೀರ್ಮಾನಿಸಲಾಗಿತ್ತು: “ಈಗಿನ ಮುಖ್ಯ ಕೆಲಸವೆಂದರೆ ಬಿಜೆಪಿ ಯನ್ನು ಬೇರ್ಪಡಿಸಿ ಸೋಲಿಸಬೇಕು.ಇದಕ್ಕೆ ಸಿಪಿಐ (ಎಂ) ಮತ್ತು ಎಡ ಪಕ್ಷಗಳ ಸ್ವತಂತ್ರ ಬೆಳವಣಿಗೆ ಮತ್ತು  ಬಲಗಳ ಅವಶ್ಯಕತೆಗಳಿವೆ ಮತ್ತು ಆ ಮೂಲಕ ಜನರ ವರ್ಗ ಮತ್ತೂ ಸಾಮೂಹಿಕ ಧೀರ ಹೋರಾಟಗಳನ್ನು ಅಣಿನೆರೆಸಿ ರೂಪಿಸುವ ಅಗತ್ಯವಿದೆ.

ಪಕ್ಷ ಮತ್ತು ಎಡ ಶಕ್ತಿಗಳನ್ನು ಬಲಪಡಿಸಿ ಹಿಂದುತ್ವ ಕೋಮುವಾದಿ ಕಾರ್ಯಸೂಚಿ ಮತ್ತು ಕೋಮುವಾದಿ ಚಟುವಟಿಕೆಗಳಿಗೆ ಪ್ರತಿಯಾಗಿ ಹೋರಾಟಗಳನ್ನು ರೂಪಿಸುವ ಅವಶ್ಯಕತೆಯಿದೆ.  ಹಿಂದುತ್ವ ಕೋಮುವಾದಿಗಳ ವಿರುದ್ಧ ಅತ್ಯಂತ ವಿಶಾಲ ಪ್ರತಿರೋಧಕ್ಕೆ ಎಲ್ಲ ಜಾತ್ಯತೀತ ಶಕ್ತಿಗಳನ್ನು ಅಣಿನೆರೆಸಿ ಕೆಲಸ ಮಾಡುವ ತುರ್ತು ಪಕ್ಷಕ್ಕಿದೆ”.

ಈ ಗುರಿಯನ್ನು ಸಾಧಿಸಲು ಪಕ್ಷದ ರಾಜಕೀಯ ನಡೆ ಕೆಳಗಿನಂತೆ ಇರಬೇಕೆಂದು ತೀರ್ಮಾನಿಸಿತು: “ಚುನಾವಣೆ ನಡೆದಾಗ ಈ ರಾಜಕೀಯ ನಡೆಯ ಪ್ರಕಾರ ಬಿಜೆಪಿ-ವಿರೋಧಿ ಮತಗಳನ್ನು ಗರಿಷ್ಟಗೊಳಿಸಲು ಅವಶ್ಯವಾದ ಸೂಕ್ತ ಚುನಾವಣಾ ಕಾರ್ಯತಂತ್ರ ವನ್ನು ಅಂಗೀಕರಿಸಬೇಕು”.

ನಂತರದಲ್ಲಿ ಜನವರಿ 2024 ರಲ್ಲಿ ನಡೆದ ಕೇಂದ್ರ ಸಮಿತಿಯ ಸಭೆ ಹೀಗೆ ಹೇಳಿತು: “ಹಿಂದುತ್ವದ ಕೋಮುವಾದಿ ಕ್ರೋಢೀಕರಣದ ವಿರುದ್ಧ, ಜಾತ್ಯತೀತತೆ ಮತ್ತು ಪ್ರಜಾಸತ್ತಾತ್ಮಕ ತತ್ವ ಮತ್ತು ಮೌಲ್ಯಗಳಿಗೆ ಬದ್ಧರಾಗಿ ಹೋರಾಡಬೇಕು. ಜಾತ್ಯಾತೀತ ಶಕ್ತಿಗಳು ಒಟ್ಟು ಸೇರುವ ಪ್ರಕ್ರಿಯೆ, ಈ ನಿಲುವುಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿದ್ದು-ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸುವಂತಿರಬೇಕು. ಇಂಡಿಯಾ ಕೂಟವು 2024 ರ ಚುನಾವಣಾ ಸಮರವನ್ನು ಶಕ್ತಿಯುತವಾಗಿಸಲು ಅಂತಹ ನಡೆಯನ್ನು ತನ್ನದಾಗಿಸಬೇಕು.”

ಪಕ್ಷ ಹೊರತಂದ ಚುನಾವಣಾ ಪ್ರಣಾಳಿಕೆ ಮುಂಬರುವ ಚುನಾವಣೆಗಳಲ್ಲಿನ ಕಾರ್ಯವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿ, ಹೀಗೆ ಹೇಳಿತು “ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಭಾರತ ಗಣರಾಜ್ಯವನ್ನು ಜಾತ್ಯಾತೀತ ಪ್ರಜಾಸತ್ತಾತ್ಮಕ ಸ್ವಭಾವದಿಂದ, ಅತ್ಯಂತ ಅಸಹಿಷ್ಣು, ದ್ವೇಷ ಮತ್ತು ಹಿಂಸಾತ್ಮಕ ನಿರಂಕುಶ ಫ್ಯಾಸಿಸ್ಟ್ ವಾದಿ ಹಿಂದೂ ರಾಷ್ಟ್ರವಾಗಿ ರೂಪಾಂತರಿಸುವ ಬಿಜೆಪಿ ಯ ಕುಯುಕ್ತಿಯ ಪ್ರಯತ್ನಕ್ಕೆ ತಡೆ ಒಡ್ಡುವ ಮೂಲಕ, ಭಾರತವನ್ನು ಉಳಿಸಿಕೊಳ್ಳುವ ಪ್ರಶ್ನೆ ಪ್ರಧಾನ ಎಂಬುದರ ಬಗ್ಗೆ ನಮಗೆ ಯಾವುದೇ ಸಂಶಯವಿರಬಾರದು.”

ಅದು ಮುಂದುವರೆದು ಹೇಳಿತು “ಭಾರತದ ಪ್ರತಿಯೊಬ್ಬ ದೇಶಭಕ್ತ ಪ್ರಜೆಯೂ ದೇಶದ ಸಂವಿಧನಾತ್ಮಕ ವ್ಯವಸ್ಥೆಯ ಸುರಕ್ಷೆಗೆ ಶ್ರಮಿಸಬೇಕು. ತೀವ್ರವಾಗಿ ಹದಗೆಡುತ್ತಿರುವ ಜನರ ಜೀವನ ಪರಿಸ್ಥಿತಿಯನ್ನು ಗಮನಿಸಿ, ಬಂಟ(ಕ್ರೋನಿ)-ಬಂಡವಾಳಶಾಹಿಯ  ಇಂದಿನ ಧೋರಣೆಗಳನ್ನು ಬದಲಾಯಿಸಬೇಕು ಮತ್ತು ಕಾರ್ಪೊರೇಟ್-ಕೋಮುವಾದಿ ನಂಟನ್ನು ತೊಡೆದು ಹಾಕಬೇಕು.

“ಇದಕ್ಕೆ ಜನಪರವಾದ ಬದಲಿ ನೀತಿಗಳನ್ನು ಜಾರಿಗೊಳಿಸಬೇಕು. ಆರ್.ಎಸ್.ಎಸ್ ಮತ್ತು ಬಿಜೆಪಿ ಸರ್ಕಾರ ಮತ್ತು ಪ್ರಭುತ್ವದ ಸಾಧನಗಳ ಮೇಲೆ ತನ್ನ ನಿಯಂತ್ರಣ ಬಳಸಿ, ನಮ್ಮ ಸಾಂವಿಧಾನಿಕ ವ್ಯವಸ್ಥೆ, ನಮ್ಮ ಗಣರಾಜ್ಯದ ಮತ್ತು ಪ್ರಜಾಸತ್ತಾತ್ಮಕ ಸ್ವರೂಪದ ಮೇಲೆ ಪ್ರಹಾರ ನಡೆಸಿವೆ.

“ನಮ್ಮ ಸಾಂವಿಧಾನಿಕ ವ್ಯವಸ್ಥೆ ಮತ್ತು ಪ್ರಜಾಸತ್ತೆಯನ್ನು ಉಳಿಸಿಕೊಳ್ಳಲು ಸರ್ಕಾರ ಮತ್ತು ಪ್ರಭುತ್ವದ ಮೇಲಿನ  ಬಿಜೆಪಿಯ ಹತೋಟಿಯನ್ನು ತಪ್ಪಿಸಬೇಕು. ಹಾಗೆಯೇ ಸರ್ಕಾರದ ಮೇಲಿನ ಬಿಜೆಪಿಯ ಹತೋಟಿಯನ್ನು ತಪ್ಪಿಸಿದರೆ ಮಾತ್ರ ಜನಪರವಾದ ನೀತಿಗಳನ್ನು ಜಾರಿಗೊಳಿಸಲು ಸಾಧ್ಯ.

“ಆದ್ದರಿಂದ ನಮ್ಮ ಸಾಂವಿಧಾನಿಕ ಗಣರಾಜ್ಯದ ಪ್ರಜಾಸತ್ತೆಯನ್ನು ರಕ್ಷಿಸಿ ಅದರ ನೀತಿ ನಿರೂಪಣೆಯನ್ನು ಜನಪರಗೊಳಿಸಲು 18ನೇ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಕೂಟ ಪಕ್ಷಗಳನ್ನು ನಿರ್ಣಾಯಕವಾಗಿ ಸೋಲಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ, “ಸಿಪಿಐ (ಎಂ) ಭಾರತದ ಮತದಾರರಲ್ಲಿ ಕೆಳಗಿನ ಮನವಿಗಳನ್ನು ಮಾಡುತ್ತದೆ:

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಚುನಾವಣೆಯಲ್ಲಿ ಸೋಲಿಸಿ

ಲೋಕ ಸಭೆಯಲ್ಲಿ ಸಿಪಿಐ (ಎಂ) ಮತ್ತು ಎಡ ಪಕ್ಷಗಳ ಬಲವನ್ನು ಹೆಚ್ಚಿಸಿ

ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯಾತೀತ ಸರ್ಕಾರದ ರಚನೆಯನ್ನು ಖಚಿತಪಡಿಸಿ”

ಬಿಜೆಪಿ ಯ ಪ್ರಚಾರ

ಬಿಜೆಪಿ ಯ ಪ್ರಚಾರ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕೂಗಿನೊಂದಿಗೆ ಶುರುವಾಯಿತು. ಮೋದಿ ವ್ಯಕ್ತಿತ್ವವನ್ನು ಅತೀ ದೊಡ್ಡದಾಗಿಸಿ ಬಿಜೆಪಿ ಪ್ರಣಾಳಿಕೆಯನ್ನು ‘ಮೋದಿ ಗ್ಯಾರಂಟಿ’  ಎಂದು ಕರೆಯಲಾಯಿತು. ಆರ್.ಎಸ್.ಎಸ್ ನ ಸಕ್ರಿಯ ಬೆಂಬಲ ಮತ್ತು ಸಹಯೋಗದೊಂದಿಗೆ ಅದು ತನ್ನ ಶಸ್ತ್ರಾಗಾರದಲ್ಲಿರುವ  ಅತ್ಯಂತ ಕೋಮುವಾದಿ ಆಯುಧಗಳೊಂದಿಗೆ ಈ ಪ್ರಚಾರ ಪ್ರಾರಂಬಿಸಿತು. ಚುನಾವಣೆಯ ಮಧ್ಯಂತರದಲ್ಲಿ ಅಂದರೆ ಎರಡು ಚರಣಗಳ ಮತದಾನವಾದ ನಂತರ ಬಿಜೆಪಿ ವಿಕಸಿತ ಭಾರತದಂತಹ ಘೋಷಣೆಗಳನ್ನು ಬಿಟ್ಟು ಕೋಮುವಾದಿ ಧ್ರುವೀಕರಣ ಮಾಡಲು ಅತ್ಯಂತ ಹೀನ ದಾಳಿ ಪ್ರಾರಂಬಿಸಿತು. ಮೋದಿಯವರು ಈ ಹೀನ ದಾಳಿಯನ್ನು ತಾನೇ ಕೈಗೆತ್ತಿಕೊಂಡು ದೇಶದ ಮುಸಲ್ಮಾನರನ್ನು ಗುರಿ ಮಾಡಿ ಅತ್ಯಂತ ಕೆಟ್ಟ ಮತ್ತು ಕೋಮುವಾದಿ ರೀತಿಯಲ್ಲಿ ದಾಳಿ ನಡೆಸಿದರು.  

ಬಿಜೆಪಿ ಮತ್ತು ಮೋದಿಗೆ ದೊಡ್ಡ ಬಂಡವಾಳಶಾಹಿಯ ನೇತೃತ್ವದ  ದೇಶದ ಆಳುವ ವರ್ಗಗಳು ಇಂತಹ ದಾಳಿಯಲ್ಲಿ ಬೆಂಬಲ ನೀಡಿದವು. ದಶಕದುದ್ದದ ಮೋದಿ ಆಡಳಿತದಡಿ ಪೋಷಿಸಲಾದ ಕಾರ್ಪೊರೇಟ್ –ಕೋಮುವಾದಿ ನಂಟು, ಅತ್ಯಂತ ಹೀನ ಮತ್ತು ಆಕ್ರಮಣಶೀಲ ಬಂಟ-ಬಂಡವಾಳಶಾಹಿ, ನವ ಉದಾರವಾದಿ ಆರ್ಥಿಕ ಸುಧಾರಣೆಯ ಪಥಗಳ ಬೆಸೆಯುವಿಕೆಗೆ ಕುಮ್ಮಕ್ಕು ನೀಡಿತು. ಈಗ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ನವ ಉದಾರವಾದಿ ಕಾರ್ಯಸೂಚಿ ಮತ್ತು ಸಾಮ್ರಾಜ್ಯಶಾಹಿ-ಪರ ನೀತಿಗಳನ್ನು  ಮುಂದುವರೆಸುತ್ತದೆ.

ಸಮಾನ ಅವಕಾಶವನ್ನು ಬುಡಮೇಲು ಮಾಡಿದ್ದು

ಇವಲ್ಲದೇ ಕನಿಷ್ಠ ನಾಲ್ಕು ಇತರ ಅಂಶಗಳನ್ನು ಮೋದಿ ಸರ್ಕಾರ ಅಸಂವಿಧಾನಿಕವಾಗಿ ಅಳವಡಿಸಿಕೊಂಡಿದ್ದರಿಂದ ಎನ್.ಡಿ.ಎ 20 ಹೆಚ್ಚಿನ ಸ್ಥಾನಗಳ ಬಹುಮತವನ್ನು ಸಾಧಿಸಲು ಮತ್ತು ಬಿಜೆಪಿ 240 ಸ್ಥಾನಗಳನ್ನು ಹೊಂದಲು ಸಾಧ್ಯವಾಯಿತು.

ಕೇಂದ್ರೀಯ ಸಂಸ್ಥೆಗಳ ಶಸ್ತ್ರೀಕರಣ

ಮೊದಲನೆಯದಾಗಿ, ಈ ಚುನಾವಣೆ ವಿರೋಧ ಪಕ್ಷಗಳ ಮೇಲೆ ವ್ಯಾಪಕ ದಾಳಿಯ ಮಧ್ಯೆ ನಡೆಯಿತು. ಜೊತೆಗೆ ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಕಾಂಗ್ರೆಸ ನ  ಬ್ಯಾಂಕ್ ಖಾತೆ  ಮತ್ತು ಸಿಪಿಐ (ಎಂ) ನ ಒಂದು ಜಿಲ್ಲೆಯ ಖಾತೆಗಳನ್ನು  ಸ್ಥಗಿತಗೊಳಿಸಲಾಯಿತು. ಅಲ್ಲದೆ ಅಪಾರ ಪ್ರಮಾಣದ ಹಣ ಶಕ್ತಿಯ ಬಳಕೆ ಆಯಿತು. ಚುನಾವಣೆಯ ಹಿನ್ನೆಲೆಯಲ್ಲಿ ಎರಡು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳ ಬಂಧನವೂ ಆಯಿತು. ವಿರೋಧ ಪಕ್ಷಗಳಾದ ಎನ್.ಸಿ.ಪಿ ಮತ್ತು ಶಿವ ಸೇನಾಗಳನ್ನು ಗುರಿ ಮಾಡಿ ಕೇಂದ್ರೀಯ ಸಂಸ್ಥೆಗಳು ಮತ್ತು ಹಣದ ಬಲ ಎರಡನ್ನೂ ಬಳಸಿ ಒಡೆಯಲಾಯಿತು. ಎಲ್ಲ ತರಹದ ರಾಜಕೀಯ ಕುತಂತ್ರಗಾರಿಕೆಗಳನ್ನು ಬಳಸಿ ಜೆಡಿಯು ಪಕ್ಷವನ್ನು ಎನ್.ಡಿ.ಎ ತೆಕ್ಕೆಗೆ ಬರುವಂತೆ ಮಾಡಲಾಯಿತು. ಆರ್.ಎಲ್.ಡಿ ಪಕ್ಷವನ್ನು ಸಹ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಶಾಮೀಲಾದ ಚುನಾವಣಾ ಆಯೋಗ

ಎರಡನೆಯದಾಗಿ, ಮುಕ್ತ ಹಾಗೂ ನ್ಯಾಯಬದ್ಧ ರೀತಿಯಲ್ಲಿ ಚುನಾವಣೆಗಳನ್ನು ಚುನಾವಣಾ ಆಯೋಗ ನಡೆಸಿದ್ದರೆ ಮತ್ತು ಸಂವಿಧಾನಾತ್ಮಕವಾಗಿ ಅದು ನಡೆದುಕೊಂಡಿದ್ದರೆ, ತನ್ನ ಅಧಿಕಾರವನ್ನು ಕ್ಲುಪ್ತವಾಗಿ ಮತ್ತು ನಿರ್ಭಯವಾಗಿ ಬಳಸಿದ್ದರೆ  ಬಿಜೆಪಿ ಇನ್ನೂ ಹೆಚ್ಚಿನ ಹೊಡೆತ ತಿನ್ನುತ್ತಿತ್ತು. ಚುನಾವಣಾ ಆಯೋಗದ ಪಾತ್ರ ಎನ್.ಡಿ.ಎ ಯ ಪಾಲುದಾರನಂತೆ ಇತ್ತು ಮತ್ತು ಬಿಜೆಪಿ ಪಕ್ಷದ ಕಾರ್ಯಸೂಚಿಯನ್ನು ಅನುಷ್ಟಾನಗೊಳಿಸುವವರಂತೆ ಇತ್ತು. ಮೋದಿಯವರ ಮತ್ತು ಬಿಜೆಪಿ ಯ ಇತರ ನಾಯಕರುಗಳ ಕೆರಳಿಸುವ ಕೋಮುವಾದಿ ಭಾಷಣಗಳನ್ನು ತಡೆಯುವಲ್ಲಿ ಮತ್ತು ಅಂತಹ ನಡೆಯನ್ನು ನಿರ್ಭಂದಿಸುವುದರಲ್ಲಿನ ಅದರ ಹೀನಾಯ ವೈಫಲ್ಯ ಚುನಾವಣಾ ಮಾದರಿ ಸಂಹಿತೆಯನ್ನು ನಿಷ್ಫಲಗೊಳಿಸಿತು. ಚುನಾವಣಾ ಆರಂಭದಲ್ಲಿ ಚಲಾಯಿಸಿದ ಮತಗಳ ದತ್ತಾಂಶಗಳನ್ನು ಸಾರ್ವಜನಿಕಗೊಳಿಸುವುದರಲ್ಲಿನ ಅದರ ವೈಫಲ್ಯ ಈ ಸಾಂವಿಧಾನಿಕ ಸಂಸ್ಥೆಯ ಬಗೆಗಿನ ಭರವಸೆಯನ್ನು ನುಚ್ಚುನೂರು ಗೊಳಿಸಿತು!

ಚುನಾವಣಾ ನಂತರದಲ್ಲೂ ರಾಷ್ಟ್ರೀಯ ಚುನಾವಣಾ ಆಯೋಗ ಇ.ವಿ.ಎಂ ಗಳಲ್ಲಿ ಚಲಾಯಿಸಲಾದ ಮತಗಳ ಸಂಖ್ಯೆ ಮತ್ತು ಎಣಿಸಲಾದ ಮತಗಳ ಸಂಖ್ಯೆ ಗಳಲ್ಲಿ ಇರುವ ವ್ಯತ್ಯಾಸಗಳ ಬಗೆಗೆ ಸ್ಪಷ್ಟನೆ ನೀಡಲು ನಿರಾಕರಿಸುತ್ತಿದೆ. ಅಖಿಲ ಭಾರತದ ಮಟ್ಟದಲ್ಲಿ ಈ ರೀತಿ ತಾಳೆಯಾಗದ ಮತಗಳ ಸಂಖ್ಯೆ 5.14 ಕೋಟಿಯಷ್ಟಿದೆಯೆಂದರೆ ಇದರ ಅಗಾಧತೆ ಅರ್ಥವಾದೀತು. ಚುನಾವಣಾ ಆಯೋಗದ ಮೇಲೆ ಈ ವಿಷಯದಲ್ಲಿ ಹೊಣೆಗಾರಿಕೆ ಹೊರಿಸಬೇಕು.

ಹೆಚ್ಚಿನ ಪಾರದರ್ಶಕತೆ ತರಲು ಪಕ್ಷವು ಚುನಾವಣಾ ಆಯೋಗಕ್ಕೆ ಮತಗಟ್ಟೆಗಳಲ್ಲಿನ ಮತದಾನದ ಘಟಕಗಳ ಅನುಕ್ರಮದ ಬದಲಾವಣೆ ಮಾಡಲು ಸೂಚಿಸಿತ್ತು. ಈಗಿರುವ ಅನುಕ್ರಮದಲ್ಲಿ ಮತದಾನ ಘಟಕ, ವಿ ವಿ ಪಾಟ್ ಘಟಕ ಮತ್ತು ನಿಯಂತ್ರಣ ಘಟಕ (ಕಂಟ್ರೋಲರ್) ಇರುತ್ತವೆ. ಮಾಡಿದ ಮತದಾನ ವಿ ವಿ ಪಾಟ್ ನಲ್ಲಿ ಕಾಣಿಸುತ್ತದೆ. ಆದರೆ ವಿ ವಿ ಪಾಟ್ ನಿಂದ ನಿಯಂತ್ರಣ ಘಟಕಕ್ಕೆ ಏನು ರವಾನೆಯಾಯಿತು ಎಂಬುದು ಗೊತ್ತಾಗುವುದಿಲ್ಲ. ಮತಗಳ ಎಣಿಕೆ ಹತೋಟಿ ಘಟಕದಿಂದ ನಡೆಯುತ್ತದೆ. ಆದ್ದರಿಂದ ಪಕ್ಷ ಈ ಕ್ರಮವನ್ನು ಕೆಳಗಿನಂತೆ ಬದಲಾಯಿಸಲು ಸೂಚಿಸಿತ್ತು- ಮತದಾನ ಘಟಕ, ನಿಯಂತ್ರಣ ಘಟಕ ಮತ್ತು ವಿ ವಿ ಪಾಟ್ ಘಟಕ. ಆದರೆ ಚುನಾವಣಾ ಆಯೋಗ ಇದನ್ನು ಒಪ್ಪಲಿಲ್ಲ!  ದುರಾದೃಷ್ಟವೆಂದರೆ ಸುಪ್ರೀಂ ಕೋರ್ಟು ಇ.ವಿ.ಎಂ ಗಳಲ್ಲಿನ ವೋಟುಗಳನ್ನು ಶೇ 100 ರಷ್ಟು ಕಾಗದಗಳಿಗೆ ಚಾಪಿಸಬೇಕು ಎಂಬ ಬೇಡಿಕೆಯನ್ನು ತಿರಸ್ಕರಿಸಿತು. ಆದ್ದರಿಂದ ಇ.ವಿ.ಎಂ ಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗೆಗಿನ ಹೋರಾಟ ಮುಂದುವರೆಯಬೇಕಾಗಿದೆ.

ಮಡಿಲ(ಗೋದಿ) ಮಾಧ್ಯಮಗಳು

ಮೂರನೆಯದಾಗಿ, ಬಿಜೆಪಿ ಮಾಧ್ಯಮದ ಬಹುತೇಕ ಭಾಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ತನ್ನ ಆಸಕ್ತಿಗಳಿಗೆ ಹೊಂದುವ ದೃಷ್ಟಿಕೋನವನ್ನು ಪ್ರಚುರಪಡಿಸಲು ಮತ್ತು ತನ್ನ ಕಥನ ನಿರೂಪಣೆಗೆ ಬಳಸಿಕೊಂಡಿತು. ಅದರೊಡನೆ ಶಾಮೀಲಾದ ಕಾರ್ಪೊರೇಟ್ ಮಾಧ್ಯಮ (ಮಡಿಲ ಮಾಧ್ಯಮ) ದ ಜೊತೆಗೆ ತನ್ನ ಕಥನ ನಿರೂಪಣೆ ಮತ್ತು ತಪ್ಪು ಮಾಹಿತಿ ಪ್ರಸಾರ ಮಾಡಲು ಅಪಾರ ಸಂಪನ್ಮೂಲಗಳನ್ನು ವ್ಯಯಿಸಿ ಸಾಮಾಜಿಕ ಮಾಧ್ಯಮಗಳನ್ನು ಅದು ಬಳಸಿಕೊಂಡಿತು. ಸಿ.ಎಸ್.ಡಿ.ಎಸ್- ಲೋಕ ನೀತಿ ಸಂಸ್ಥೆ ಚುನಾವಣೋತ್ತರವಾಗಿ ನಡೆಸಿದ ಸಮೀಕ್ಷೆಯ ಪ್ರಕಾರ ಮಡಿಲ ಮಾಧ್ಯಮದ ನೋಡುಗರಲ್ಲಿ 66 ರಲ್ಲಿ ಒಬ್ಬರು ಮೋದಿಯ ವಿರುದ್ಧ ಮತ ಚಲಾಯಿಸಿದ್ದರೂ ಬಿಜೆಪಿ ಈ ಚುನಾವಣೆಯನ್ನು ಸೋಲುತ್ತಿತ್ತು. ಬಿಜೆಪಿ ಯ ದುಷ್ಟ ಕೈಚಳಕದ ತಾಕತ್ತು ಈ ಚುನಾವಣೆಗಳಲ್ಲಿ ಅಷ್ಟು ಪ್ರಬಲವಾಗಿತ್ತು! ನಿರ್ಗಮನ ಸಮೀಕ್ಷೆ (ಎಕ್ಸಿಟ್ ಪೋಲ್)ಗಳು ಬಿಜೆಪಿ ಗೆ 400 ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದು ಸಾಮೂಹಿಕವಾಗಿ ಅತಿಶಯದ ವರದಿಗಳನ್ನು ಪ್ರಕಟಿಸಿದ ಮಡಿಲ ಮಾಧ್ಯಮಗಳು, ವಿರೋಧ ಪಕ್ಷಗಳು ಮತ ಎಣಿಕೆಯ ಸಮಯದಲ್ಲಿ ನೈತಿಕವಾಗಿ ಕುಸಿದುಹೋಗುವಂತೆ ಮಾಡಉವ ಹುನ್ನಾರವನ್ನು ಮಾಡಲಾಯಿತು. ಅಂತಹ ಸಂದರ್ಭದಲ್ಲಿ ಫಲಿತಾಂಶಗಳನ್ನು ತಿರುಚುವ ಕುಯುಕ್ತಿಗಳೀಗೆ ಹೆಚ್ಚಿನ  ಅವಕಾಶ ಮಾಡಿಕೊಡುವ ಕುತಂತ್ರವೂ ಇತ್ತು. ಈ ನಿರ್ಗಮನ ಸಮೀಕ್ಷೆಗಳು ಷೇರು ಮಾರುಕಟ್ಟೆಯನ್ನೂ ಗುರಿ ಮಾಡಿಕೊಂಡವು. ನಿರ್ಗಮನ ಸಮೀಕ್ಷೆಗಳ ನಂತರ ಷೇರು ಮಾರುಕಟ್ಟೆ ಭೋರ್ಗರೆದದ್ದರಿಂದ ಹಲವರು ಲಾಭದ ಲೂಟಿ ಮಾಡಿಕೊಂಡರು. ಫಲಿತಾಂಶಗಳ ನಂತರ ಷೇರು ಮಾರುಕಟ್ಟೆ ಕುಸಿದದ್ದರಿಂದ ಬಹುತೇಕ ಸಾಮಾನ್ಯ ಹೂಡಿಕೆದಾರರು ತಮ್ಮ ಅಪಾರ ಪ್ರಮಾಣದ ಹಣಗಳನ್ನು  ಕಳೆದುಕೊಂಡರು.

ಅಗಾಧ ಹಣ ಶಕ್ತಿ

ಚುನಾವಣಾ ಬಾಂಡುಗಳಂತಹ ಯೋಜನೆಗಳನ್ನು ತಂದು ಭ್ರಷ್ಟಾಚಾರವನ್ನು ಕಾನೂನುಬದ್ದಗೊಳಿಸಿದ ಬಿಜೆಪಿ ಬೃಹತ್ ಪ್ರಮಾಣದಲ್ಲಿ ಹಣದ ಹೊಳೆ ಹರಿಸಿ ಮತದಾನದ  ವಿನ್ಯಾಸಗಳನ್ನು ಪ್ರಭಾವಿಸಲು, ತನ್ನ ರಾಲಿಗಳಿಗೆ  ಜನರನ್ನು ಕರೆತರಲು, ರೋಡ್ ಶೋ ಮಾಡಲು ಇತ್ಯಾದಿಗಳಿಗೆ ಬಳಸಿತು. ಮತದಾರರಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೇರವಾಗಿ ಹಂಚುವ ಕೆಲಸವನ್ನೂ ಬಿಜೆಪಿ ಮಾಡಿತು.

ಹಣಕಾಸನ್ನು ಇಂತಹ ರೀತಿಯಲ್ಲಿ ಬಳಸುವುದರಲ್ಲಿ ಬಿಜೆಪಿ ಪರಮ ಸ್ಥಾನ ಮೆರೆಯಿತು ಎಂದರೂ ಕೆಲವು ಪ್ರಾದೇಶಿಕ ಪಕ್ಷಗಳೂ ಮತ ಪಡೆಯಲು ಹಣವನ್ನು ಹಂಚಿದವು ಎಂಬುದನ್ನೂ ಗಮನಿಸಬೇಕು.

ಈ ನಾಲ್ಕು ಅಂಶಗಳು ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶಗಳ ಸ್ಥಿತಿಯನ್ನು ಲವ ಲೇಶವೂ ಉಳಿಸಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನ್ಯಾಯಯುತ ಮತ್ತು ಸ್ವತಂತ್ರ ಚುನಾವಣಾ ಸಾಧ್ಯತೆಗಳು ಉಳಿಯಲೇ ಇಲ್ಲ.

ಬಿಜೆಪಿ ಯ ಸಾಧನೆ

ಈ ಚುನಾವಣೆಗಳಲ್ಲಿ ಬಿಜೆಪಿ ಯ ಹಿನ್ನೆಡೆಗೆ ಅದು ಉತ್ತರ ಪ್ರದೇಶದಲ್ಲಿ ಕಂಡ ಸೋಲುಗಳೇ ಪ್ರಮುಖ ಕಾರಣ. ಅಲ್ಲಿ ಅದಕ್ಕೆ 80 ರಲ್ಲಿ 62 ಸ್ಥಾನಗಳ ಗೆಲುವು ಹಿಂದಿನ ಚುನಾವಣೆಯಲ್ಲಿ (2019) ದೊರೆತಿತ್ತು. ಅದನ್ನು ಇನ್ನೂ ಉತ್ತಮಪಡಿಸಿಕೊಳ್ಳುವ ಉದ್ದೇಶವನ್ನು ಅದು ಹೊಂದಿತ್ತು. ಆದರೆ ಬಿಜೆಪಿ ಬರೀ 33 ಸ್ಥಾನಗಳನ್ನು ಗೆದ್ದು 29 ಸ್ಥಾನಗಳನ್ನು ಸೋತಿತು. ಉಗ್ರ ಹಿಂದುತ್ವದ ಪೃಷ್ಠ ಭೂಮಿಯಾಗಿರುವ ಮತ್ತು ಕ್ರೂರ ಕೋಮುವಾದಿ ಧ್ರುವೀಕರಣ ಹರಿತವಾಗಿರುವ ಮತ್ತು ಬುಲ್ ಡೋಜರ್ ರಾಜಕೀಯ ತೀವ್ರವಾಗಿರುವ ಈ ರಾಜ್ಯದಲ್ಲಿ ಬಿಜೆಪಿ ಶೇ 9 ಮತ ಕುಸಿತವನ್ನು ಕಂಡಿತು! ವಿರೋಧ ಪಕ್ಷಗಳ ಮತಗಳು ವಿಭಜಿತವಾಗದೆ ಇದ್ದಿದ್ದರೆ ಬಿಜೆಪಿ ಇನ್ನಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ಉದಾಹರಣೆಗೆ, ಬಿ.ಎಸ್.ಪಿ ಪಕ್ಷ 16 ಸ್ಥಾನಗಳಲ್ಲಿ ಎಸ್.ಪಿ ಮತ್ತು ಕಾಂಗ್ರೆಸ್ಸಿನ ಸೋಲಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ಪಡೆಯಿತು. ಇಂಡಿಯಾ ಕೂಟದ ಪಕ್ಷಗಳಾದ ಎಸ್.ಪಿ ಮತ್ತು ಕಾಂಗ್ರೆಸ್ ನಡುವಿನ ಹೊಂದಾಣಿಕೆ ಉತ್ತಮ ಫಲಿತಾಂಶ ನೀಡಿತು. ಸಮಾಜವಾದಿ ಪಕ್ಷ ಪಿಡಿಎ ( ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು- ಅಹಿಂದ ಅನ್ನೋಣ) ಜನರ ಹಿತಾಸಕ್ತಿಗಳ ಬಗೆಗೆ ಮಾಡಿದ ಪ್ರಚಾರ ಜನರ ನಡುವೆ ಉತ್ತಮ ಪ್ರತಿಸ್ಪಂದನ ಪಡೆಯಿತು. ಜನರ ದಿನನಿತ್ಯದ ಜೀವನ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳು, ಅಗ್ನಿ ವೀರ್ ಯೋಜನೆಯ ವಿರುದ್ಧ ಯುವಕರ ಪ್ರತಿಭಟನೆ ಇತ್ಯಾದಿಗಳು ಉಗ್ರ ಹಿಂದುತ್ವದ ಕಾರ್ಯಸೂಚಿಯನ್ನು ಹಿಂದಕ್ಕೆ ತಳ್ಳಿದವು. ಅಯೋಧ್ಯೆಯ ರಾಮಮಂದಿರವನ್ನು ವಿಜ್ರಂಭಣೆಯಿಂದ ಕಟ್ಟಿ ಮೆರೆದ ಮೇಲೂ ಈ ಪ್ರದೇಶದ ಲೋಕಸಭಾ ಕ್ಷೇತ್ರವಾದ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಇರುವ ತನ್ನ ಸ್ಥಾನವನ್ನು ಕಳೆದುಕೊಂಡಿತು. ಇದು ಮೀಸಲಿರದ ಸಾಮಾನ್ಯ ಕ್ಷೇತ್ರವಾದರೂ ಸಮಾಜವಾದಿ ಪಕ್ಷದ ದಲಿತ ಅಭ್ಯರ್ಥಿ ಗೆದ್ದರು! ಅಯೋಧ್ಯೆಯ ಸುತ್ತಲಿನ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿತು.  

ಮಹಾರಾಷ್ಟ್ರದಲ್ಲಿ ಬಿಜೆಪಿ ಇರುವ (ಅಂದರೆ ಹಿಂದೆ 2019 ರಲ್ಲಿ ಗೆದ್ದಿದ್ದ) 25 ಸ್ಥಾನಗಳಲ್ಲಿ 16 ಅನ್ನು ಕಳೆದುಕೊಂಡಿತು ಮತ್ತು ಎನ್.ಡಿ.ಎ ಇರುವ 42 ಕ್ಷೇತ್ರಗಳಲ್ಲಿ 25 ಅನ್ನು ಕಳೆದುಕೊಂಡಿತು. ಶಿವ ಸೇನಾ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ) ಗಳಲ್ಲಿ ಒಡಕು ತಂದು ವಿಧಾನಸಭಾಧ್ಯಕ್ಷರು ಅಜಿತ್ ಪವಾರ್ ಅವರಿಗೆ ಮತ್ತು ಏಕನಾಥ್ ಶಿಂಧೆ ಶಿವ ಸೇನಾಕ್ಕೆ ಮೂಲ ಚಿನ್ಹೆ ನೀಡುವ ತೀರ್ಪುಗಳನ್ನು ನೀಡಿದರೂ ಸಹ ಇಂಡಿಯಾ ಕೂಟದ ಪಕ್ಷಗಳಿಗೆ ಇಂಥ ಗೆಲುವು ದೊರೆಯಿತು. ಶರದ್ ಪವಾರ್ ಅವರ ಎನ್.ಸಿ.ಪಿ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನಾಕ್ಕೆ ಜನರ ಸಹಾನುಭೂತಿ ಬೆಂಬಲ ದೊರೆತು ಬಿಜೆಪಿ ಗೆ ಆಘಾತಕಾರಿ ಸೋಲು ಉಂಟಾಯಿತು.

ರಾಜಸ್ಥಾನದಲ್ಲಿ, ಹಿಂದೆ 2019 ರಲ್ಲಿ  ಬಿ ಜೆಪಿ 25 ಕ್ಷೇತ್ರಗಳಲ್ಲಿ 24 ರಲ್ಲಿ ಗೆಲುವು ಕಂಡಿತ್ತು.  ಈ ಚುನಾವಣೆಗಳಲ್ಲಿ ಬಿಜೆಪಿ 10 ಕ್ಷೇತ್ರಗಳಲ್ಲಿ ಸೋಲು ಕಂಡಿತು. ಕರ್ನಾಟಕದಲ್ಲಿ ಬಿಜೆಪಿ 8 ಕ್ಷೇತ್ರಗಳನ್ನು ಕಳೆದುಕೊಂಡಿತು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಅದು 6 ಕ್ಷೇತ್ರಗಳನ್ನು ಕಳೆದುಕೊಂಡಿತು. 2019 ರಲ್ಲಿ ಎಲ್ಲ 10 ಕ್ಷೇತ್ರಗಳನ್ನು ಗೆದ್ದು ಕೊಂಡಿದ್ದ ಹರಿಯಾಣದಲ್ಲಿ ಬಿಜೆಪಿ ಈ ಸಾರಿ 5 ರಲ್ಲಿ ಸೋಲು ಕಂಡಿತು. ಬಿಹಾರದಲ್ಲಿ ಹಿಂದೆ ಗೆದ್ದಿದ್ದ ಐದು  ಕ್ಷೇತ್ರಗಳನ್ನು ಅದು ಕಳೆದುಕೊಂಡಿತು. ಇನ್ನುಳಿದ ಹಲವು ರಾಜ್ಯಗಳಲ್ಲೂ ಅದು ಹಿಂದೆ ಗೆದ್ದಿದ್ದ ಹಲವು ಕ್ಷೇತ್ರಗಳಲ್ಲಿ ಸೋಲು ಕಂಡಿತು. ಅವೆಂದರೆ, ಜಾರ್ಖಂಡ -3, ಪಂಜಾಬ್ -2 ಮತ್ತು ಅಸ್ಸಾಮ್, ಚಂಡೀಗಢ, ದಾಮನ್- ದಿಉ, ಲಡಾಕ್ ಮತ್ತು ಮಣಿಪುರಗಳಲ್ಲಿ ತಲಾ ಒಂದೊಂದು ಕ್ಷೇತ್ರಗಳು.

ಜನತೆಯ ಅಸಮಾಧಾನ ವಿವಿಧ ಹೋರಾಟಗಳಲ್ಲಿ ವ್ಯಕ್ತವಾಗುತ್ತಿತ್ತು- ಬಹಳ ಮುಖ್ಯವಾಗಿ ರೈತರ ಹೋರಾಟ. ಇದರ ಪರಿಣಾಮ ಈ ಚುನಾವಣೆಗಳಲ್ಲಿ ಕಂಡಿತು. ಬಿಜೆಪಿ 5 ರಾಜ್ಯಗಳ- ಅಂದರೆ ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಮಹಾರಾಷ್ಟ್ರದ- ಒಟ್ಟು 38 ಕೃಷಿ ಜಿಲ್ಲೆಗಳಲ್ಲಿ ತನ್ನ ಈಗಿದ್ದ ಸ್ಥಾನಗಳನ್ನು ಕಳೆದುಕೊಂಡಿತು. ದಶಕದುದ್ದದ ಮೋದಿ ಆಢಳಿತದಡಿ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರೆಯದೆ ಇದ್ದದ್ದು, ಗ್ರಾಮೀಣ ಕೂಲಿ/ ವೇತನ ನಿಂತ ನೀರಾಗಿದ್ದು ಗ್ರಾಮೀಣ ಬದುಕಿನ ಯಾತನೆಗಳನ್ನು ಹೆಚ್ಚಿಸಿದ್ದು 159 ಕೃಷಿ ಪ್ರಧಾನ ಗ್ರಾಮೀಣ ಕ್ಷೇತ್ರಗಳ ಜನರು ಬದಲಾವಣೆಗೆ ಮತ ನೀಡುವಂತೆ ಮಾಡಿತು.

ಬಿಜೆಪಿ 92 ಸ್ಥಾನಗಳನ್ನು ಕಳೆದುಕೊಂಡಿತು. ಅದರ ನಿವ್ವಳ ನಷ್ಟ 63 ಕ್ಕೆ ಇಳಿಯಿತು ಯಾಕೆಂದರೆ ಅದು 29 ಬೇರೆ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರಿಂದ. ಅದು ಕಳೆದುಕೊಂಡ 92 ಸ್ಥಾನಗಳಲ್ಲಿ  63 ಸಾಮಾನ್ಯ ವರ್ಗಕ್ಕೆ ಸೇರಿದರೆ, 18 ಪರಿಶಿಷ್ಟ ಜಾತಿ 11 ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳು.

ಈ ಚುನಾವಣೆಯ ಮನ ಕಲಕುವ ಒಂದು ವಿಷಯವೆಂದರೆ ಚುನಾಯಿತ ಮಹಿಳೆಯರ ಸಂಖ್ಯೆ ಕಡಿಮೆಯಾದದ್ದು. ಇದು ಹಿಂದೆ 2019 ರಲ್ಲಿ ಇದ್ದ 78 ರಿಂದ (14.36 ಶೇ) 74 ಕ್ಕೆ (ಶೇ 13.63) ಇಳಿಯಿತು! ಹಾಗೆಯೇ 78 ಮುಸಲ್ಮಾನ ಅಭ್ಯರ್ಥಿಗಳಲ್ಲಿ ದೇಶದಾದ್ಯಂತ 24 ಅಭ್ಯರ್ಥಿಗಳು ಮಾತ್ರ ಗೆಲುವು ಕಂಡಿರುವುದು! 2019 ರಲ್ಲಿ 26 ಮುಸಲ್ಮಾನರು ಗೆದ್ದಿದ್ದರು. 

ಬಿಜೆಪಿ ನಷ್ಟಗಳನ್ನು ಸರಿದೂಗಿಸಿದ್ದು

ಹೀಗಿದ್ದರೂ ಬಿಜೆಪಿ ಈ ನಷ್ಟಗಳನ್ನು ಬೇರೆಡೆಗೆ ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವಲ್ಪ ಮಟ್ಟಿಗೆ ಸರಿತೂಗಿಸಿಕೊಂಡಿತು. ಅದು ಒರಿಸ್ಸಾದಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಲೋಕ ಸಭೆಯ 21 ಸ್ಥಾನಗಳಲ್ಲಿ 20 ನ್ನು ಗೆದ್ದುಕೊಂಡಿತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಬಹುಮತ ಪಡೆಯಿತು. ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಮತ್ತು ಜನ ಸೇನಾ ಗಳ ಮೈತ್ರಿಯ ಅಲೆಯಲ್ಲಿ ತೇಲುತ್ತಾ ಅದು ಎನ್.ಡಿ.ಎ ಯ  ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತು. ಈ ಮೈತ್ರಿ 25 ಸ್ಥಾನಗಳಲ್ಲಿ 21 ರಲ್ಲಿ ಗೆಲುವು ಸಾಧಿಸಿದ್ದಲ್ಲದೆ ರಾಜ್ಯ ವಿಧಾನಸಭೆಯಲ್ಲೂ ಬಹುಮತ ಸಂಪಾದಿಸಿತು. ಬಿಹಾರದಲ್ಲಿ ಜೆಡಿಯು ಪಕ್ಷ ಎನ್.ಡಿ.ಎ ಮೈತ್ರಿಕೂಟಕ್ಕೆ ವಾಪಸ್ಸು ಬಂದದ್ದರಿಂದ ಆಗಬಹುದಾದ ದೊಡ್ಡ ಹಾನಿಯನ್ನು ತಪ್ಪಿಸಿಕೊಂಡಿತು. ಬಿಜೆಪಿ ಮಧ್ಯ ಪ್ರದೇಶದಲ್ಲಿ ಅದ್ಭುತ ಗೆಲುವು  ಸಾಧಿಸಿತು ಮತ್ತು ಛತ್ತೀಸಘಡದಲ್ಲಿ ತನ್ನ ಸಂಖ್ಯೆಯನ್ನು ಉತ್ತಮ ಪಡಿಸಿಕೊಂಡಿತು.

ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಲಾಭ ಪಡೆಯಿತು. ಮೊತ್ತ ಮೊದಲ ಬಾರಿಗೆ ಅದು ಕೇರಳದ ತ್ರಿಶ್ಶೂರಿನಲ್ಲಿ ಗೆಲುವು ಸಾಧಿಸಿತು. ರಾಜ್ಯದಲ್ಲಿ ಅದರ ಮತ ಪ್ರಮಾಣ ಶೇ 12.99  ರಿಂದ ಶೇ 16.68  ಕ್ಕೆ ಏರಿತು. ತಮಿಳು ನಾಡಿನಲ್ಲಿ ಅದು ಸ್ಥಾನಗಳನ್ನು ಗೆಲ್ಲಲಿಲ್ಲವಾದರೂ ಅದರ ಮತ ಗಳಿಕೆ ಪ್ರಮಾಣ ಶೇ 3.6 ರಿಂದ ಶೇ 11.24ಕ್ಕೆ ಏರಿತು ಅಷ್ಟೇ ಅಲ್ಲ ಅದು 9 ಕ್ಷೇತ್ರಗಳಲ್ಲಿ ಎರಡನೇ ಸ್ಥಾನಕ್ಕೆ ಬಂದಿತು. ತೆಲಂಗಾಣದಲ್ಲಿ ಅದರ ಮತಗಳ ಪಾಲು ಶೇ 19.65  ರಿಂದ ಶೇ 35.8 ಕ್ಕೆ ಏರಿತು ಮತ್ತು ಅದು ತನ್ನ ಗೆಲುವಿನ ಸ್ಥಾನಗಳನ್ನು 4 ರಿಂದ 8 ಕ್ಕೆ ಏರಿಸಿಕೊಂಡಿತು. ಆಂಧ್ರ ಪ್ರದೇಶದಲ್ಲಿ ಅದು ತನ್ನ ಮತಗಳಿಕೆ ಪಾಲನ್ನು ಶೇ 1 ಕ್ಕಿಂತ ಕಡಿಮೆಯಿಂದ ಶೇ 11.28 ಕ್ಕೆ ತೆಲುಗು ದೇಶಂ ಪಕ್ಷದ ಮೈತ್ರಿಯ ಮೂಲಕ ಏರಿಸಿಕೊಂಡಿತಲ್ಲದೆ ಲೋಕ ಸಭೆಯ 3 ಸ್ಥಾನಗಳನ್ನುಗೆದ್ದುಕೊಂಡಿತು. ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಯ ಮತ ಗಳಿಕೆ ಪಾಲು 2019 ರ ಶೇ 51.38 ರಿಂದ ಈ ಚುನಾವಣೆಯಲ್ಲಿ ಶೇ 46.09 ಕ್ಕೆ ಕುಸಿಯಿತು. ಆದರೆ ಅದರ ಮಿತ್ರ ಪಕ್ಷವಾದ ಜಾತ್ಯತೀತ ಜನತಾ ದಳ ಪಡೆದ ಶೇ 5.64 ಮತಗಳನ್ನು ಸೇರಿಸಿ ಒಟ್ಟು ಎನ್.ಡಿ.ಎ ಮತಗಳಿಕೆ ಶೇ 51.73 ಕ್ಕೆ ಏರಿತು. ಬಿಜೆಪಿ ಈ ಬಾರಿ ಹಿಂದಿನ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ದಿಸಿತ್ತು.

ಪ್ರಾದೇಶಿಕ ಪಕ್ಷಗಳು

ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಡಿ ಎಂ ಕೆ (ತಮಿಳುನಾಡು), ರಾಷ್ಟ್ರೀಯ ಜನತಾ ದಳ (ಬಿಹಾರ), ಜೆ ಎಂ ಎಂ (ಜಾರ್ಖಂಡ್), ಸಮಾಜವಾದಿ ಪಕ್ಷ (ಉತ್ತರ ಪ್ರದೇಶ) ಶರದ್ ಪವಾರ್ ಅವರ ಎನ್.ಸಿ.ಪಿ, ಉದ್ಧವ್ ಠಾಕ್ರೆ ಅವರ ಶಿವಸೇನಾ (ಮಹಾರಾಷ್ಟ್ರ) ಬಿಜೆಪಿ ಯನ್ನು ಸೋಲಿಸುವುದರಲ್ಲಿ ಬಹು ಮುಖ್ಯ ಪತ್ರ ವಹಿಸಿದವು. ಬಂಗಾಳದಲ್ಲಿ ಟಿ.ಎಂ.ಸಿ ಮತ್ತು ಬಿಜೆಪಿ ತಮ್ಮಿಬ್ಬರ ನಡುವಿನ ಹೋರಾಟವಾಗಿ ಮಾರ್ಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದವು. ಅದು ಟಿ.ಎಂ.ಸಿ ಗೆ ಅನುಕೂಲದಾಯಕವಾಯಿತು. ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಈ ದ್ವಿಪಕ್ಷೀಯ ರಾಜಕೀಯ ಸೆಣೆಸಾಟವನ್ನು ಬದಲಿಸುವಲ್ಲಿ ಅಸಮರ್ಥವಾದವು.

ಬಿಜೆಡಿ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಗಳ ದಯನೀಯ ಸೋಲಿನಲ್ಲಿ ಒಂದು ಪಾಠವಿದೆ. ಕಳೆದ ಐದು ವರ್ಷಗಳಲ್ಲಿ ಈ ಎರಡೂ ಪಕ್ಷಗಳು ಮೋದಿ ಸರ್ಕಾರದ ಎಲ್ಲ ಮಸೂದೆಗಳು, ನೀತಿಗಳನ್ನು ಪಾರ್ಲಿಮೆಂಟಿನಲ್ಲಿ ಪ್ರತಿಯೊಂದು ಸಂದರ್ಭದಲ್ಲೂ ಬೆಂಬಲಿಸಿದವು. ವ್ಯಂಗ್ಯವೇನೆಂದರೆ  ಬಿಜೆಡಿ ಕಳೆದ ಚುನಾವಣೆಗಿಂತ ಈ ಸಾರಿ ಸ್ವಲ್ಪ ಹೆಚ್ಚೇ ಮತಗಳ ಪಾಲು ಪಡೆದರೂ ಅದು 18 ಲೋಕ ಸಭಾ ಸ್ಥಾನಗಳೂ ಮತ್ತು 62 ವಿಧಾನಸಭಾ ಸ್ಥಾನಗಳನ್ನು ಸೋತಿತು. ಆಂಧ್ರ ಪ್ರದೇಶದಲ್ಲಿ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ವಿಧಾನ ಸಭೆ ಮತ್ತು 18 ಲೋಕ ಸಭಾ ಸ್ಥಾನಗಳನ್ನು ಸೋತಿತು.

ನಮ್ಮ ಪಕ್ಷ ಆರ್.ಎಸ್.ಎಸ್ ನ ಜೊತೆಗೆ ಮೈತ್ರಿ ಮಾಡಿಕೊಂಡ ಪಕ್ಷಗಳು ಸೋತು ಸುಣ್ಣವಾಗುತ್ತವೆ ಎಂದು ಗಮನಿಸಿ ಹೇಳಿತ್ತು. ರಾಜಕೀಯ ರಂಗದಲ್ಲಿ ಆರ್.ಎಸ್.ಎಸ್/ ಜನಸಂಘದೊಂದಿಗೆ ಸಹಬಾಳ್ವೆ ಮಾಡಿದವರ ವಿಷಯದಲ್ಲಿ ಇದು ಒಡೆದು ಕಾಣುವ ಸತ್ಯ. ಆರ್.ಎಸ್.ಎಸ್/ ಬಿಜೆಪಿ ಯನ್ನು ಪ್ರಬಲವಾಗಿ ವಿರೋಧಿಸುವ ಪಕ್ಷಗಳು ಮತ್ತು ವಿರೋಧವನ್ನು ಮುಂದುವರಿಸುವ ಪಕ್ಷಗಳಾದ ಡಿ ಎಂ ಕೆ, ಸಮಾಜವಾದಿ ಪಕ್ಷ, ಆರ್ ಜೆ ಡಿ , ಎನ್ ಸಿ ಪಿ (ಶರದ್ ಪವಾರ್), ಶಿವ ಸೇನಾ (ಉದ್ಧವ ಠಾಕ್ರೆ) ಮತ್ತು ಜೆ.ಎಂ.ಎಂ ಪ್ರಬಲವಾಗಿ ಹೊರ ಹೊಮ್ಮಿದವು.

ಇಂಡಿಯಾ ಕೂಟ

ಇಂಡಿಯ ಕೂಟದ ಪಕ್ಷಗಳು ಸನ್ನಿವೇಶಕ್ಕೆ ಸರಿಯಾಗಿ ಸ್ಪಂದಿಸಿದವು ಎಂಬುದು ಅದರ ಗಮನಾರ್ಹ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಈ ಪಕ್ಷಗಳ ಪ್ರಚಾರ ಜನರ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ರೈತರ ಯಾತನೆ ಮತ್ತು ಮೋದಿ ಸರ್ಕಾರದ ನೀತಿಗಳಿಂದಾಗಿ ಉಂಟಾದ ಪ್ರಕ್ಷೋಬೆಗಳ ಮೇಲೆ ಕೇಂದ್ರಿತವಾಗಿತ್ತು. ಹಿಂದುತ್ವದ ಚಟುವಟಿಕೆಗಳಿಂದಾಗಿ ನಮ್ಮ ಸಂವಿಧಾನ, ಪ್ರಜಾಸತ್ತೆ, ಜಾತ್ಯಾತೀತತೆ, ನಾಗರಿಕ ಹಕ್ಕು ಇತ್ಯಾದಿಗಳ ಮೇಲೆ ಆಗುತ್ತಿರುವ ದಾಳಿಗಳ ಪ್ರಸ್ತಾಪವಿತ್ತು. ಸಾಮಾಜಿಕ ನ್ಯಾಯ ಮತ್ತು ಜಾತಿ ಗಣತಿಯ ವಿಷಯಗಳೂ ಮುನ್ನೆಲೆಗೆ ಬಂದದ್ದರ ಪರಿಣಾಮ ಸ್ಪಷ್ಟವಾಗಿ ಗೋಚರವಾಯಿತು. ನಮ್ಮ ಸಂವಿಧಾನ ಮತ್ತು ನಮ್ಮ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತೆಯ ರಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸಕಾರಾತ್ಮಕವಾಗಿ ಸ್ಪಂದಿಸಿ ಎದ್ದು ನಿಂತಿದ್ದು ಮನಮುಟ್ಟುವ ವಿಷಯ.

ಇಂಡಿಯಾ ಕೂಟದಲ್ಲಿ ಹಿಂದೆ ನಿರ್ಧರಿಸಿದಂತೆ ಸ್ಥಾನ ಹೊಂದಾಣಿಕೆ ಮತ್ತು ಚುನಾವಣಾ ಹೊಂದಾಣಿಕೆ ವಿಷಯ ಸ್ಥಳೀಯ ನೈಜ ಪರಿಸ್ಥಿತಿಗಳಿಗೆ ಅನುಗುಣವಾಗಿ ರಾಜ್ಯಗಳ ಮಟ್ಟದಲ್ಲೇ ಆಯಿತು. ತಮಿಳುನಾಡು, ಮಹಾರಾಷ್ಟ್ರ, ಬಿಹಾರ್, ಉತ್ತರ ಪ್ರದೇಶ ದೆಹಲಿ ಮತ್ತು ಹರ್ಯಾಣಗಳಲ್ಲಿ ಇಂತಹ ವ್ಯವಸ್ಥೆಯನ್ನು ಮಾಡಲಾಗಿತ್ತು ಮತ್ತು ಅವು ನಿರೀಕ್ಷಿತ ಪರಿಣಾಮ ನೀಡಿದವು.   

ಕ್ರೋಡೀಕರಣದತ್ತ ಬಿಜೆಪಿ ಪ್ರಯತ್ನಗಳು

ಪ್ರತಿಕೂಲ ಫಲಿತಾಂಶಗಳು ಮತ್ತು ಎನ್.ಡಿ.ಎ ಕೂಟದ ಸಂಯುಕ್ತ ಸರ್ಕಾರ ರಚಿಸಬೇಕಾದ ಪರಿಸ್ಥಿತಿ ಬಂದರೂ, ಮೋದಿ ನೇತೃತ್ವದ ಪ್ರಾಬಲ್ಯವನ್ನು ಪುನರ್-ಸ್ಥಾಪಿಸಲು ಬಿಜೆಪಿಯು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ಅದು ಕಳೆದೊಂದು ದಶಕದಲ್ಲಿ ಕ್ರೋಡೀಕರಿಸಲು ಪ್ರಯತ್ನ ಮಾಡುತ್ತಿದ್ದ ಹಿಂದುತ್ವ ಪ್ರಜ್ಞೆಯನ್ನು ಇನ್ನೂ ಗಾಢಗೊಳಿಸಿ ಕೋಮುವಾದಿ ಧ್ರುವೀಕರಣ ಹೆಚ್ಚಿಸಲು ಕೆಲಸ ಮಾಡತೊಡಗುತ್ತದೆ. ರಾಷ್ಟ್ರೀಯ ರಕ್ಷಣಾ ಸಲಹೆಗಾರರು ಮತ್ತು ಮುಖ್ಯ ಕಾರ್ಯದರ್ಶಿಗಳ ಪುನರ್ನೇಮಕ, ಮೋದಿಯವರು ಇಟಲಿ ಗೆ G-7 ಶೃಂಗ ಸಭೆಗೆ ಭಾರತದ ಯಾವುದೇ ಕಾರ್ಯಸೂಚಿ ಇಲ್ಲದೆಯೂ ಪ್ರಯಾಣ ಮಾಡಿ ಅದರ ನಾಯಕರನ್ನು ಭೇಟಿ ಮಾಡಿದ್ದು, ಸರಿಸುಮಾರು ಎಲ್ಲ ಮಂತ್ರಾಲಯಗಳಿಗೆ ಹಿಂದೆ ಇದ್ದಂತಹ ಮಂತ್ರಿಗಳನ್ನೇ ನೇಮಕ ಮಾಡಿದ್ದು, ಮತ್ತು ಹಿಂದೆ 150 ಎಂ.ಪಿ ಗಳನ್ನು ಅಮಾನತು ಮಾಡಿದ್ದ  ಹಿಂದಿನ ಲೋಕ ಸಭಾಧ್ಯಕ್ಷರನ್ನೇ 18 ನೇ ಲೋಕಸಭೆಗೆ ಪುನಹ ಆಯ್ಕೆ ಮಾಡಿಸಿದ್ದು, ಇತ್ಯಾದಿಗಳೆಲ್ಲ ಎಂದಿನಂತೆ ಇಂದಿನ ವ್ಯವಹಾರವೂ ಇದೆ ಎಂಬಂತೆ ಬಿಂಬಿಸುವ ಪ್ರಯತ್ನ. ಕ್ರೂರ ಯು.ಎ.ಪಿ.ಎ ಬಳಕೆ ಮತ್ತು ಕೇಂದ್ರೀಯ ಸಂಸ್ಥೆಗಳಾದ ಈಡಿ/ಸಿ.ಬಿ.ಐ ಗಳ ದುರ್ಬಳಕೆ ಎಂದಿನಂತೆ ನಡೆದೇ ಇದೆ.

ಮುಂದಿನ ದಿನಗಳಲ್ಲಿನ ಬೆಳವಣಿಗೆಗಳು ಹೇಗಿರುತ್ತವೆ ಎನ್ನುವುದರ ಮೇಲೆ ಮುಂದಿನ ಸ್ಥಿತಿ ಅವಲಂಬಿಸಿರುತ್ತದೆ. ಎನ್.ಡಿ.ಎ ಮಿತ್ರ ಪಕ್ಷಗಳಾದ ಟಿ ಡಿ ಪಿ ಮತ್ತು ಜೆ ಡಿ ಯು ತಮ್ಮ ರಾಜ್ಯಗಳ ಸ್ಥಿತಿಗತಿಗಳು ಮತ್ತು ಅಲ್ಲಿ ಅವರ ಹತೋಟಿಯ ವಿಷಯದಲ್ಲಿ ಸದ್ಯ ಮುಳುಗಿವೆ. ಆದ್ದರಿಂದ ಜನತೆ ತೀವ್ರ ನಿಗಾವಣೆ ಇಟ್ಟು ಎನ್.ಡಿ.ಎ ಯಲ್ಲಿನ ಬೆಳವಣಿಗೆಗಳು ಮತ್ತು ಅಲ್ಲಿ ಹುಟ್ಟಿ ಬೆಳೆಯಬಹುದಾದ ವೈರುಧ್ಯಗಳ ಕಡೆಗೆ ಗಮನ ಇಡುವ ಅವಶ್ಯಕತೆ ಇದೆ.

ಇಂತಹ ಪರಿಸ್ಥಿತಿಗಳಲ್ಲಿ ಭಾರತೀಯ ಸಂವಿಧಾನ, ಪ್ರಜಾಸತ್ತೆ, ಜಾತ್ಯತೀತತೆ ಮತ್ತು ಒಕ್ಕೂಟ ಮತ್ತು ನಾಗರಿಕ ಹಕ್ಕುಗಳ ರಕ್ಷಣೆ ಮತ್ತು ಜನರ ಜೀವನೋಪಾಯಗಳ ಸಮಸ್ಯೆಗಳ ಬಗೆಗೆ ಹೋರಾಟಗಳನ್ನು ರೂಪಿಸಿ ಅವುಗಳನ್ನು ಪಾರ್ಲಿಮೆಂಟಿನ ಒಳಗೆ ಮತ್ತು ಹೊರಗೆ ಗಾಢಗೊಳಿಸುವ ಅವಶ್ಯಕತೆ ಇದೆ.

ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಸಾಧನೆ

ಆರ್.ಎಸ್.ಎಸ್ /ಬಿಜೆಪಿ ವಿರುದ್ದ ಜಾತ್ಯಾತೀತ ಶಕ್ತಿಗಳನ್ನು ಅಣಿನೆರೆಸಿ, ಆ ಮೂಲಕ  ಇಂಡಿಯಾ ಬಣವನ್ನು ಬಲಪಡಿಸುವಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳು ಪ್ರಮುಖ ಪಾತ್ರವಹಿಸಿವೆ. ಆದಾಗ್ಯೂ, ಪಕ್ಷದ ಕಾರ್ಯಕ್ಷಮತೆ ನಿರಾಶಾದಾಯಕವಾಗಿದೆ ವಿಮರ್ಶಾತ್ಮಕ ಮೌಲ್ಯಮಾಪನ‌ ನಡೆಸಬೇಕಾದ ಅಗತ್ಯವಿದೆ. ಒಟ್ಟಾರೆಯಾಗಿ ಎಡಪಕ್ಷಗಳು 8 ಸ್ಥಾನಗಳನ್ನು ಈ ಬಾರಿ ಹೊಂದಿವೆ. ಇದರಲ್ಲಿ(ಸಿಪಿಐ(ಎಂ): 4, ಸಿಪಿಐ: 2, ಸಿಪಿಐ(ಎಂಎಲ್): 2) ಸ್ಥಾನಗಳನ್ನು ಗೆದ್ದಿವೆ. 17ನೇ ಲೋಕಸಭೆಯಲ್ಲಿ 5 ಎಂಪಿ ಗಳನ್ನು ಹೊಂದಿದ್ದೆವು, ಆದರೀಗ  8 ಸ್ಥಾನಗಳನ್ನು ‌ಹೊಂದಿದ್ದೇವೆ. ಸಿಪಿಐ(ಎಂಎಲ್) ಬಿಹಾರದಿಂದ 2 ಸ್ಥಾನಗಳನ್ನು ಗೆದ್ದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಸಿಪಿಐ-ಎಂ ಈ ಬಾರಿ 52 ಸ್ಥಾನಗಳಿಗೆ ಸ್ಪರ್ಧಿಸಿತ್ತು. 2019 ರಲ್ಲಿ 71 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೆವು. (ಇದರಲ್ಲಿ ಸಿಪಿಐ-ಎಂ ಬೆಂಬಲಿತ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಇದ್ದರು). 2019 ರಲ್ಲಿ 1,14,00,783 ಮತಗಳನ್ನು ಪಡೆದಿದ್ದೆವು. ಇದಕ್ಕೆ ಹೋಲಿಸಿದರೆ ನಾವು ಈ ಬಾರಿ ಗಳಿಸಿದ ಒಟ್ಟು ಮತಗಳು 1,13,42,553 ಸ್ವಲ್ಪ ‌ಕಡಿಮೆಯೇ ಆಗಿದೆ.  2024 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪ್ರತಿ ಕ್ಷೇತ್ರದಲ್ಲಿ 2,18,126 ಸರಾಸರಿ ಮತಗಳು ಬಂದಿವೆ. 2019 ರಲ್ಲಿ 1,60,574 ಕ್ಕೆ ಹೋಲಿಸಿದರೆ  ಸ್ವಲ್ಪಮಟ್ಟಿಗೆ  ಸರಾಸರಿ ಮತಗಳಿಕೆಯಲ್ಲಿ ಹೆಚ್ಚಾಗಿದೆ. 2019 ರಲ್ಲಿ 2 ಸ್ವತಂತ್ರರು ಸೇರಿದಂತೆ ಶೇ.1.86  ಹೋಲಿಸಿದರೆ ಈ ಬಾರಿ ನಮ್ಮ ಮತ ಗಳಿಕೆ ಶೇ1.76 ಆಗಿದ್ದು, ಸ್ವಲ್ಪ ಕುಸಿದಿದೆ. ಅಧಿಕೃತವಾಗಿ, ಸ್ವತಂತ್ರರ ಮತಗಳನ್ನು ಪಕ್ಷದ ಮತಗಳಾಗಿ ಪರಿಗಣಿಸುವುದಿಲ್ಲ. ಸ್ವತಂತ್ರರನ್ನು ಹೊರತುಪಡಿಸಿ, 2024 ರಲ್ಲಿ ಶೇ.1.76 ರಷ್ಟು ಇದ್ದರೆ,  ನಮ್ಮ ಮತಗಳ ಹಂಚಿಕೆ 2019 ರಲ್ಲಿ ಶೇ.1.77 ರಷ್ಟು ಇತ್ತು.

ಪಕ್ಷದ ಸಾಧನೆ

ಕೇರಳ

 ಕೇರಳದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶಗಳು, ಸಿಪಿಐ(ಎಂ) ಮತ್ತು ಎಡ ಪ್ರಜಾಸತ್ತಾತ್ಮಕ ರಂಗಕ್ಕೆ (ಎಲ್‌.ಡಿ.ಎಫ್) ಹಿನ್ನಡೆ  ತಂದಿವೆ. 20 ಸ್ಥಾನಗಳ ಪೈಕಿ ಸಿಪಿಐ(ಎಂ)/ ಎಲ್‌.ಡಿ.ಎಫ್ ಕೇವಲ 1 ಸ್ಥಾನವನ್ನು (ಆಲತ್ತೂರು) ಗೆಲ್ಲಲು ಸಾಧ್ಯವಾಗಿದೆ ಅಷ್ಡೆ.  2019ರ ಚುನಾವಣೆಯಲ್ಲೂ ಸಿಪಿಐ(ಎಂ) ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು. ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್ 18 ಸ್ಥಾನಗಳನ್ನು ಗೆದ್ದಿದೆ ಮತ್ತು ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಲೋಕಸಭಾ ಸ್ಥಾನವನ್ನು (ತ್ರಿಶೂರ್) ಗೆಲ್ಲುವ ಮೂಲಕ ಪ್ರಮುಖ ಯಶಸ್ಸನ್ನು ಸಾಧಿಸಿದೆ. ಇದು ಗಂಭೀರವಾಗಿ ವಿಮರ್ಶಿಸ ಬೇಕಾದ ಅಂಶವಾಗಿದೆ.

ಎಲ್‌.ಡಿ.ಎಫ್‌ ನ ಮತಗಳ ಪಾಲು 2019 ರಲ್ಲಿ ಶೇ.35.10  ಹೋಲಿಸಿದರೆ ಈ ಬಾರಿ ಶೇ.33.35 ರಷ್ಟು ಪಡೆದು, ಶೇ‌ 1.75 ರಷ್ಟು ಕಡಿಮೆಯಾಗಿದೆ. ‌ ನಾವು 2014 ರ ಅಂಕಿ ಅಂಶಗಳನ್ನು ಗಮನಿಸಿದರೆ, ಒಂದು ದಶಕದ ಹಿಂದಿನ, ಎಲ್‌.ಡಿ.ಎಫ್ ಮತಪಾಲು ಶೇ. 40.2 ರಿಂದ ಶೇ.33.35 ಕ್ಕೆ ಕುಸಿದಿದೆ. ಅಂದರೆ, ಸುಮಾರು ಶೇ 7 ಅಂಕಗಳಷ್ಡು ಕುಸಿತ‌ಗೊಂಡಿದೆ.

ಯುಡಿಎಫ್  ಶೇ.45.12 ರಷ್ಟು ಮತಗಳನ್ನು ಪಡೆದು, ಇದು 2019 ಕ್ಕಿಂತ ಶೇ.2.8 ರಷ್ಟು ಕಡಿಮೆಯಾಗಿದೆ. 2014 ರಿಂದ ಹತ್ತು ವರ್ಷಗಳ ಅವಧಿಯಲ್ಲಿ (ಶೇ 42.04), ಯುಡಿಎಫ್ ಮತಪಾಲು ಶೇ‌3.98 ರಷ್ಟು ಹೆಚ್ಚಾಗಿದೆ.

ಬಿಜೆಪಿ /ಎನ್.ಡಿ.ಎ ಶೇ 19.2 ರಷ್ಟು ಮತಗಳನ್ನು ‌ಪಡೆದಿದೆ. ಇದು 2019 ಕ್ಕೆ ಹೋಲಿಸಿದರೆ, ಶೇ. 3.64 ರಷ್ಟು ಹೆಚ್ಚಳವಾಗಿದೆ. ಅಂದರೆ, ಕಳೆದ 10 ವರ್ಷಗಳಲ್ಲಿ, ಬಿಜೆಪಿ/ ಎನ್.ಡಿ.ಎ ಮತ ಗಳಿಕೆಯ ಪಾಲಿನಲ್ಲಿ ಸರಿಸುಮಾರಾಗಿ ದ್ವಿಗುಣ ಗೊಂಡಿರುವುದನ್ನು‌ ಗಮನಿಸಬೇಕು. ಇದು 2014 ರಿಂದ 2024 ರ ಅವಧಿಯಲ್ಲಿ ಅನುಕ್ರಮವಾಗಿ ಶೇ.10.08 ರಿಂದ ಶೇ.19.2 ಕ್ಕೆ ಏರಿಕೆಯಾಗಿದೆ.

ಯು.ಡಿ.ಎಫ್‌’ ನ ಗೆಲುವಿಗೆ ಮತ್ತು ಎಲ್‌.ಡಿ.ಎಫ್‌ ನ ಸೋಲಿಗೆ ಪ್ರಮುಖ ರಾಜಕೀಯ ಅಂಶವೆಂದರೆ, ಗಣನೀಯ ವಿಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರಿಗೆ, ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಯು ಇಂಡಿಯಾ ಕೂಟವನ್ನು‌  ಮುನ್ನಡೆಸುತ್ತಿರುವ ಕಾಂಗ್ರೆಸ್‌ ನಿಂದ  ಮಾತ್ರ ಕಾರ್ಯಸಾಧ್ಯವೆಂದು ಪರಿಗಣಿಸಲ್ಪಟಿದ್ದು. ಹಾಗಾಗಿ, ಬಿಜೆಪಿಯ ಸೋಲು ಮತ್ತು ಪರ್ಯಾಯ ಸರ್ಕಾರ ರಚನೆಯಲ್ಲಿ ಎಡಪಕ್ಷಗಳು ಅವರಿಗೆ ಪ್ರಮುಖ ಪಾತ್ರವಾಗಿ ಕಂಡುಬರಲಿಲ್ಲ. 2019 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗಲೂ ಇದೇ ಪ್ರವೃತ್ತಿ ಕಂಡು ಬಂದಿತ್ತು. ಮುಸ್ಲಿಮರು ಮತ್ತು ಜಾತ್ಯತೀತ ಮತದಾರರ ಒಂದು ವಿಭಾಗವು ಯು.ಡಿ.ಎಫ್‌’  ನ ಹಿಂದೆ ಅಣಿ ನೆರೆಯುವುದರೊಂದಿಗೆ ಈ ಬಾರಿಯು ಈ ಪ್ರವೃತ್ತಿ ಮುಂದುವರೆಯಿತು. ಬಿಜೆಪಿ ಮತ್ತು ಅದರ ಬಹುಸಂಖ್ಯಾತ ಕೋಮುವಾದದ ವಿರುದ್ಧ ತಾವು ಅತ್ಯಂತ ದೃಢ ಹೋರಾಟಗಾರರು ಎಂಬ ಎಲ್‌.ಡಿ.ಎಫ್‌ ನ ಪ್ರಬಲ ಪ್ರಚಾರವನ್ನು  ಈ ಪ್ರವೃತ್ತಿಯು ಮೀರಿ ನಿಂತಿದೆ.

ಎಲ್‌.ಡಿ.ಎಫ್‌ ‌ನ ಚುನಾವಣಾ ಬೆಂಬಲದ ಸವೆತಕ್ಕೆ, ರಾಜ್ಯ ಸರ್ಕಾರ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳಿಂದಾಗಿ ವಿವಿಧ ವರ್ಗದ ಜನರು ಎದುರಿಸುತ್ತಿರುವ ತೊಂದರೆಗಳಿಂದ ಉಂಟಾದ ಅಸಮಾಧಾನ ಮತ್ತೊಂದು‌ ಕಾರಣ. ಕೇಂದ್ರ ಸರಕಾರವು ಎಲ್‌.ಡಿ.ಎಫ್‌ ಸರಕಾರದ ವಿರುದ್ಧ ತಾರತಮ್ಯ ಧೋರಣೆ ಅನುಸರಿಸಿ ಅದಕ್ಕೆ ನೀಡಬೇಕಾದ ಆರ್ಥಿಕ ಸಂಪನ್ಮೂಲದಿಂದ ರಾಜ್ಯ ಸರ್ಕಾರವು ವಂಚಿತವಾಗಿತ್ತು. ಇದು ಸಮಾಜ ಕಲ್ಯಾಣ ಪಿಂಚಣಿ ಮತ್ತು ಇತರೆ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿರಲು ಕಾರಣವಾಯಿತು. ಇದರಿಂದಾಗಿ ‘ಮಾವೇಲಿ ಸ್ಟೋರ್‌’ ಗಳು ಮತ್ತು ‘ಸಪ್ಲೈಕೋ’ ಮೂಲಕ ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆಯನ್ನು ಒದಗಿಸುವುದು ಮತ್ತು ಸರ್ಕಾರಿ ನೌಕರರಿಗೆ ಡಿ.ಎ ಬಾಕಿ ಪಾವತಿ ಮಾಡುವುದು ಸಾಧ್ಯವಾಗಲಿಲ್ಲ.. ಜೊತೆಯಲ್ಲಿ ಯು.ಡಿ.ಎಫ್ ಮತ್ತು ಮಾಧ್ಯಮಗಳು ಎಲ್‌.ಡಿ.ಎಫ್‌ ಸರ್ಕಾರದ ವಿರುದ್ಧ ಪ್ರತಿಕೂಲ ಪ್ರಚಾರವನ್ನು ನಡೆಸಿದ್ದು,  ಕೆಲವು ವಿಭಾಗಗಳ ಮೇಲೆ ಪ್ರಭಾವ ಬೀರಿತು. ರಾಜ್ಯಗಳ ಹಕ್ಕುಗಳ ಮೇಲೆ ಕೇಂದ್ರದ ದಾಳಿಯ ವಿರುದ್ಧ ಎಲ್‌.ಡಿ.ಎಫ್‌ ‌ಅಭಿಯಾನದ ಹೊರತಾಗಿಯೂ, ಈ ವಿಷಯದಲ್ಲಿ ಕೇಂದ್ರ ಸರ್ಕಾರದ ತಪ್ಪಿತಸ್ಥತೆಯ ಬಗ್ಗೆ ಕೆಲವು ವಿಭಾಗಗಳ ಜನರಿಗೆ ಮನವರಿಕೆಯಾಗಲಿಲ್ಲ.

ಇದರೊಂದಿಗೆ ತೆಂಗಿನನಾರು, ಗೋಡಂಬಿ ಮತ್ತು ಕೈಮಗ್ಗದಂತಹ ಸಾಂಪ್ರದಾಯಿಕ ಕೈಗಾರಿಕೆಗಳ ಸವೆತ ಮತ್ತು ಈ ವಲಯಗಳಲ್ಲಿನ ಉದ್ಯೋಗ ಇಲ್ಲದ ಪರಿಸ್ಥಿತಿ, ಕಾರ್ಮಿಕ ವರ್ಗದ ಈ ವಲಯದಲ್ಲಿ ಕಾರ್ಮಿಕ ಸಂಘಗಳು ಮತ್ತು ಪಕ್ಷದ ಬಲವಾದ ಅಡಿಪಾಯವನ್ನು ದುರ್ಬಲಗೊಳಿಸಿತು. ಇದು ಆಯಾ ಪೀಡಿತ ಪ್ರದೇಶಗಳಲ್ಲಿ ನಮ್ಮ ಮತಬಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

ಹಲವಾರು ಕ್ಷೇತ್ರಗಳಲ್ಲಿ ನಮ್ಮ ಸಾಂಪ್ರದಾಯಿಕ ನೆಲೆಯ ಸವೆತ ಉಂಟಾಗಿ ಬಿಜೆಪಿಗೆ ವರವಾಗಿ‌ ಪರಿಣಮಿಸಿರುವುದು, ಚುನಾವಣಾ ಫಲಿತಾಂಶಗಳ ಚಿಂತಾಜನಕ ಅಂಶ. ತ್ರಿಶೂರ್‌ನಲ್ಲಿ ಬಿಜೆಪಿಯ ಯಶಸ್ಸಿಗೆ ಕಾಂಗ್ರೆಸ್‌ ಮೂಲ ಕಾರಣವಾದರೆ,  ಕ್ರೈಸ್ತರ ಒಂದು ವಿಭಾಗದ ಮತಗಳು ಬಿಜೆಪಿ ಕಡೆ ವಾಲಿದ್ದು ಪ್ರಮುಖ ಕಾರಣವಾಯಿತು. ನಮ್ಮ ಕೆಲವು ಮತಗಳ ನೆಲೆಗಳು ಬಿಜೆಪಿಗೆ ಹಲವೆಡೆ ಹೋಗಿರುವುದು ವಾಸ್ತವಿಕ. ಇದು ವಿಶೇಷವಾಗಿ ಅಟ್ಟಿಂಗಲ್ ಮತ್ತು ಆಲಪ್ಪುಳದಂತಹ ಕ್ಷೇತ್ರಗಳಲ್ಲಿ ಕಂಡುಬಂದಿದೆ.  ನಾವು ಇಲ್ಲಿ 684 ಮತಗಳಿಂದ ಸೋತಿದ್ದೇವೆ. “ಹಿಂದೂ ಭಾವನೆಗಳು” ಮತ್ತು ‘ಜಾತಿ ಪ್ರಭಾವ’ ವು ಇತರ ಸ್ಥಾನಗಳಲ್ಲಿಯೂ ಸ್ವಲ್ಪ ಮಟ್ಟಿಗೆ ನಮ್ಮ ಮತಗಳ ಅಡಿಪಾಯದ ಮೇಲೆ ಪರಿಣಾಮ ಬೀರಿರುವುದು ಕಂಡು ಬಂದಿದೆ.

ಹಿಂದುತ್ವ ರಾಜಕಾರಣವನ್ನು ಮುನ್ನಡೆಸುವ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಗಳು ಅವರಿಗೆ ಫಲಿತಾಂಶವನ್ನು ತಂದುಕೊಟ್ಟಿದೆ. ಅವರು ತಮ್ಮ ಹಿಂದುತ್ವ ಮತ್ತು ಅಲ್ಪಸಂಖ್ಯಾತರ ವಿರೋಧಿ ರಾಜಕೀಯವನ್ನು ಪ್ರಚಾರ ಮಾಡಲು ದೇವಸ್ಥಾನಗಳು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು‌ ಚೆನ್ನಾಗಿ ಬಳಸುತ್ತಿದ್ದಾರೆ. ಆಯ್ದ ಜಾತಿ ಗುಂಪುಗಳನ್ನು ಭೇದಿಸಲು, ಕೇಂದ್ರದ ಹಲವು ಯೋಜನೆಗಳ ಸೌಲಭ್ಯಗಳನ್ನು ಅವರು ಬಳಸುತ್ತಿದ್ದಾರೆ. ಅವರ ರಾಜಕೀಯ ಚಟುವಟಿಕೆಗಳನ್ನು ಎದುರಿಸಲು ನಾವು ಸಾಕಷ್ಟು ಗಮನ ಹರಿಸಿಲ್ಲ ಎಂಬುದನ್ನು ಸ್ವಯಂ ವಿಮರ್ಶಾತ್ಮಕವಾಗಿ ಗಮನಿಸಬೇಕು. ಮುಂಬರುವ ದಿನಗಳಲ್ಲಿ ಇದನ್ನು ಆದ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳಬೇಕು.

ಈ ಚುನಾವಣೆಯಲ್ಲಿ ಜಾತಿ ಮತ್ತು ಕೋಮುವಾದಿ ಸಂಘಟನೆಗಳು ಹೆಚ್ಚಿನ ಪಾತ್ರ ನಿರ್ವಹಿಸಿವೆ. ಎಸ್‌ಎನ್‌ಡಿಪಿ (ಇಳವ ಸಂಘಟನೆ) ನಾಯಕತ್ವವು ಬಿಜೆಪಿ ಪರವಾಗಿ ಕೆಲಸ ಮಾಡಿದೆ.  ಜಮಾತ್-ಎ-ಇಸ್ಲಾಮಿ ಮತ್ತು ಎಸ್‌ಡಿಪಿಐ – ಎರಡು ಉಗ್ರಗಾಮಿ ಸಂಘಟನೆಗಳು – ಮುಸ್ಲಿಂ ಲೀಗ್‌ನೊಂದಿಗೆ ಸೇರಿಕೊಂಡು ಎಲ್‌ಡಿಎಫ್ ವಿರುದ್ಧ ಮತ್ತು ಕಾಂಗ್ರೇಸ್ ಪಕ್ಷದ ಪರವಾಗಿ ತೀವ್ರ ಪ್ರಚಾರ ನಡೆಸಿದ್ದನ್ನು ಇಲ್ಲಿ ಗಮನಿಸಲಾಗಿದೆ.

  ಎಸ್‌ಡಿಪಿಐ ಮತ್ತು ಜಮಾತ್-ಎ-ಇಸ್ಲಾಮಿ ಯಂತಹ ಉಗ್ರಗಾಮಿ ಗುಂಪುಗಳ ರಾಜಕೀಯ ಮತ್ತು ಸಿದ್ಧಾಂತವನ್ನು ಹಾಗೂ ಇವುಗಳೊಂದಿಗೆ ಮುಸ್ಲಿಂ ಲೀಗ್‌ನ ಸಹಯೋಗವನ್ನು ಬಹಿರಂಗಪಡಿಸಬೇಕಾಗಿದೆ.  ಏಕೆಂದರೆ, ಮುಸ್ಲಿಂ ಅಲ್ಪಸಂಖ್ಯಾತರ ಕುರಿತಾದ ನಮ್ಮ ಕಾರ್ಯವಿಧಾನವು ಜಾತ್ಯತೀತ ಪ್ರಜಾಸತ್ತಾತ್ಮಕ ತತ್ವಗಳನ್ನು ಆಧರಿಸಿದೆ ಎಂಬುದನ್ನು ನೇರವಾಗಿ ನಾವು ಆ ಸಮುದಾಯದ ಮಧ್ಯೆ ಕೊಂಡೊಯ್ಯಬೇಕು. ಬಿಜೆಪಿ ನಡೆಸುತ್ತಿರುವ ಮುಸ್ಲಿಂ ತುಷ್ಟೀಕರಣದ ಸುಳ್ಳು ಆರೋಪವನ್ನು ತಳ್ಳಿಹಾಕಬೇಕು. ಎಸ್‌.ಎನ್‌.ಡಿ.ಪಿ ನಾಯಕತ್ವದ ಸಂಶಯಾಸ್ಪದ ಪಾತ್ರವನ್ನು ಬಹಿರಂಗಪಡಿಸಬೇಕು. ಈ ನಿಟ್ಟಿನಲ್ಲಿ ಅವರನ್ನು ಎದುರಿಸಲು ಪಕ್ಷವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.  

ಕ್ರಿಶ್ಚಿಯನ್ ಚರ್ಚ್ ಸಂಸ್ಥೆಗಳ ಒಂದು ವಿಭಾಗವು ಬಿಜೆಪಿ ಪರವಾಗಿ ವಾಲಿತ್ತು ಎಂಬುದನ್ನು ಗಮನಿಸಲಾಗಿದೆ. ಚರ್ಚ್‌ನಲ್ಲಿ ಹೆಚ್ಚುತ್ತಿರುವ ಮುಸ್ಲಿಂ ವಿರೋಧಿ ಭಾವನೆಗಳನ್ನು ಬಿಜೆಪಿ ಚೆನ್ನಾಗಿ ಬಳಸಿಕೊಂಡಿತು ಮತ್ತು ಚರ್ಚ್ ನಾಯಕರನ್ನು ಓಲೈಸಲು ಓಲೈಸುವಿಕೆ ಮತ್ತು ಬೆದರಿಕೆಯ ಕೂಡುನೀತಿಯನ್ನು ಅಳವಡಿಸಿಕೊಂಡಿತು. ಹೀಗಾಗಿ,ಬಿಜೆಪಿ ಅಭ್ಯರ್ಥಿಗೆ ತ್ರಿಶೂರ್ ನಲ್ಲಿ ಬೆಂಬಲ ನೀಡಿದ್ದು ಇದರ ಒಂದು ಉದಾಹರಣೆ.

  ಪಕ್ಷದ ಸಾಮಾಜಿಕ ಮಾಧ್ಯಮ ಪ್ರಚಾರವು ಯು.ಡಿ.ಎಫ್ ಮತ್ತು ಬಿಜೆಪಿಗಿಂತ  ಹಿಂದುಳಿದಿದೆ ಎಂದು ರಾಜ್ಯ ಸಮಿತಿಯ ಪರಿಶೀಲನೆಯಲ್ಲಿ  ತಿಳಿಸಲಾಗಿದೆ. ಎಲ್ಲಾ ಹಂತಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರವನ್ನು ವಿಸ್ತರಿಸಲು ಮತ್ತು ಕಂಟೆಂಟ್  (ಪ್ರಚಾರ ಸಾಮಗ್ರಿ)ಗಳ ಉತ್ಪಾದನೆಯನ್ನು ಬಲಪಡಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.  

ಚುನಾವಣಾ ಪೂರ್ವ ಹಂತದಲ್ಲಿ, ಪ್ರತಿ ಕ್ಷೇತ್ರದಲ್ಲಿ ಮತದಾನದ ನಂತರ ನಾವು ಪಡೆಯಬಹುದಾದ ಮತಗಳ ಅಂದಾಜು ಮಾಡಲಾಗಿತ್ತು. ಫಲಿತಾಂಶಗಳು ಬಂದ ಆ ‌ನಂತರದಲ್ಲಿ, ಅದು ನಮ್ಮ ಅಂದಾಜಿನಲ್ಲಿ ವ್ಯಾಪಕ ಅಂತರವು ಕಂಡು ಬಂದಿದೆ. ಇದರಿಂದ ಗಮನಿಸಿದ್ದು ಏನೆಂದರೆ, ಪಕ್ಷದ ಘಟಕಗಳಿಗೆ ಜನರ ಮನಸ್ಥಿತಿ ಮತ್ತು ಅವರ ಆದ್ಯತೆಗಳನ್ನು ಅಳೆಯಲು ಸಾಧ್ಯವಾಗಲಿಲ್ಲ ಎಂಬುದು. ಜನರೊಂದಿಗೆ ಪಕ್ಷದ ನೇರ ಸಂಪರ್ಕ ದುರ್ಬಲವಾಗುತ್ತಿರುವುದನ್ನು ಇದು ಎತ್ತಿ ತೋರಿಸಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಿ ಕೊಳ್ಳಬೇಕಾಗಿದೆ.  

ಯುವಕರು ಮತ್ತು ವಿದ್ಯಾರ್ಥಿಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಲ್ಲಿ ದೌರ್ಬಲ್ಯವನ್ನು ರಾಜ್ಯ ಸಮಿತಿಯ ಪರಾಮರ್ಶೆ ವರದಿ ಎತ್ತಿ ತೋರಿಸಿದೆ. ಈಗ ತಾನೇ 18 ವರ್ಷ ದಾಟಿದ ಯುವಕರ ಒಂದು ಶ್ರೇಣಿಯು‌ ರಾಜಕೀಯದ ಬಗ್ಗೆ ಒಲವು ಮತ್ತು ತಮ್ಮ ಮತ ಚಲಾಯಿಸಲು ವಿಶೇಷ ಕಾಳಜಿ ತೋರುತ್ತಿಲ್ಲ. ಹಾಗಾಗಿ, ಯುವಜನತೆ ಮತ್ತು ವಿದ್ಯಾರ್ಥಿ ಚಳವಳಿಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಹೆಚ್ಚಿಸುವತ್ತ ಹೆಚ್ಚು ಗಮನಹರಿಸಬೇಕು. ಆದರೆ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಪಡೆಗಳು ವ್ಯಾಪಕವಾಗಿ ಕಾರ್ಯನಿರ್ವಹಿಸಿದ್ದವು ಎಂಬುದನ್ನು ರಾಜ್ಯ ಸಮಿತಿಯ‌ ಪರಾಮರ್ಶಿಸಿದೆ.  

ವಿಮರ್ಶಾ ಟಿಪ್ಪಣಿ ಯಲ್ಲಿ ಪಂಚಾಯತ್‌ಗಳು, ಸಹಕಾರಿ ಸಂಸ್ಥೆಗಳು ಮತ್ತು ವಿವಿಧ ಹಂತಗಳಲ್ಲಿ ಭ್ರಷ್ಟಾಚಾರದ ಬೆಳವಣಿಗೆಯ ನಿದರ್ಶನಗಳನ್ನು ಗುರುತಿಸಲಾಗಿದೆ.  ಇದನ್ನು ಸೂಕ್ತವಾಗಿ ಪರಿಶೀಲಿಸಿ, ಇದಕ್ಕೆ  ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು.   ಮೇಲಿಂದ ಕೆಳಗಿನ ಹಂತದ ಕಾರ್ಯಕರ್ತರ ದುರಹಂಕಾರದ ವರ್ತನೆಯ ನಿದರ್ಶನಗಳು ಜನರನ್ನು ಪಕ್ಷದಿಂದ ದೂರವಿಡುತ್ತಿವೆ ಎಂದು ವಿಮರ್ಶಿಸಲಾಗಿದೆ. ತಪ್ಪು ಪ್ರವೃತ್ತಿಗಳು ಮತ್ತು ನಡವಳಿಕೆಯನ್ನು ತೊಡೆದುಹಾಕಲು ತಿದ್ದುಪಡಿಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಹಾಗಾಗಿ,ಯೋಜಿತ ರೀತಿಯಲ್ಲಿ  ತಿದ್ದುಪಡಿ ಕೈಗೊಳ್ಳಬೇಕಾಗಿದೆ.   ಹಿಂದುತ್ವ ಶಕ್ತಿಗಳ ಸೈದ್ಧಾಂತಿಕ ಮತ್ತು ರಾಜಕೀಯ ಪ್ರಭಾವವನ್ನು ಎದುರಿಸಲು ಪಕ್ಷವು ಕ್ರಮಗಳನ್ನು ಕೈಗೊಂಡು, ಅಭಿವೃದ್ಧಿ ಪಡಿಸಬೇಕಾಗಿದೆ. 

ಕೇರಳದಲ್ಲಿ , ಎಲ್‌.ಡಿ.ಎಫ್‌ ‘ ಗೆ ವಿರುದ್ದವಾಗಿ ಬಿಜೆಪಿ ಯೊಂದಿಗೆ, ಶಾಮೀಲಾಗಿ ವರ್ತಿಸುವ  ಕಾಂಗ್ರೆಸ್‌ನ ಅವಕಾಶವಾದಿ ನಿಲುವನ್ನು ನಾವು ಬಹಿರಂಗಪಡಿಸುವ ಕಾರ್ಯವನ್ನು ಮುಂದುವರಿಸಬೇಕು. ರಾಜ್ಯ ಸರ್ಕಾರ ದುಡಿಯುವ ಜನರಿಗೆ ಸಮಾಜ ಕಲ್ಯಾಣ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಅಡಚಣೆಯಿಲ್ಲದೆ ತಲುಪಿಸಲು ಆದ್ಯತೆ ನೀಡುತ್ತದೆ ಎಂದು ಘೋಷಿಸಬೇಕು. ಬಡವರು ಮತ್ತು ದುಡಿಯುವ ಜನರಿಗಾಗಿ ಸರ್ಕಾರದ ನಿಧಿ ಹಂಚಿಕೆ ಮತ್ತು ವೆಚ್ಚಗಳಿಗೆ ಆದ್ಯತೆ ನೀಡುವ ಎಲ್ಲಾ ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ.  

ರಾಜ್ಯ ಸಮಿತಿಯು ವಿವಿಧ ಕ್ಷೇತ್ರಗಳಲ್ಲಿ ಕಾರ್ಯಗಳನ್ನು ನಿಗದಿ ಪಡಿಸುತ್ತದೆ ಮತ್ತು ಸಂಸ್ಥೆಯಲ್ಲಿನ ನ್ಯೂನತೆಗಳನ್ನು ನಿವಾರಿಸಲು ಮತ್ತು ತಪ್ಪು ಪ್ರವೃತ್ತಿಗಳನ್ನು ಸರಿಪಡಿಸುವ ಕ್ರಮಗಳನ್ನು ಶೀಘ್ರದಲ್ಲೇ ನಡೆಯಲಿರುವ ರಾಜ್ಯ ಸಮಿತಿಯ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸುತ್ತದೆ.  

ಪಶ್ಚಿಮ ಬಂಗಾಳ:   ಈ ಚುನಾವಣೆಯಲ್ಲಿ ಸಿಪಿಐ(ಎಂ) ಮತ್ತು ಎಡರಂಗದ ಸಾಧನೆ ನಿರಾಶಾದಾಯಕವಾಗಿದ್ದು, ನಾವು ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. 42 ಸ್ಥಾನಗಳ ಪೈಕಿ ಟಿಎಂಸಿ 29, ಬಿಜೆಪಿಗೆ 12 ಮತ್ತು ಕಾಂಗ್ರೆಸ್‌ಗೆ 1 ಸ್ಥಾನ ಮಾತ್ರ ಲಭಿಸಿದೆ.   ಮುರ್ಷಿದಾಬಾದ್ ಕ್ಷೇತ್ರದಲ್ಲಿ ಮಾತ್ರ ಸಿಪಿಐ(ಎಂ) ಎರಡನೇ ಸ್ಥಾನದಲ್ಲಿದೆ. 2019 ರಲ್ಲಿ 40 ಸ್ಥಾನಗಳಲ್ಲಿ ಸ್ಪರ್ಧಿಸಿ ಶೇ 7.44 ರಷ್ಟು  ಮತ ಪಡೆದಿತ್ತು. ಇದಕ್ಕೆ ಹೋಲಿಸಿದರೆ  ಈ ಬಾರಿ 30 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಡರಂಗವು ಶೇ.6.33 ರಷ್ಟು ಮತಗಳನ್ನು ಮಾತ್ರ ಪಡೆದಿದೆ. CPI(M) 23 ಸ್ಥಾನಗಳಲ್ಲಿ ಸ್ಪರ್ಧಿಸಿ ಶೇ.5.68 ರಷ್ಟು ಮತಗಳನ್ನು ಪಡೆದಿದ್ದರೆ, 2019 ರಲ್ಲಿ, ಪಕ್ಷವು 31 ಸ್ಥಾನಗಳಿಗೆ ಸ್ಪರ್ಧಿಸಿ ಶೇ. 6.28 ರಷ್ಟು ಮತಗಳನ್ನು ಗಳಿಸಿತ್ತು. 2019 ಕ್ಕೆ ಹೋಲಿಸಿದರೆ ಪ್ರತಿ ಸ್ಥಾನಕ್ಕೆ ಸರಾಸರಿ ಮತಪಾಲಿನಲ್ಲಿ ಹೆಚ್ಚಳವಾಗಿದೆ. ಆದರೆ ಒಟ್ಟಾರೆ ಮತಪಾಲಿನಲ್ಲಿ ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲದಿರುವುದು ನಿರಾಶಾದಾಯಕ ಪ್ರದರ್ಶನವಾಗಿದೆ.  

ಮೊದಲ ನಾಲ್ಕು ಹಂತದ ಮತದಾನದಲ್ಲಿ ಬೂತ್ ವಶಪಡಿಸಿಕೊಂಡ ಬಗ್ಗೆ ಯಾವುದೇ ದೂರುಗಳಿರಲಿಲ್ಲ. ಆದರೆ, ಐದನೇ, ಆರು ಮತ್ತು ಏಳನೇ ಹಂತಗಳಲ್ಲಿ ಎಡರಂಗ ಮತ್ತು ಕಾಂಗ್ರೆಸ್‌ನ ಮತಗಟ್ಟೆ ಏಜೆಂಟರ ಮೇಲೆ ದಾಳಿಗಳು ನಡೆದವು. ಮತದಾರರನ್ನು ಬೆದರಿಸಲಾಯಿತು ಮತ್ತು ಕೇಂದ್ರ ಪಡೆಗಳ ಅನುಪಸ್ಥಿತಿಯಲ್ಲಿ ಮತಗಟ್ಟೆಗಳಲ್ಲಿ ಗೋಲ್ ಮಾಲ್ ಮಾಡಲಾಯಿತು. ತೀರ್ಪನ್ನು ಸಂಪೂರ್ಣವಾಗಿ ತಿರುಚಿರುವ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಟಿಎಂಸಿ ಅತ್ಯಂತ ಕೆಟ್ಟ ದಾಳಿ ನಡೆಸಿತ್ತು.  

ಕೇಂದ್ರದಲ್ಲಿ ಹತ್ತು ವರ್ಷಗಳ ಮೋದಿ ಆಡಳಿತವು, ಸರ್ವಾಧಿಕಾರಿ ಮತ್ತು ಕೋಮು- ಕಾರ್ಪೊರೇಟ್ ಶಾಮೀಲು ನೀತಿಗಳ ಮೂಲಕ ಭಾರತೀಯ ಸಂವಿದಾನದ ಜಾತ್ಯಾತೀತ ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಿದ ಬಿಜೆಪಿಯ ಸೋಲಿಗೆ ಪಕ್ಷ ಮತ್ತು ಎಡರಂಗವು ಬಿರುಸಿನ ಪ್ರಚಾರ ಕೈಗೊಂಡಿತ್ತು. ಅದೇ ಸಮಯದಲ್ಲಿ, ಕಳೆದ ಹದಿಮೂರು ವರ್ಷಗಳಿಂದ ರಾಜ್ಯವನ್ನು ಆಳುತ್ತಿರುವ ಟಿ.ಎಂ.ಸಿ ಸರ್ಕಾರವು ಭ್ರಷ್ಟತೆ ಮತ್ತು ಅಪರಾಧ ಜೋಡಣೆಯನ್ನು ಸ್ಥಾಪಿಸಿದೆ; ಪ್ರತಿಭಟನೆ, ವಿರೋಧವನ್ನು ನಿಗ್ರಹಿಸುವ ಮೂಲಕ ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ಆಕ್ರಮಣ ಮಾಡುವ ಮೂಲಕ ಆಡಳಿತ ನಡೆಸುತ್ತಿದೆ. ಟಿಎಂಸಿ’ಯನ್ನು ಸೋಲಿಸಲು ಪಕ್ಷವು ಕರೆ ನೀಡಿತ್ತು ಆ ನಿಟ್ಟಿನಲ್ಲಿ ಸುದೀರ್ಘವಾದ ‌ಪ್ರಚಾರವನ್ನು‌ ನಡೆಸಿತು.  

ಪಶ್ಚಿಮ ಬಂಗಾಳದ ರಾಜಕೀಯ ಪರಿಸ್ಥಿತಿಯು 2019 ರ ಲೋಕಸಭಾ ಚುನಾವಣೆಯಿಂದ ಟಿಎಂಸಿ ಮತ್ತು ಬಿಜೆಪಿ ನಡುವೆ ದ್ವಿಪಕ್ಷೀಯತೆಯ ಬೆಳವಣಿಗೆಯನ್ನು ಕಂಡಿದೆ. 2021ರ ವಿಧಾನಸಭಾ ಚುನಾವಣೆಯಲ್ಲೂ ಇಂತಹ ಧ್ರುವೀಕರಣ ಮುಂದುವರೆಯಿತು. ಸಿಪಿಐ(ಎಂ) ಮತ್ತು ಎಡಪಕ್ಷಗಳನ್ನು ಕಡೆಗಣಿಸುವ ಇಂತಹ ದ್ವಿ-ಧ್ರುವೀಕರಣದ ಪರಿಸ್ಥಿತಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಎರಡೂ ಆಸಕ್ತಿ ಹೊಂದಿದ್ದವು. ನಿರಂತರ ಮತ್ತು ವ್ಯವಸ್ಥಿತ ಪ್ರಚಾರದ ಹೊರತಾಗಿಯೂ, ನಾವು ಈ ದ್ವಿಪಕ್ಷೀಯತೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಒಂದು ಕಡೆ ಇಂಡಿಯಾ ಕೂಟದ ನಾಯಕತ್ವ ವಹಿಸಿಕೊಂಡಿದ್ದೇನೆ ಎನ್ನುತ್ತಾ, ಇನ್ನೊಂದು ಕಡೆ ತನಗೆ ಇಷ್ಟ ಬಂದ ಹಾಗೆ ದೂರವಿರುತ್ತಾ . ಬಳಸಿಕೊಂಡರು. ಇದು ಜಾತ್ಯಾತೀತ ಮತದಾರರು, ವಿಶೇಷವಾಗಿ ಅಲ್ಪಸಂಖ್ಯಾತರು, ಟಿಎಂಸಿ ಗೆ ಆಕರ್ಷಿತರಾಗಲು ಕಾರಣವಾಯಿತು.  

ಬಿಜೆಪಿ ಮತ್ತು ಮೋದಿಯವರ ಸರ್ವಾಧಿಕಾರಿ ಆಡಳಿತದ ವಿರುದ್ಧ (ಪಕ್ಷ) ನಡೆಸಿದ ಪ್ರಚಾರವೂ ಬಿಜೆಪಿಯ ಮುನ್ನಡೆಗೆ ತಡೆಯೊಡ್ಡಲು ಕೊಡುಗೆ ನೀಡಿತು. ಬಿಜೆಪಿ ಕಳೆದ ಬಾರಿ ಗೆದ್ದಿದ್ದ 6 ಸ್ಥಾನಗಳನ್ನು ಕಳೆದುಕೊಂಡಿದೆ – ಅದರ ಸ್ಥಾನ 18 ರಿಂದ 12 ಕ್ಕೆ ಇಳಿದಿದೆ. ಆದರೆ ಬಿಜೆಪಿಯ ಮತಪಾಲು 2019 ರಲ್ಲಿ ಶೇ.40.25 ರಿಂದ 2024 ರಲ್ಲಿ ಶೇ‌38.74 ಕ್ಕೆ ಅಂದರೆ, ಶೇ.1.51 ರಷ್ಟು ಮಾತ್ರ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು. ಮೇಲಾಗಿ, 2021 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ. ಶೇ.0.77 ರಷ್ಟು ಅದರ ಮತ ಪಾಲು ಸ್ವಲ್ಪ ಹೆಚ್ಚಾಗಿದೆ. ಆದ್ದರಿಂದ ಬಿಜೆಪಿ ಮತ್ತು ಹಿಂದುತ್ವ ಶಕ್ತಿಗಳ ವಿರುದ್ಧ ನಮ್ಮ ರಾಜಕೀಯ-ಸೈದ್ಧಾಂತಿಕ ಅಭಿಯಾನವನ್ನು ಉತ್ತಮ ಪಡಿಸುವ ಮತ್ತು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳುವ ಅಗತ್ಯವಿದೆ.  

ಮಮತಾ ಬ್ಯಾನರ್ಜಿ ಚುನಾವಣಾ ‌ಪ್ರಚಾರದ ಸಂದರ್ಭದಲ್ಲಿ ಸಿಪಿಐಎಂ ಚುನಾವಣೆಯಲ್ಲಿ ಟಿಎಂಸಿ ವಿರುದ್ಧ ಸ್ಪರ್ಧಿಸುವ ಮೂಲಕ  ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ನಿರಂತರವಾಗಿ ಆರೋಪಿಸಿದರು. ಆದಾಗ್ಯೂ, ಸಿಪಿಐ(ಎಂ) ನ ಮತಪಾಲಿನ ಹೆಚ್ಚಳದಿಂದಾಗಿ, ಹಲವಾರು ಕ್ಷೇತ್ರಗಳಲ್ಲಿ  ಬಿಜೆಪಿ ಸೋತಿದೆ ಎಂಬ ಅಂಶದಿಂದ ಈ ಆರೋಪವು ಸುಳ್ಳು ಎಂದು ಸಾಬೀತಾಗಿದೆ.   ಬಿಜೆಪಿ ಮತ್ತು ಟಿಎಂಸಿಯ ಸೋಲಿಗೆ ಕರೆ ನೀಡುವಾಗ,ವಿಶೇಷವಾಗಿ ಇದು ಸಂಸತ್ತಿನ ಚುನಾವಣೆಯಾದ್ದರಿಂದ, ಪ್ರಚಾರದಲ್ಲಿ ಇರಬೇಕಿದ್ದ ಬಿಜೆಪಿ ವಿರುದ್ಧ ಹೋರಾಡುವ ಒತ್ತು ಕಡಿಮೆಯಾಗಿ, ಸ್ಥಳಿಯವಾಗಿ, ಟಿಎಂಸಿ ವಿರುದ್ಧ ಹೆಚ್ಚಿನ ಒತ್ತು ನೀಡಲಾಯಿತು. ಕಳೆದ ವಿಧಾನಸಭೆ ಚುನಾವಣೆಯಿಂದಲೂ ಈ ಸಮಸ್ಯೆ ಮುಂದುವರಿದಿದ್ದು, ಪಕ್ಷದ ರಾಜಕೀಯ ನಿಲುವಿನ ಬಗ್ಗೆ ಕಾರ್ಯಕರ್ತರಿಗೆ ತಿಳುವಳಿಕೆ ನೀಡಲು ಕ್ರಮಕೈಗೊಳ್ಳಬೇಕಾಗಿದೆ.  

ಟಿಎಂಸಿ ಯು ತನ್ನ ಸಾಮೂಹಿಕ ಬೆಂಬಲವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ‘ಲಕ್ಷ್ಮೀರ್ ಭಂಡಾರ್‌’ ನಂತಹ ವಿವಿಧ ಯೋಜನೆಗಳು ಮತ್ತು ಕಲ್ಯಾಣ ಕ್ರಮಗಳ ಅಂಶಗಳು ಸಹಕಾರಿಯಾಗಿವೆ. ಆದಾಗ್ಯೂ, ಕೆಲವು ಪಕ್ಷದ ಘಟಕಗಳು ಮತ್ತು ಕಾರ್ಯಕರ್ತರು ಅದನ್ನು ಚುನಾವಣಾ ‘ಲಂಚ’ ಅಥವಾ ‘ಬಿಟ್ಟಿ ಕೊಡುಗೆ’ ಎಂದು ಪರಿಗಣಿಸಿ ದಾಳಿ ಮಾಡುವುದು ತಪ್ಪು ವಿಧಾನವಾಗಿತ್ತು, ಇದು ಬಡ ಜನರನ್ನು  ನಮ್ಮಿಂದ ದೂರವಿಟ್ಟಿತು. ವಿವಿಧ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ಕಲ್ಯಾಣ ಕ್ರಮಗಳ ಕುರಿತು  ಸೂಕ್ತ ಅರಿವು‌ ಇರಬೇಕಾಗುತ್ತದೆ.

ಅಭ್ಯರ್ಥಿಗಳ ಆಯ್ಕೆ, ವಿಶೇಷವಾಗಿ ಯುವ ಅಭ್ಯರ್ಥಿಗಳು ಮತ್ತು ವಿವಿಧ ರೀತಿಯಲ್ಲಿ ನಡೆಸಿದ ಚುನಾವಣಾ ಪ್ರಚಾರವು ಪಕ್ಷ ಮತ್ತು ಎಡಪಕ್ಷಗಳಿಗೆ ಸಹಾಯಕವಾಗಿದೆ. ಆದಾಗ್ಯೂ, ಹೆಚ್ಚಿನ ಚುನಾವಣಾ ಬೆಂಬಲವನ್ನು ಪಡೆಯುವ ದೃಷ್ಟಿಯಿಂದ ಇದು ಅಪೇಕ್ಷಿತ ಪರಿಣಾಮವನ್ನು ಬೀರಲಿಲ್ಲ ಎಂಬುದು ವಾಸ್ತವ ಸಂಗತಿ.

ಸುಮಾರು ಶೇ.12 ರಿಂದ 14 ರಷ್ಟು ಬೂತ್‌ಗಳಲ್ಲಿ ಪೋಲಿಂಗ್ ಏಜೆಂಟ್‌ಗಳನ್ನು‌ ನಿಯೋಜಿಸಿರಲಿಲ್ಲ  ಎಂದು ರಾಜ್ಯ ಸಮಿತಿ ಪರಿಶೀಲನಾ ವರದಿ ಗಮನಿಸಿದೆ. ಇದು ಪಕ್ಷದ ಸಂಘಟನೆಯ ದುರ್ಬಲ ಸ್ಥಿತಿಯನ್ನು ಸೂಚಿಸುತ್ತದೆ. ಹಿಂದಿನಿಂದಲೂ ಪಕ್ಷ ಅಸ್ತಿತ್ವದಲ್ಲಿರದ ಹಲವು ಕ್ಷೇತ್ರಗಳಲ್ಲಿ ‌ಇಂತಹ‌ ಪರಿಸ್ಥಿತಿ ಇದೆ. ಇದನ್ನು‌ ಸರಿಪಡಿಸಿ ಕೊಳ್ಳಬೇಕು. ಸಾಮೂಹಿಕ ಸಂಘಟನೆಗಳು ಮತ್ತು ಪಕ್ಷದ ಘಟಕಗಳನ್ನು ನಿರ್ಮಿಸಲು ಗ್ರಾಮೀಣ ಬಡವರಿಗೆ ಸಂಪರ್ಕ ಕಲ್ಪಿಸಲು ಹಲವಾರು ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತಳಮಟ್ಟದ ಕೆಲಸ ದುರ್ಬಲವಾಗಿದೆ ಅಥವಾ ಕಾರ್ಯನಿರ್ವಹಿಸುತ್ತಿಲ್ಲ. ವರ್ಗಾಧಾರಿತ ಚಳುವಳಿಗಳು ಮತ್ತು ಸಂಘಟನೆಗಳಿಲ್ಲದೆ, ನಮ್ಮ ರಾಜಕೀಯ ಪ್ರಭಾವ ಮತ್ತು ಚುನಾವಣಾ ನೆಲೆಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲದಂತ‌ ಪರಿಸ್ಥಿತಿ ಇನ್ನೂ ಇದೆ. ಪರಾಮರ್ಶೆಯಲ್ಲಿ ಗಮನಿಸಿದಂತೆ ಪಕ್ಷದಲ್ಲಿ ವರ್ಗ ದೃಷ್ಟಿಕೋನದಲ್ಲಿ ಲೋಪವಿದೆ ಮತ್ತು ಇದನ್ನು ಸರಿಪಡಿಸಬೇಕು.

ಸಂಘಟನೆಯ ದೌರ್ಬಲ್ಯಗಳು ಮತ್ತು ತಳಮಟ್ಟದಲ್ಲಿ ಸಕ್ರಿಯ ಪಕ್ಷದ ಘಟಕಗಳ ಕೊರತೆಯನ್ನು ಪರಿಶೀಲಿಸಬೇಕು ಮತ್ತು ಈ ಕೊರತೆಯನ್ನು ನೀಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ರಾಜ್ಯ ಸಮಿತಿಯ ವಿಸ್ತೃತ ಸಭೆಯನ್ನು ಆಗಸ್ಟ್ ನಲ್ಲಿ ನಡೆಸಿ, ಪಕ್ಷ ಸಂಘಟನಾ ಪರಾಮರ್ಶೆ  ನಡೆಸಲಾಗುವುದು

ತಮಿಳುನಾಡು:

ತಮಿಳುನಾಡು ಮತ್ತು ಪುದುಚೇರಿಯಲ್ಲಿ (ತಮಿಳುನಾಡು-39, ಪುದುಚೇರಿ-1) ಡಿಎಂಕೆ ನೇತೃತ್ವದ ‘ಇಂಡಿಯಾ’ ಬಣ ಎಲ್ಲಾ 40 ಸೀಟುಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಕಳೆದ ಬಾರಿ ತಮಿಳುನಾಡಿನಲ್ಲಿ 38 ಸ್ಥಾನಗಳನ್ನು ಗೆದ್ದಿತ್ತು, ಒಂದು ಕಡಿಮೆಯಿತ್ತು.

ಡಿಎಂಕೆ ನೇತೃತ್ವದ ಮೈತ್ರಿ 2019 ರ ಚುನಾವಣೆಯಲ್ಲಿ ಇದ್ದ ಅದೇ ಪಕ್ಷಗಳೊಂದಿಗೆ ರಾಜಕೀಯ ಹೊಂದಾಣಿಕೆ ಯನ್ನು ಮುಂದುವರಿಸಿದ್ದು, ಉತ್ತಮ ಪರಿಣಾಮ ಬೀರಿತು. ಎಐಎಡಿಎಂಕೆ-ಬಿಜೆಪಿ ಮೈತ್ರಿ ಮುರಿದು ಬಿದ್ದಿತ್ತು. ಇಂಡಿಯಾ ಕೂಟದ ವಿರುದ್ಧ ಎರಡು ಮೈತ್ರಿಗಳಿದ್ದವು – ಪಿಎಂಕೆ ಮತ್ತು ಕೆಲವು ಸಣ್ಣ ಪಕ್ಷಗಳನ್ನು ಒಳಗೊಂಡಿರುವ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತು ಡಿಎಂಡಿಕೆ ಮತ್ತು ಇತರ ಎರಡು ಸಣ್ಣ ಪಕ್ಷಗಳನ್ನು ಒಳಗೊಂಡಿರುವ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ ಆ ಎರಡು ಬಣಗಳು.

ಇಂಡಿಯಾ ಕೂಟ ಶೇ.46.85ರಷ್ಟು ಮತಗಳನ್ನು ಪಡೆದಿದೆ. ಇದರ ವಿಭಜನೆ ಹೀಗಿದೆ: ಡಿಎಂಕೆ- ಶೇ.26.93, ಕಾಂಗ್ರೆಸ್-ಶೇ.10.67, ಸಿಪಿಐ(ಎಂ)-ಶೇ.2.52, ಸಿಪಿಐ-ಶೇ.2.15, ವಿಸಿಕೆ-ಶೇ.2.17, ಐ.ಯು.ಎಂ,ಎಲ್-ಶೇ.1.17 ಮತ್ತು ಎಂ.ಡಿ.ಎಂ.ಕೆ-ಶೇ.1.24. ಶೇ.50ಕ್ಕಿಂತ ಹೆಚ್ಚು ಮತ ಪಡೆದ ಕಳೆದ ಬಾರಿಗಿಂತ (ಶೇ. 52.8ರಿಂದ ಶೇ. 46.8ಕ್ಕೆ ಇಳಿಕೆ) ಮೈತ್ರಿಕೂಟಕ್ಕೆ ಕಡಿಮೆ ಮತಗಳು ಲಭಿಸಿವೆ. ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟಗಳ ನಡುವಿನ ವಿರೋಧ ಮತಗಳ ವಿಭಜನೆಯು ಎಲ್ಲಾ ಸ್ಥಾನಗಳನ್ನು ಸ್ವೀಪ್ ಮಾಡಲು ಇಂಡಿಯಾ ಕೂಟಕ್ಕೆ ಸಹಾಯ ಮಾಡಿದೆ.

 ಸಿಪಿಐ(ಎಂ) ಮಧುರೈ ಮತ್ತು ದಿಂಡಿಗಲ್ ಎರಡು ಕ್ಷೇತ್ರಗಳಲ್ಲಿ, ಡಿಎಂಕೆ ಜೊತೆಗಿನ ಸೀಟು ಹೊಂದಾಣಿಕೆಯ ಭಾಗವಾಗಿ ಸ್ಪರ್ಧಿಸಿತ್ತು.  ನಾವು ಹಿಂದೆ ಗೆದ್ದಿದ್ದ ಸ್ಥಾನವಾದ ಕೊಯಮತ್ತೂರನ್ನು ಬದಲಾಯಿಸಿ, ದಿಂಡಿಗಲ್ ತೆಗೆದುಕೊಳ್ಳುವಂತೆ ಡಿಎಂಕೆ ನಮ್ಮೊಂದಿಗಿನ ಚರ್ಚೆಯ‌ಲ್ಲಿ ಒತ್ತಾಯಿಸಿತು. ಪಕ್ಷವು ಎರಡೂ ಸ್ಥಾನಗಳನ್ನು ದೊಡ್ಡ ಅಂತರದಲ್ಲಿ ಗೆದ್ದುಕೊಂಡಿದೆ.

ಮಧುರೈನಲ್ಲಿ, ನಮ್ಮ ಅಭ್ಯರ್ಥಿ 2.09 ಲಕ್ಷ ಮತಗಳ ಅಂತರದಿಂದ ಮರು ಆಯ್ಕೆಯಾದರು. ಶೇ.43.84 ಮತಗಳನ್ನು ಪಡೆದರು. ದಿಂಡಿಗಲ್‌ನಲ್ಲಿ ಪಕ್ಷದ ಅಭ್ಯರ್ಥಿ ಶೇ.58.25ರಷ್ಟು ಮತಗಳನ್ನು ಪಡೆದು ಶೇ.4.43 ಲಕ್ಷದ ಭಾರಿ ಅಂತರದಿಂದ ಜಯಗಳಿಸಿದ್ದಾರೆ.

ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧ ಡಿಎಂಕೆ ನೇತೃತ್ವದಲ್ಲಿ  ನಡೆಸಿದ ಜಂಟೀ ಪ್ರಚಾರವು, ಪ್ರಬಲವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ತು.   ಇದು ಬಿಜೆಪಿ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಕ್ರೋಢಿಕರಿಸಲು ಸಹಾಯ ಮಾಡಿತು. ಆದಾಗ್ಯೂ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಲಾಭ ಗಳಿಸಿದೆ ಎಂಬುದನ್ನು ಗಮನಿಸಬೇಕು. 2019 ರಲ್ಲಿ ಶೇ 3.66 ರಷ್ಟು ‌ಮತ ಪಡೆದಿತ್ತು. ಈ ಬಾರಿ, 23 ಸ್ಥಾನಗಳಲ್ಲಿ ಸ್ಪರ್ಧಿಸುವ ಮೂಲಕ ಶೇ.11.24 ರಷ್ಟು  ಮತ ಪಡೆದಿದೆ. ಬಿಜೆಪಿ‌ 9 ಲೋಕಸಭಾ ಸ್ಥಾನಗಳಲ್ಲಿ ಮತ್ತು ಅದರ ಮಿತ್ರಪಕ್ಷಗಳು 3 ಸ್ಥಾನಗಳಲ್ಲಿ ಎರಡನೇ ಸ್ಥಾನ ಪಡೆದಿವೆ. ಹಲವು ಸ್ಥಾನಗಳಲ್ಲಿ ಬಿಜೆಪಿ ಎಐಎಡಿಎಂಕೆ ಮತಗಳನ್ನು ಗಳಿಸಿಕೊಂಡಿದೆ.

ಮುಂದಿನ ದಿನಗಳಲ್ಲಿ ಇದು ಬಿಜೆಪಿ ಮತ್ತು ಹಿಂದುತ್ವ ಶಕ್ತಿಗಳ ವಿರುದ್ಧ ನಿರಂತರ ರಾಜಕೀಯ-ಸೈದ್ಧಾಂತಿಕ ಅಭಿಯಾನವನ್ನು ನಡೆಸಬೇಕೆಂಬ ಮಹತ್ವವನ್ನು ಒತ್ತಿ ಹೇಳುತ್ತದೆ. ಬಿಜೆಪಿ ಮತ್ತು ಮೋದಿ ಸರ್ಕಾರದ ನೀತಿಗಳಿಂದ ತಮಿಳುನಾಡಿನ ಹಿತಾಸಕ್ತಿ, ಅದರ ಸಾಮಾಜಿಕ ಸುಧಾರಣೆಗಳ ಸಂಪ್ರದಾಯ, ಸಾಂಸ್ಕೃತಿಕ ಅಸ್ಮಿತೆ ಮತ್ತು ರಾಜ್ಯದ ಹಕ್ಕುಗಳು ಹೇಗೆ ಅಪಾಯದಲ್ಲಿದೆ ಎಂಬುದನ್ನು ನಾವು ಸೃಜನಾತ್ಮಕವಾಗಿ ಪ್ರಚಾರ ಮಾಡಬೇಕಾಗಿದೆ.

ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲಿಯೂ ಪಕ್ಷದ ಚುನಾವಣಾ ಪ್ರಚಾರಕ್ಕೆ ಸಹಾಯ ಮಾಡುವಲ್ಲಿ ಪಕ್ಷದ ದೈನಿಕ ಪತ್ರಿಕೆ ‘ತೀಕ್ಕತಿರ್’  ಪರಿಣಾಮಕಾರಿ ಪಾತ್ರ ವಹಿಸಿದೆ. ಸೋಷಿಯಲ್ ಮೀಡಿಯಾ-ತಂಡಗಳು ಕೂಡ ಎರಡು ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿವೆ.

ರಾಜ್ಯ ಸಮಿತಿಯ ವಿಮರ್ಶೆಯಂತೆ, ಪಕ್ಷದ ಸಂಘಟನಾ ಮಟ್ಟದಲ್ಲಿ ಎರಡು ಕ್ಷೇತ್ರಗಳಿಗೆ ಸೇರಿದ ಶೇ 40 ರಿಂದ ಶೇ.50 ರಷ್ಟು ಪಕ್ಷದ ಸದಸ್ಯರು ಮಾತ್ರ ಚುನಾವಣಾ ಪ್ರಚಾರದಲ್ಲಿ ಕೆಲಸ ಮಾಡಿದ್ದಾರೆ ಎಂದು ಗಮನಿಸಿದೆ. ಒಟ್ಟಾರೆ ರಾಜ್ಯದ ಚಿತ್ರಣವೂ ಇದೇ ಆಗಿದೆ. ಇದು ಪಕ್ಷದ ಸದಸ್ಯತ್ವದಲ್ಲಿನ ಸಡಿಲತೆ ಮತ್ತು ಕೆಳಮಟ್ಟದ ರಾಜಕೀಯ-ಸಂಘಟನೆಯ ಮಟ್ಟವನ್ನು ಸೂಚಿಸುತ್ತದೆ. ಪಕ್ಷದ ಸ್ವತಂತ್ರ ಶಕ್ತಿ ಕ್ಷೀಣಿಸುತ್ತಿರುವುದಕ್ಕೆ ನಮ್ಮ ಸಂಘಟನಾ ದೌರ್ಬಲ್ಯಗಳೂ ಒಂದು ಕಾರಣ. ರಾಜ್ಯ ಸಮಿತಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.

ತ್ರಿಪುರಾ

ಸಿಪಿಐ(ಎಂ) ಮತ್ತು ಪ್ರತಿಪಕ್ಷಗಳ ವಿರುದ್ಧ ಭಯೋತ್ಪಾದನೆ ಮತ್ತು ಬೆದರಿಕೆಯು ಮುಂದುವರಿದ ಹಿನ್ನೆಲೆಯಲ್ಲಿ ತ್ರಿಪುರಾದಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಈ ಹಿಂದೆ, 2023ರ ಸೆಪ್ಟೆಂಬರ್‌ನಲ್ಲಿ ನಡೆದ ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ – ಬಾಕ್ಸಾನಗರ ಮತ್ತು ಧನಪುರದಲ್ಲಿ – ಬಿಜೆಪಿ ಈ ಸ್ಥಾನಗಳನ್ನು ಗೆಲ್ಲಲು ದೊಡ್ಡ ಪ್ರಮಾಣದ ಬೆದರಿಕೆ ಮತ್ತು ದುರಾಚಾರಗಳನ್ನು ಆಶ್ರಯಿಸಿತ್ತು. 

ಲೋಕಸಭೆಯ ಎರಡು ಸ್ಥಾನಗಳನ್ನು, ಸ್ಪರ್ಧಿಸಲು ರಾಜ್ಯ ಸಮಿತಿಯು  ನಿರ್ಧರಿಸಿತ್ತು. ಸೀಟು ಹಂಚಿಕೆಗಾಗಿ ಕಾಂಗ್ರೆಸ್ ಜೊತೆ ಹೊಂದಾಣಿಕೆಯಾಗಿ, ಆ ಮೂಲಕ ತ್ರಿಪುರ ಪೂರ್ವ (ಎಸ್‌ಟಿ) ಸ್ಥಾನಕ್ಕೆ ಸಿಪಿಐ(ಎಂ) ಮತ್ತು ತ್ರಿಪುರಾ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲು ನಿರ್ಧರಿಸಲಾಯಿತು.

ವಿಧಾನಸಭೆ ಚುನಾವಣೆಯಲ್ಲಿ, ಬುಡಕಟ್ಟು ಸಮಸ್ಯೆಗಳ‌ ವೇದಿಕೆಯಡಿಯಲ್ಲಿ 13 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಬುಡಕಟ್ಟು ಪಕ್ಷವಾದ ತಿಪ್ರಾ ಮೋತಾದೊಂದಿಗೆ ಬಿಜೆಪಿ ಒಪ್ಪಂದ ಮಾಡಿಕೊಂಡಿತು. ಆದರೆ, ಇವರ ಯಾವುದೇ  ಶರತ್ತುಗಳಿಗೆ ಬಿಜೆಪಿಯು ಒಪ್ಪಲಿಲ್ಲ. ಆದಾಗ್ಯೂ, ಬಿಜೆಪಿ’ಯ ಕೇಂದ್ರ ನಾಯಕತ್ವದ ಒತ್ತಡಕ್ಕೆ ಮಣಿದು, ತಿಪ್ರಾ ಮೋತಾದ ಸಂಸ್ಥಾಪಕರ ಸಹೋದರಿಯನ್ನು ಬಿಜೆಪಿ ಚಿಹ್ನೆಯ ಮೇಲೆ ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಶರಣಾಯಿತು. ಇದು ಮುಂದಿನ ದಿನಗಳಲ್ಲಿ ಬುಡಕಟ್ಟು ಜನರಲ್ಲಿರುವ ತಿಪ್ರಾ ಮೋತಾ’ ವನ್ನು ಬಯಲು ಮಾಡಲು ನಮಗೆ ಸಹಾಯ ಮಾಡುವಂತಹ ಬೆಳವಣಿಗೆಯಾಗಿದೆ ಎಂದು ಗಮನಿಸಲಾಗಿದೆ.

ತ್ರಿಪುರಾ ಪಶ್ಚಿಮ ಕ್ಷೇತ್ರಕ್ಕೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತ್ತು ತ್ರಿಪುರಾ ಪೂರ್ವಕ್ಕೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ ಭಯಂಕರ ವಾತಾವರಣವನ್ನು ಸೃಷ್ಟಿಸಿತ್ತು ಮತ್ತು ಪ್ರತಿಪಕ್ಷದ ಮತದಾರರು ಮತದಾನಕ್ಕೆ ಹೋಗುವುದನ್ನು ದೊಡ್ಡ ಪ್ರಮಾಣದಲ್ಲಿ  ತಡೆಯಲಾಯಿತು.  ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳಲ್ಲಿ ಬಿಜೆಪಿ ಗ್ಯಾಂಗ್‌ಗಳು ಗೈರು ಹಾಜರಾದ ಮತದಾರರ ವಿರುದ್ಧ ನಕಲಿ ಮತ ಹಾಕಿದ್ದಾರೆ. ತ್ರಿಪುರಾ ಪೂರ್ವದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಕಡಿಮೆ ಪ್ರಮಾಣದ ಹಿಂಸಾಚಾರ ಮತ್ತು ರಿಗ್ಗಿಂಗ್ ಕಂಡುಬಂದಿದೆ.  ಆದರೆ ಇದು ಇನ್ನೂ ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳ ಮೇಲೆ ಪರಿಣಾಮ ಬೀರಿತು.

ಆದ್ದರಿಂದ, ಫಲಿತಾಂಶಗಳನ್ನು ಜನರ ನಿಜವಾದ ಜನಾದೇಶವಾಗಿ ನೋಡಲಾಗುವುದಿಲ್ಲ. ತ್ರಿಪುರಾ ಪಶ್ಚಿಮದಲ್ಲಿ ಬಿಜೆಪಿ ಶೇ.72.85 ಮತಗಳನ್ನು ಪಡೆದರೆ, ಕಾಂಗ್ರೆಸ್ ಶೇ 23.30 ಮತಗಳನ್ನು ಪಡೆದಿದೆ.

ತ್ರಿಪುರಾ ಪೂರ್ವದಲ್ಲಿ ಬಿಜೆಪಿ 7,77,447 ಮತಗಳನ್ನು ಸಿಪಿಐ(ಎಂ) 2,90,628 (ಶೇ. 25.62) ಮತಗಳನ್ನು ಪಡೆದಿದೆ.

ಈ ದಿಕ್ಕು ತಪ್ಪಿದ ತೀರ್ಪಿಗೆ ಮುಖ್ಯ ಕಾರಣ ಚುನಾವಣಾ ಅಕ್ರಮಗಳು ಮತ್ತು ನಕಲಿ ಮತಗಳ ಚಲಾವಣೆಯಾಗಿರುವುದು. ಆದಾಗ್ಯೂ, ಬಿಜೆಪಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಹಲವಾರು ಕ್ರಮಗಳಾದ 5 ಕೆಜಿ ಉಚಿತ ಪಡಿತರ, ಪಿಎಂಎವೈ ಯೋಜನೆಯಲ್ಲಿ ಬಡ ವರ್ಗದವರಿಗೆ ವಸತಿ, ಒಂದು ವರ್ಗದ ರೈತರಿಗೆ  ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ವರ್ಷಕ್ಕೆ ರೂ.6,000 ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸರಳ ಸಾಲಗಳು ಇತ್ಯಾದಿಗಳು ಬಿಜೆಪಿಗೆ ಗಣನೀಯ ಬೆಂಬಲವನ್ನು ಸೃಷ್ಟಿ ಮಾಡಿಕೊಟ್ಡಿದೆ.

ಪಕ್ಷದ ಸಂಘಟನೆಯ ಸ್ಥಿತಿಯಲ್ಲಿನ ಅವ್ಯವಸ್ಥೆಯಿಂದಾಗಿ ಕೆಳ ಹಂತದಲ್ಲಿ ನಮ್ಮ ಚುನಾವಣಾ ಕೆಲಸದಲ್ಲಿ ಪಕ್ಷವು ದುರ್ಬಲವಾಗಿತ್ತು. ನೇರವಾದ ದೈಹಿಕ ದಾಳಿಗಳು ಗಣನೀಯವಾಗಿ ಕಡಿಮೆಯಾಗಿದ್ದರೂ, ಪಕ್ಷದ ಸದಸ್ಯರು ಮತ್ತು ಬೆಂಬಲಿಗರ ಜೀವನೋಪಾಯ ಮತ್ತು ಸುರಕ್ಷತೆಗೆ ಬೆದರಿಕೆಯ ಮೂಲಕ ವಿವಿಧ ರೂಪಗಳಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷದ ಸದಸ್ಯರು ಮತ್ತು ಪ್ರಾಥಮಿಕ ಘಟಕಗಳು ನಿಷ್ಕ್ರಿಯಗೊಳ್ಳುವ ಪರಿಸ್ಥಿತಿಗೆ ಕಾರಣವಾಗಿವೆ. ಪಕ್ಷದ ಸಂಘಟನೆಯನ್ನು ಎಲ್ಲಾ ಹಂತಗಳಲ್ಲಿ ಪುನರುಜ್ಜೀವನಗೊಳಿಸುವ ಕೆಲಸಕ್ಕೆ ತಾಳ್ಮೆ ಮತ್ತು ನಿರಂತರ ಕೆಲಸ ಮಾಡಬೇಕಾಗಿದೆ.

ರಾಜಸ್ಥಾನ

 ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದೊಡನೆ ಮಾಡಿಕೊಂಡ  ಹೊಂದಾಣಿಕೆ ಅನುಸಾರ ಪಕ್ಷವು  ಸೀಕರ್ ಲೋಕಸಭಾ  ಕ್ಷೇತ್ರದಲ್ಲಿ ಆಮ್ರ ರಾಮ್ ರವರನ್ನು ಸ್ಪರ್ಧೆಗೆ ಇಳಿಸಿತು.  ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಲೋಕ ತಾಂತ್ರಿಕ್ ಪಕ್ಷದೊಡನೆ(RLP)ಯೂ  ಹೊಂದಾಣಿಕೆ ಮಾಡಿಕೊಂಡಿದ್ದು  RLP ಯ  ಹನುಮಾನ್ ಬೆಲಿವಾಲ್ ಸ್ಪರ್ಧಿಸಿದ್ದರು ಮತ್ತು ಕಾಂಗ್ರೆಸ್ ಪಕ್ಷವು ಭಾರತ್ ಆದಿವಾಸಿ ಪಕ್ಷ(BAP) ಜೊತೆ ಒಂದು ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಂಡಿತ್ತು. INDIA ಕೂಟವು  11 ಸ್ಥಾನಗಳನ್ನು ಗೆದ್ದಿದ್ದು  ಇದರಲ್ಲಿ ಮೂರು ಸ್ಥಾನಗಳು ಹೊಂದಾಣಿಕೆ ಮಾಡಿಕೊಂಡ ಪಕ್ಷಗಳದ್ದು. 2019ರಲ್ಲಿ ಬಿಜೆಪಿಯು ತನ್ನ ಮಿತ್ರ ಪಕ್ಷಗಳೊಂದಿಗೆ ಎಲ್ಲಾ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಸೀಕರ್ ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯು 6,59,300  ಮತಗಳನ್ನು ಪಡೆದು ಜಯಗಳಿಸಿದ್ದಾರೆ.  ಇದು ಒಟ್ಟು ಚಲಾವಣೆಯಾದ ಮತಗಳ ಶೇ. 50.68 ರಷ್ಟಿದೆ.  ಹಾಲಿ ಇದ್ದ ಬಿಜೆಪಿ ಸಂಸದರ ಮೇಲೆ 72,896  ಮತಗಳ ಅಂತರದಲ್ಲಿ ಕೆಲವನ್ನು ಪಡೆದಿದ್ದಾರೆ.  ಒಟ್ಟು ಏಳು ಅಸೆಂಬ್ಲಿ ಕ್ಷೇತ್ರಗಳಲ್ಲಿ ನಮ್ಮ ಪಕ್ಷವು  ಶೇ. 50 ಮತಗಳೊಂದಿಗೆ ಐದು ಕ್ಷೇತ್ರಗಳಲ್ಲಿ  ಮುನ್ನಡೆ ಸಾಧಿಸಿತ್ತು ಮತ್ತು ಬಿಜೆಪಿಯು ಎರಡು  ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.

 ಪಕ್ಷವು ಧೋಡ್ ಅಸೆಂಬ್ಲಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು(99,502) ಪಡೆದಿದ್ದು ಇದು ಒಟ್ಟು ಚಲಾವಣೆಯಾದ ಮತಗಳ ಶೇ. 57.02 ರಷ್ಟಿದೆ.  ಸೀಕರ್ ಜಿಲ್ಲೆಯಲ್ಲಿ  ಇದು ನಮ್ಮ ಅತ್ಯಂತ ಬಲಿಷ್ಠ ಕ್ಷೇತ್ರವಾಗಿದ್ದು ಈ ಹಿಂದೆ ನಾಲ್ಕು ಬಾರಿ ನಾವು ಗೆದ್ದಿದ್ದೇವೆ.  ಕಾಂಗ್ರೆಸ್ ನಾಯಕತ್ವ ಮತ್ತು ಅದರ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ನೀಡಿದ ಸಂಪೂರ್ಣ ಬೆಂಬಲದಿಂದಾಗಿ ಈ ಗೆಲುವು ಸಾಧ್ಯವಾಗಿದೆ.  ಒಬ್ಬ ಸಮರ ಧೀರ ರೈತ ಹೋರಾಟಗಾರ  ಮತ್ತು ನಾಲ್ಕು ಬಾರಿ ಶಾಸಕರಾಗಿದ್ದವರು ಎಂಬ ಮನ್ನಣೆ ಅಮ್ರ ರಾಮ್ ರವರಿಗಿದ್ದದ್ದು  ಕೂಡ ವ್ಯಾಪಕ ಬೆಂಬಲ ಪಡೆಯಲು ನೆರವಾಯಿತು.  ನಮ್ಮ ಸ್ಪರ್ಧಿಯು ಹಲವು ರೈತ ಸಮುದಾಯಗಳು,  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಮುಸ್ಲಿಂ ಅಲ್ಪಸಂಖ್ಯಾತರ ಸಂಪೂರ್ಣ ಬೆಂಬಲವನ್ನು ಪಡೆದರು.

ಮಹಾರಾಷ್ಟ್ರ

 ಮಹಾರಾಷ್ಟ್ರ ಚುನಾವಣೆಯನ್ನು ನಾವು INDIA ಕೂಟದ  ಭಾಗವಾಗಿ ಮಹಾ ವಿಕಾಸ್ ಅಘಡಿ (MVA) ಯ ಜೊತೆ  ಎದುರಿಸಲು ನಿರ್ಧರಿಸಿದ್ದೆವು.  2019 ರಲ್ಲಿ ನಮ್ಮ ಪಕ್ಷವು 1.09 ಲಕ್ಷ  ಮತಗಳನ್ನು ಪಡೆದಿದ್ದ ದಿಂಡೋರಿ ( ಪರಿಶಿಷ್ಟ  ಪಂಗಡ)  ಸ್ಥಾನವನ್ನು ನಮಗೆ ನೀಡುವಂತೆ NCP ಯ ಜೊತೆ  ಮಾತುಕತೆ ನಡೆಸಿದ್ದೆವು.  ಆದರೆ ಕಳೆದ ಬಾರಿ ನಮಗಿಂತ ಹೆಚ್ಚು ಮತ ಪಡೆದಿದ್ದ NCP ಯು ಈ ಸ್ಥಾನವನ್ನು ಬಿಟ್ಟುಕೊಡಲು  ಒಪ್ಪಲಿಲ್ಲ.  ಈ ಪರಿಸ್ಥಿತಿಯಲ್ಲಿ  ಬಿಜೆಪಿ ಮಿತ್ರ ಕೂಟದ ವಿರುದ್ಧದ ಹೋರಾಟವು ದುರ್ಬಲವಾಗಬಾರದು ಎಂಬ  ತಿಳುವಳಿಕೆಯೊಂದಿಗೆ  ನಮ್ಮ ಪಕ್ಷದ ಮಹಾರಾಷ್ಟ್ರ ರಾಜ್ಯ ಸಮಿತಿಯು  ನಾವು ದಿಂಡೋರಿ  ಅಥವಾ ನಮ್ಮ ಬುನಾದಿ ಇರುವ ಪಾಲ್ಘಾರ್, ಈ  ಎರಡು ಕ್ಷೇತ್ರಗಳಲ್ಲಿ  ಸ್ಪರ್ಧಿಸಬಾರದು ಎಂದು ನಿರ್ಧರಿಸಿತು.

 ಕನಿಷ್ಠ ಒಂದು ಸ್ಥಾನದಲ್ಲಿಯಾದರೂ ಸ್ಪರ್ಧಿಸಿ ಚುನಾವಣಾ ಕಣದಲ್ಲಿ ನಾವು ಇರಲೇಬೇಕು ಎಂಬ ತಿಳುವಳಿಕೆಯೊಂದಿಗೆ ಕೊನೆಯ ಹಂತದಲ್ಲಿ ಹಿಂಗೋಲಿ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಹಲವು  ಅಡೆತಡೆಗಳ ನಡುವೆಯೂ ಚುನಾವಣಾ ಪ್ರಚಾರವು ಇಡೀ ಕ್ಷೇತ್ರದಲ್ಲಿ ಚೆನ್ನಾಗಿ ನಡೆಯಿತು.  ನಮ್ಮ ಸ್ಪರ್ಧಿಯು 14,644  ಮತಗಳನ್ನು ಪಡೆದರು(ಶೇ. 1.26).  2014ರ ಲೋಕಸಭಾ ಚುನಾವಣೆಯಲ್ಲಿ ನಾವು ಪಡೆದಿದ್ದ ಮತಗಳಿಗಿಂತ  ಸ್ವಲ್ಪ ಕಡಿಮೆ ಮತಗಳನ್ನು ಈ ಬಾರಿ ಪಡೆದೆವು.

 ರಾಜ್ಯದ ಉಳಿದೆಡೆ ಪಕ್ಷದ ಘಟಕಗಳು ಬಿಜೆಪಿ -ಎನ್ ಡಿ ಎ  ಮೈತ್ರಿಕೂಟವನ್ನು ಸೋಲಿಸಲು  ಪ್ರಚಾರದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿದ್ದವು.  ಒಟ್ಟಾರೆ, ಫಲಿತಾಂಶವು ಅನುಕೂಲಕರವಾಗಿದ್ದು MVA  31 ಸ್ಥಾನಗಳನ್ನು ಪಡೆದಿದೆ ಮತ್ತು ಬಿಜೆಪಿಯ  ಸ್ಥಾನಗಳು 17ಕ್ಕೆ ಕುಸಿದಿವೆ.

ಬಿಹಾರ

 ಮಹಾಘಟ್ ಬಂಧನ್ ಭಾಗವಾಗಿ ನಾವು ಖಗರಿಯ ದಲ್ಲಿ ಸ್ಪರ್ಧಿಸಿದ್ದೆವು ಮತ್ತು 3,77,526  ಮತಗಳನ್ನು ಪಡೆದೆವು (ಶೇ. 35.55).  ಚುನಾವಣೆಯಲ್ಲಿ ನಾವು ಸೋತರೂ ಎರಡನೇ ಸ್ಥಾನದಲ್ಲಿ ಇದ್ದೆವು.  ಮಹಾ ಘಟ್ ಬಂಧನ್ ಉತ್ತರ ಬಿಹಾರದಲ್ಲಿ ಯಶಸ್ಸು  ಪಡೆಯದಿರುವುದು  ಮತ್ತು ನಮ್ಮದೇ ಕೆಲವು ನ್ಯೂನತೆಗಳಿಂದಾಗಿ ಖಗರಿಯಾದಲ್ಲಿ  ನಮಗೆ ಗೆಲುವು ಸಿಗಲಿಲ್ಲ.

ಅಸ್ಸಾಂ

‘ಐಕ್ಯ ವಿರೋಧ ಒಕ್ಕೂಟ”ದ ಸಂಯುಕ್ತ ಭಾಗವಾಗಿ ನಾವು ಬಾರ್ಪೇಟ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಮುಂದಾಗಿದ್ದೆವು.  ಆದರೆ ಕಾಂಗ್ರೆಸ್ ಪಕ್ಷದ ಏಕಪಕ್ಷಿಯ ಮತ್ತು ಅಪ್ರಜಾಪ್ರಭುತ್ವ ನಿಲುವಿನಿಂದಾಗಿ ಇದು ಸಾಧ್ಯವಾಗಲಿಲ್ಲ.  ಹೀಗಾಗಿ ಪಕ್ಷವು ಬಾರ್ಪೆಟ  ಕ್ಷೇತ್ರದ ಸೊರ್ಭಾಗ್  ಅಸೆಂಬ್ಲಿಯ ಹಾಲಿ ಶಾಸಕರಾದ  ಮನೋರಂಜನ್ ತಾಲೂಕ್ದಾರ್ ರವರನ್ನು  ಕಣಕ್ಕಿಳಿಸಿತು. ಅಸ್ಸಾಂ ಗಣ ಪರಿಷದ್ ನಿಂದ  ಬಿಜೆಪಿ ಮಿತ್ರ ಒಕ್ಕೂಟದ ಸ್ಪರ್ಧಾಳು ಇದ್ದರು. ನಮ್ಮ ಪಕ್ಷದ ಅಭ್ಯರ್ಥಿಯು 96,138(ಶೇ.5.7)  ಮತ ಗಳಿಸಿ ತೃತೀಯ ಸ್ಥಾನ  ಗಳಿಸಿದರು. AGP ಯು  ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಎರಡನೇ ಸ್ಥಾನ ಗಳಿಸಿತು.  ಒಂದು ಉತ್ತಮ ಪ್ರಚಾರ ಮತ್ತು ನಮ್ಮ ಸ್ಪರ್ಧಿಯ ಸ್ವೀಕಾರದ ನಡುವೆಯೂ ಅಂತಿಮವಾಗಿ ಸ್ಪರ್ಧೆಯು ಎಜಿಪಿ ಮತ್ತು ಕಾಂಗ್ರೆಸ್ ನಡುವೆ ಧ್ರುವೀಕರಣಗೊಂಡಿತು. ಸೊರ್ಭಾಗ್ ನಲ್ಲಿ  ನಮಗೆ ಕೇವಲ 18,198  ಮತಗಳು ಬಂದವು(ಶೇ.9.01). ಇದನ್ನು ವಿಮರ್ಶಾತ್ಮಕವಾಗಿ  ಪರಿಶೀಲಿಸಬೇಕು ಮತ್ತು ಪಕ್ಷದ,ಸಾಮೂಹಿಕ ಸಂಘಟನೆಗಳ ಮತ್ತು ಶಾಸಕರ  ಕೆಲಸವನ್ನು ಸುಧಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.   ಒಟ್ಟಾರೆಯಾಗಿ, 14  ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 11(9+2)  ಮತ್ತು ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದವು.

ಆಂಧ್ರ ಪ್ರದೇಶ

 ಆಂಧ್ರಪ್ರದೇಶದಲ್ಲಿ ನಾವು ಕಾಂಗ್ರೆಸ್ ಮತ್ತು ಸಿಪಿಐ  ನೊಡನೆ ಕ್ಷೇತ್ರ ಹೊಂದಾಣಿಕೆ ಮಾಡಿಕೊಂಡ ನಂತರ ಒಂದು ಲೋಕಸಭಾ ಮತ್ತು ಎಂಟು ಅಸೆಂಬ್ಲಿ ಸ್ಥಾನಗಳಿಗೆ  ಸ್ಪರ್ಧಿಸಿದೆವು.   ನಾವು ಸ್ಪರ್ಧಿಸಿದ್ದ  ಅರಕು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಂಪಚೋಡಾವರಂ  ಪರಿಶಿಷ್ಟ ಪಂಗಡ ಅಸೆಂಬ್ಲಿ ಕ್ಷೇತ್ರ ಹೊರತುಪಡಿಸಿ  ಅಸೆಂಬ್ಲಿ ಚುನಾವಣೆಯಲ್ಲಿ ನಮ್ಮ ಪ್ರದರ್ಶನ ಅತ್ಯಂತ ಕಳಪೆಯದ್ದಾಗಿದೆ. ರಾಂಪಚೋಡಾವರಂ ಕ್ಷೇತ್ರದಲ್ಲಿ ನಾವು  21,265(ಶೇ. 10.1)  ಮತಗಳನ್ನು ಪಡೆದೆವು.  2019ರಲ್ಲಿ ಈ ಕ್ಷೇತ್ರದಲ್ಲಿ ನಾವು 18,182(ಶೇ. 9.01)  ಮತಗಳನ್ನು ಪಡೆದಿದ್ದೆವು.  ಒಟ್ಟಾರೆಯಾಗಿ ನಾವು ಅಸೆಂಬ್ಲಿ ಚುನಾವಣೆಯಲ್ಲಿ ಕೇವಲ ಶೇ.0.13 ಮತ್ತು  ಲೋಕಸಭಾ ಚುನಾವಣೆಯಲ್ಲಿ ಶೇ. 0.4  ಪ್ರಮಾಣದ ಮತಗಳನ್ನು ಮಾತ್ರ ಪಡೆದಿದ್ದೇವೆ.

 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಅರಕು ಲೋಕಸಭಾ ಕ್ಷೇತ್ರದಲ್ಲಿ ನಾವು 1,23,129(ಶೇ. 10.57)  ಮತಗಳನ್ನು ಗಳಿಸುವ ಮೂಲಕ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣರಾದೆವು.  ನಾವು ಸ್ಪರ್ಧಿಸದಿದ್ದ ಕೆಲವು ಪ್ರದೇಶಗಳಲ್ಲಿ  ಪಕ್ಷದ ಕೆಲವು ಮಂಡಳಿ ಸಮಿತಿ ಸದಸ್ಯರು, ಘಟಕಗಳ ಕಾರ್ಯದರ್ಶಿಗಳು ಮತ್ತು ಪಕ್ಷದ ಸದಸ್ಯರು ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದಿದ್ದಾರೆ ಎನ್ನುವ ವರದಿಗಳಿವೆ.  ಈ  ವಿಷಯದಲ್ಲಿ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು.

ತೆಲಂಗಾಣ

ನಾವು ಭೋಂಗೀರ್  ಕ್ಷೇತ್ರದಲ್ಲಿ ಸ್ಪರ್ಧಿಸಿ, 28,730(ಶೇ. 2.05)  ಮತಗಳನ್ನು ಪಡೆದೆವು. ಉಳಿದ 16 ಕ್ಷೇತ್ರಗಳಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದ್ದೆವು.  ಆದರೆ ನಮ್ಮ ಸಂಘಟನಾತ್ಮಕ ಶಕ್ತಿಯು ಗಂಭೀರವಾಗಿ ದುರ್ಬಲವಾಗಿದೆ  ಎಂಬುದನ್ನು ತೋರಿಸುವ ತಪ್ಪು ಪ್ರವೃತ್ತಿಗಳು ಈ ಚುನಾವಣೆಯಲ್ಲಿ ಕಂಡು ಬಂದಿದೆ.  ಕೆಲವು ಜಿಲ್ಲಾ ಸಮಿತಿ ಸದಸ್ಯರು ಮತ್ತು ಪೂರ್ಣಾವಧಿ ಕಾರ್ಯಕರ್ತರು ಕೂಡ  ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿಲ್ಲ, ಮತ್ತು ನಮ್ಮ ಸ್ಥಳೀಯ ಸಮಿತಿಗಳ ಕೆಲವು ಸದಸ್ಯರು ನಮ್ಮ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.  ಪಕ್ಷದ ನಿಲುವಿಗೆ ವಿರುದ್ಧವಾಗಿ ನಮ್ಮ ಪಕ್ಷದ ಸದಸ್ಯರು ಮತ ಚಲಾಯಿಸಿದ್ದಾರೆ ಎಂಬ ವರದಿಗಳು ಬಂದಿವೆ.

ಒಡಿಶಾ

 ಒಡಿಶಾದಲ್ಲಿ ನಮ್ಮ ಪಕ್ಷವು 7  ಅಸೆಂಬ್ಲಿ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು.  ಕಾಂಗ್ರೆಸ್ ಪಕ್ಷವು ಈಗ ನಮ್ಮ ಹಾಲಿ ಶಾಸಕರಿರುವ ಬೋನೈ  ಕ್ಷೇತ್ರದಲ್ಲಿ ಮಾತ್ರ ನಮಗೆ ಬೆಂಬಲವನ್ನು ಸೂಚಿಸಿತ್ತು.  ಉಳಿದ ಕ್ಷೇತ್ರಗಳಲ್ಲಿ ನಾವು ಸಿಪಿಐ  ಜೊತೆ ಸೇರಿ ಸ್ಪರ್ಧಿಸಿದ್ದೆವು.  ಬೋನೈ ಕ್ಷೇತ್ರದಲ್ಲಿ ನಾವು 81,008 (ಶೇ. 43.45)ಮತಗಳನ್ನು  ಗಳಿಸುವ ಮೂಲಕ ಗೆಲುವು ಸಾಧಿಸಿದೆವು.  2019 ರಲ್ಲಿ ನಾವು 59,939(ಶೇ.34.67) ಮತ ಗಳಿಸಿದ್ದೆವು. ನಾಲ್ಕನೇ ಬಾರಿಗೆ  ನಾವು ಬೋನೈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು,  ಗುಡ್ಡಗಾಡು ಜನಾಂಗಗಳ ನಡುವೆ ನಮಗಿರುವ  ಬೆಂಬಲವನ್ನು ಪುನರ್  ಸ್ಥಾಪಿಸಿದ್ದೇವೆ.  ಒಟ್ಟಾರೆಯಾಗಿ ಈ  ಅಸೆಂಬ್ಲಿ ಚುನಾವಣೆಯಲ್ಲಿ ನಾವು ಶೇ. 0.37  ಮತ ಪ್ರಮಾಣ ಪಡೆದಿದ್ದೇವೆ.

 ಭುವನೇಶ್ವರ ಲೋಕಸಭಾ ಕ್ಷೇತ್ರದಲ್ಲಿ ನಾವು ಸ್ಪರ್ಧಿಸಿ 4,148 (ಶೇ. 0.38)  ಮತ ಗಳಿಸಿದ್ದೇವೆ.  ಈ ಕ್ಷೇತ್ರದಲ್ಲಿ ನಾವು ಸ್ಪರ್ಧಿಸಬಾರದು ಎಂಬ ರಾಜ್ಯ ಕಾರ್ಯದರ್ಶಿ ಮಂಡಳಿಯ ಹಿಂದಿನ  ಅಭಿಪ್ರಾಯಕ್ಕೆ ನಾವು ಬದ್ಧರಾಗಬೇಕಿತ್ತು.

 ಕರ್ನಾಟಕ

 ನಾವು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಿ 4,557(ಶೇ.0.3)  ಮತ ಗಳಿಸಿದೆವು.  ಇದು 2019ರ ಚುನಾವಣೆಯಲ್ಲಿ  ನಾವು ಪಡೆದಿದ್ದ 18,648 (ಶೇ. 1.34)  ಮತಗಳ ಪ್ರಮಾಣಕ್ಕಿಂತ ಬಹಳ ಕಡಿಮೆ ಇದೆ.

 ಪಂಜಾಬ್

 ನಾವು ಜಲಂಧರ್ ಕ್ಷೇತ್ರದಲ್ಲಿ ಸ್ಪರ್ಧಿಸಿ 5,958(ಶೇ. 0.6)  ಮತಗಳನ್ನು ಪಡೆದೆವು.  ಒಟ್ಟಾರೆಯಾಗಿ ಕಾಂಗ್ರೆಸ್ 7,  ಆಮ್ ಆದ್ಮಿ ಪಕ್ಷವು 3, ಅಕಾಲಿ ದಳ 1 ಮತ್ತು  ಸ್ವತಂತ್ರ ಅಭ್ಯರ್ಥಿಗಳು 2  ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ   ಬಿಜೆಪಿಯು ಒಂದೇ ಒಂದು ಕ್ಷೇತ್ರವನ್ನು ಗೆಲ್ಲದಿದ್ದರೂ ಅದು ಶೇ. 18.56  ಪ್ರಮಾಣದ ಮತಗಳನ್ನು ಗಳಿಸಿದೆ ಎಂಬುದನ್ನು ಗಮನಿಸಬೇಕು.

 ಝಾರ್ಖಂಡ್

 ಇಲ್ಲಿ ನಾವು ರಾಜ್ ಮಹಲ್( ಪರಿಶಿಷ್ಟ ಪಂಗಡ)  ಕ್ಷೇತ್ರದಲ್ಲಿ ಸ್ಪರ್ಧಿಸಿ 37,291(ಶೇ. 3.06)  ಮತಗಳನ್ನು ಪಡೆದೆವು.  2019 ರಲ್ಲಿ ನಾವು 35,586  ಮತಗಳನ್ನು ಪಡೆದಿದ್ದೆವು.

 ಅಂಡಮಾನ್ ಮತ್ತು ನಿಕೋಬಾರ್

 ನಾವು ಇಲ್ಲಿ ಸ್ಪರ್ಧಿಸಿ ಶೇ. 2.97  ಪ್ರಮಾಣದ ಮತಗಳನ್ನು ಪಡೆದೆವು.

ಕುಗ್ಗುತ್ತಿರುವ ನಮ್ಮ ಸ್ವತಂತ್ರ ಶಕ್ತಿ

 ಈ ಸಾಧನೆಯ ನಿರೂಪಣೆಯಿಂದ, ನಾವು ಬಹಳ ಹಿಂದೆಯೇ ಗಮನಿಸಿದ್ದ ನಮ್ಮ ಸಾಮೂಹಿಕ ಬುನಾದಿಯಲ್ಲಿನ  ಕುಸಿತವು ಮುಂದುವರೆದಿದೆ ಎಂಬುದು ಸ್ಪಷ್ಟವಾಗುತ್ತಿದೆ.  ನಮ್ಮ ಬಲಿಷ್ಠ ರಾಜ್ಯಗಳಲ್ಲಿ ನಮ್ಮ ಸಾಮೂಹಿಕ ಮತ್ತು ಚುನಾವಣಾ ಬುನಾದಿ  ಕುಸಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನಮ್ಮ ರಾಜ್ಯ ಸಮಿತಿಗಳ ಪ್ರಾಥಮಿಕ ವಿಮರ್ಶೆ ಆಧಾರದಲ್ಲಿ ಈ ಮೇಲೆ ನೀಡಿರುವ ಸಾರಾಂಶವು ನಮ್ಮ ಸಾಮೂಹಿಕ  ಬುನಾದಿಯಲ್ಲಿನ ಕುಸಿತವನ್ನು ಖಾತ್ರಿಪಡಿಸುತ್ತಿದೆ.  ಬಹುತೇಕ ಈ ವರದಿಗಳಲ್ಲಿ ನಮ್ಮ ಮೂಲಭೂತ ವರ್ಗಗಳಾದ ದುಡಿಯುವ ವರ್ಗ, ಬಡವರು ಮತ್ತು ಮಧ್ಯಮ ರೈತರು ಮತ್ತು ಕೃಷಿ ಕಾರ್ಮಿಕರು ಹೇಗೆ ಮತ ಚಲಾಯಿಸಿದ್ದಾರೆ ಎಂಬ ವಿಶ್ಲೇಷಣೆ ಇಲ್ಲ.

 ಕೊಲ್ಕತ್ತಾ ಪ್ಲೀನಮ್ ನಲ್ಲಿ ಸಂಘಟನೆಯ ಬಗ್ಗೆ ಚರ್ಚಿಸುವಾಗ ನಮ್ಮ ಮೂಲಭೂತ ವರ್ಗಗಳ ಮೇಲೆ ನವ ಉದಾರವಾದಿ ನೀತಿಗಳು ಬೀರಿರುವ ಪರಿಣಾಮಗಳನ್ನು  ವಿಶ್ಲೇಷಿಸಿದ್ದೆವು ಹಾಗೂ ಈ ವರ್ಗಗಳನ್ನು ಆಂದೋಲನ ಮತ್ತು ಚಳುವಳಿಗಳಿಗೆ ಅಣಿ ನೆರೆಸಲು ನಮ್ಮ ಘೋಷಣೆಗಳನ್ನು ಮತ್ತು  ತಂತ್ರಗಳನ್ನು ಮರು ರೂಪಿಸಬೇಕು ಎಂದು ಸೂಚನೆ ನೀಡಿದ್ದೆವು.  ಕಳೆದ 5 ವರ್ಷಗಳಲ್ಲಿ ಐತಿಹಾಸಿಕ ರೈತರ ಹೋರಾಟ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟಗಳು,  ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಜನರ ಹಲವು ಹೋರಾಟಗಳು ಮತ್ತು  ಅಗ್ನಿವೀರ್ ಯೋಜನೆ ವಿರುದ್ಧ ಮೂಡಿ ಬಂದ ದಿಢೀರ್ ಹೋರಾಟಗಳು, ಮುಂತಾದ ಹಲವು ಮಹತ್ವದ ಹೋರಾಟಗಳು ನಡೆದಿವೆ.  ಆದರೆ ಈ ಹೋರಾಟಗಳು ದೇಶದಾದ್ಯಂತ ಒಂದೇ ಮಾದರಿಯಲ್ಲಿ ನಡೆದಿಲ್ಲ.  ಆದರೆ ತಳ ಮಟ್ಟದಲ್ಲಿ  ವರ್ಗ ಮತ್ತು ಸಾಮೂಹಿಕ ವಿಷಯಗಳ ಮೇಲೆ ಈ ಹೋರಾಟಗಳ ಬೆಳವಣಿಗೆಗಳು  ಅಂತಹ ಪ್ರಗತಿಯನ್ನು ಸಾಧಿಸಿಲ್ಲ.  ಕೆಲವು ಆಂಶಿಕ ಬೇಡಿಕೆಗಳನ್ನು  ಯಶಸ್ವಿಯಾಗಿ ಈಡೇರಿಸಿಕೊಳ್ಳುವತ್ತ  ನಿರಂತರವಾಗಿ ನಡೆದ ಹೋರಾಟಗಳು ಕೇವಲ ಕೆಲವು ಪ್ರದೇಶಗಳಲ್ಲಿ ಮಾತ್ರ ನಡೆದಿವೆಯೇ ಹೊರತು  ವ್ಯಾಪಕವಾಗಿ ಹರಡಿದ  ವಿದ್ಯಮಾನವಾಗಿಲ್ಲ.

ಪರಿಗಣನೆಗೆ ತೆಗೆದುಕೊಳ್ಳಬೇಕಾದ ಮತ್ತೊಂದು ಗುಣಲಕ್ಷಣವೆಂದರೆ, ಗುರುತಿನ ರಾಜಕೀಯದ (ಐಡೆಂಟಿಟಿ ಪಾಲಿಟಿಕ್ಸ್) ಪುನರುತ್ಥಾನ ಮತ್ತು ಸಿಪಿಐ (ಎಂ) ಮತ್ತು ಎಡವನ್ನು ದುರ್ಬಲಗೊಳಿಸಲು ಅಂತಹ ರಾಜಕೀಯವನ್ನು ಆಶ್ರಯಿಸುವುದು. ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಂತಹ ಪ್ರಬಲ ರಾಜ್ಯಗಳಲ್ಲಿ ನಮ್ಮ ಮತದಾನದ ನೆಲೆಯ ಸವೆತದ ಮೇಲ್ನೋಟದ ವಿಶ್ಲೇಷಣೆಯು ಗುರುತಿನ ರಾಜಕೀಯದ ಪ್ರತಿಕೂಲ ಪರಿಣಾಮವನ್ನು ತೋರಿಸುತ್ತದೆ. ತ್ರಿಪುರಾದಲ್ಲಿ, ಬುಡಕಟ್ಟು ಗುರುತಿನ ರಾಜಕೀಯದ ಪುನರುತ್ಥಾನವು ಕಮ್ಯುನಿಸ್ಟ್ ಚಳುವಳಿಯ ಬಲವಾದ ಬುಡಕಟ್ಟು ನೆಲೆಯ ಸವೆತಕ್ಕೆ ಕಾರಣವಾಗಿದೆ. ಟಿಎಂಸಿ ಮತ್ತು ಬಿಜೆಪಿ ಆಶ್ರಯಿಸಿರುವ ಜಾತಿ ಮತ್ತು ಜನಾಂಗೀಯ ಆಧಾರಿತ ಗುರುತಿನ ರಾಜಕೀಯವು ಉತ್ತರ ಬಂಗಾಳ ಮತ್ತು ಇತರ ಪ್ರದೇಶಗಳಲ್ಲಿ ನಮ್ಮ ಪಕ್ಷದ ನೆಲೆಯ ಮೇಲೆ ಪರಿಣಾಮ ಬೀರಿದೆ. ಕೇರಳದಲ್ಲಿ, ಜಾತಿ ಮತ್ತು ಧಾರ್ಮಿಕ ಗುರುತಿನ ರಾಜಕೀಯ ಎರಡೂ ನಮ್ಮ ಸಾಂಪ್ರದಾಯಿಕ ತಳಹದಿಯ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಹೇಳುವುದಾದರೆ, ಜಾತಿ, ಸಮುದಾಯ ಮತ್ತು ಧರ್ಮವನ್ನು ಆಧರಿಸಿದ ಗುರುತಿನ ರಾಜಕೀಯವು ಇತರ ರಾಜ್ಯಗಳಲ್ಲಿಯೂ ಪಕ್ಷದ ಸ್ವತಂತ್ರ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಲು ಕೊಡುಗೆ ನೀಡಿದೆ.

ನಮ್ಮ ವರ್ಗ-ಆಧಾರಿತ ರಾಜಕೀಯದ ಆಧಾರದ ಮೇಲೆ ಅಂತಹ ಗುರುತಿನ ರಾಜಕೀಯವನ್ನು ಎದುರಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ಸಾಮಾಜಿಕವಾಗಿ ತುಳಿತಕ್ಕೊಳಗಾದ ವರ್ಗಗಳಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಗಳನ್ನು ನಾವು ತೆಗೆದುಕೊಳ್ಳುವುದರೊಂದಿಗೆ ಅದನ್ನು ಸಂಯೋಜಿಸಬೇಕು.

ದುರ್ಬಲ ರಾಜ್ಯಗಳಲ್ಲಿ ಬುಡಕಟ್ಟು ಕ್ಷೇತ್ರಗಳಲ್ಲಿ ನಮ್ಮ ಸಾಧನೆ ತುಲನಾತ್ಮಕವಾಗಿ ಉತ್ತಮವಾಗಿದೆ. ಹೆಚ್ಚಿದ ಮತಗಳೊಂದಿಗೆ ನಾವು ಒಡಿಶಾದ ಬೋನೈ (ಎಸ್.ಟಿ) ಕ್ಷೇತ್ರವನ್ನು ನಾಲ್ಕನೇ ಬಾರಿಗೆ ಗೆದ್ದಿದ್ದೇವೆ; ಆಂಧ್ರಪ್ರದೇಶದ ಅರಕ್ಕು (ಎಸ್.ಟಿ) ಸಂಸದೀಯ ಸ್ಥಾನದಲ್ಲಿ ನಾವು 1 ಲಕ್ಷ 23 ಸಾವಿರ ಮತಗಳನ್ನು ಪಡೆದಿದ್ದೇವೆ, ಕಳೆದ ಬಾರಿಗಿಂತ ಉತ್ತಮವಾಗಿದೆ; ಜಾರ್ಖಂಡಿನ ರಾಜಮಹಲ್ (ಎಸ್ಟಿ) ಸ್ಥಾನದಲ್ಲಿ ನಾವು 37,000 ಮತಗಳನ್ನು ಪಡೆದಿದ್ದೇವೆ, ಹೆಚ್ಚು ಕಡಿಮೆ ನಮ್ಮ ಮತ ಪಾಲನ್ನು ಉಳಿಸಿಕೊಂಡಿದ್ದೇವೆ. 2014 ರಲ್ಲಿ, LS ಚುನಾವಣಾ ವಿಮರ್ಶೆಯಲ್ಲಿ ನಾವು ಬುಡಕಟ್ಟು ಕ್ಷೇತ್ರಗಳಲ್ಲಿ ನಮ್ಮ ಉತ್ತಮ ಸಾಧನೆಯನ್ನು ಗಮನಿಸಿದ್ದೇವೆ. ಗಣನೀಯ ಬುಡಕಟ್ಟು ಜನಸಂಖ್ಯೆ ಇರುವ ರಾಜ್ಯ ಸಮಿತಿಗಳು ಆಯ್ದ ಪ್ರದೇಶಗಳಲ್ಲಿ ಕೆಲಸ ಮಾಡಲು ಸಾಕಷ್ಟು ಸಂಪನ್ಮೂಲಗಳನ್ನು ಕೇಂದ್ರೀಕರಿಸಬೇಕು ಮತ್ತು ಒದಗಿಸಬೇಕು.

ನಮ್ಮ ಹೋರಾಟಗಳಲ್ಲಿ ಭಾಗವಹಿಸುವ ಜನರ ರಾಜಕೀಯಕರಣದ ದೌರ್ಬಲ್ಯವನ್ನು ತುರ್ತಾಗಿ ಸರಿಪಡಿಸಬೇಕಾಗಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನಮ್ಮ ರಾಜಕೀಯ-ಸಂಘಟನಾ ನಿಲುವುಗಳನ್ನು ಒಳಗಿಳಿಸಿಕೊಳ್ಳುವುದರಲ್ಲಿ ಇರುವ ದೌರ್ಬಲ್ಯಗಳನ್ನು ನಿವಾರಿಸಲು ಪ್ರಯತ್ನಿಸಬೇಕು

ಯುವಕರು ಮತ್ತು ಯುವ ಪೀಳಿಗೆಗೆ ನಮ್ಮ ಪಕ್ಷದತ್ತ ಆಕರ್ಷಣೆಯನ್ನು ವಿಸ್ತರಿಸುವಲ್ಲಿ ನಮ್ಮ ದೌರ್ಬಲ್ಯಗಳು ಮುಂದುವರಿಯುತ್ತಿವೆ. ನಗರ ಪ್ರದೇಶಗಳಲ್ಲಿ ಕೆಲಸವನ್ನು ಸಂಘಟಿಸಲು ಪ್ರಯತ್ನಿಸಿದರೂ, ನಗರ ಬಡವರು ಮತ್ತು ಮಧ್ಯಮ ವರ್ಗದವರಲ್ಲಿ ಯಾವುದೇ ಪ್ರಮುಖ ಪರಿಣಾಮ ಬೀರಲು ನಮಗೆ ಸಾಧ್ಯವಾಗಲಿಲ್ಲ. ಅನೇಕ ಕ್ಷೇತ್ರಗಳಲ್ಲಿ, ಪಕ್ಷವು ಸಮೀಕ್ಷೆ ಮಾಡಿದ ಒಟ್ಟು ಮತಗಳು ನಮ್ಮ ವರ್ಗ ಮತ್ತು ಸಾಮೂಹಿಕ ಸಂಘಟನೆಗಳ ಒಟ್ಟು ಸದಸ್ಯತ್ವಕ್ಕಿಂತ ಕಡಿಮೆಯಾಗಿರುವಷ್ಟು ಪರಿಸ್ಥಿತಿ ಕೆಟ್ಟದಾಗಿದೆ. ಸ್ಪಷ್ಟವಾಗಿ, ನಮ್ಮದೇ ಸಾಮೂಹಿಕ ಸಂಘಟನೆಯ ಸದಸ್ಯತ್ವದ ರಾಜಕೀಯಕರಣದ ಪ್ರಕ್ರಿಯೆಯು ಸಮರ್ಪಕವಾಗಿಲ್ಲ.

ಈ ಚುನಾವಣೆಗಳಲ್ಲಿ ಕೆಲವು ರಾಜ್ಯಗಳಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಯುವಕರ ಗಣನೀಯ ವಿಭಾಗವು ಭಾಗವಹಿಸುವುದನ್ನು ಕಂಡಿತು. ಈ ವಿಭಾಗಗಳನ್ನು ನಮ್ಮ ಸಾಮೂಹಿಕ ಸಂಘಟನೆಗಳತ್ತ ಸೆಳೆಯಬೇಕು ಮತ್ತು ಪಕ್ಷದ ಮಡಿಲಿಗೆ ತರಬೇಕು.

ವಿಶಾಲ ವಿರೋಧ ವೇದಿಕೆಯಾಗಿ  ‘ಇಂಡಿಯಾ ಕೂಟ’ ದ ರಚನೆಯು ಬಿಜೆಪಿ ಅನುಭವಿಸಿದ ಹಿನ್ನಡೆಗೆ ಕೊಡುಗೆ ನೀಡಿದೆ. ಆದರೆ, ಚುನಾವಣಾ ಫಲಿತಾಂಶಗಳು ರಾಷ್ಟ್ರೀಯ ಮಟ್ಟದಲ್ಲಿ ಎಡಪಕ್ಷಗಳು ನಿರಂತರ ಅಂಚಿನಲ್ಲಿರುವುದನ್ನು ತೋರಿಸುತ್ತವೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ, ಸಂಸತ್ತಿಗೆ ಸ್ಥಾನಗಳ ಪ್ರಮುಖ ಕೊಡುಗೆದಾರರಾಗಿದ್ದ ಪಶ್ಚಿಮ ಬಂಗಾಳದಲ್ಲಿ ಪಕ್ಷ ಮತ್ತು ಎಡಪಕ್ಷಗಳ ದುರ್ಬಲಗೊಳ್ಳುವಿಕೆ ಮುಂದುವರೆದಿದೆ. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ಎಡ ಏಕತೆ ಮತ್ತು ಜಂಟಿ ಕಾರ್ಯಾಚರಣೆಗಳ ಅನುಪಸ್ಥಿತಿ ಕಂಡುಬಂದಿದೆ. ಇತರ ಎರಡು ಪ್ರಮುಖ ಎಡ ಪಕ್ಷಗಳು ವಿರೋಧಪಕ್ಷಗಳ ವಿಶಾಲವಾದ ಏಕತೆಯ ನಡೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿದವು.

ಆದ್ದರಿಂದ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಒಕ್ಕೂಟವಾದದ ರಕ್ಷಣೆಯಲ್ಲಿ ವಿಶಾಲ ವಿರೋಧಪಕ್ಷಗಳ ಏಕತೆಗಾಗಿ ಶ್ರಮಿಸುತ್ತಿರುವಾಗಲೇ, ಎಡ ಏಕತೆ ಮತ್ತು ಎಡ ಮತ್ತು ಪ್ರಜಾಸತ್ತಾತ್ಮಕ ವೇದಿಕೆಯನ್ನು ನಿರ್ಮಿಸುವ ಪ್ರಯತ್ನಗಳಿಗೆ ಹೊಸ ಒತ್ತು ನೀಡಬೇಕು. ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಮೂಲಕ ಎಡ ಏಕತೆಯನ್ನು ಬಲಪಡಿಸಲು ನಿರಂತರ ಪ್ರಯತ್ನಗಳನ್ನು ಮಾಡಬೇಕು. RSP ಮತ್ತು AIFB ಕೇರಳದಲ್ಲಿ UDF ಮತ್ತು ಪಶ್ಚಿಮ ಬಂಗಾಳದಲ್ಲಿ ಎಡರಂಗದ ಭಾಗವಾಗಿದೆ. ಸಿಪಿಐ(ಎಂಎಲ್) ಎಡ ಏಕತೆಗಿಂತ ವ್ಯಾಪಕ ವಿರೋಧಪಕ್ಷಗಳ ಏಕತೆಯ ಮೇಲೆ ಹೆಚ್ಚು ಗಮನಹರಿಸಿದೆ. ಈ ಪ್ರಯತ್ನವು ಪಕ್ಷದ ಸ್ವತಂತ್ರ ಬಲವನ್ನು ಹೆಚ್ಚಿಸಲು ಸಾಂದ್ರೀಕೃತ ಪ್ರಯತ್ನಗಳ ಜತೆಜತೆಯಲ್ಲೇ ಹೋಗಬೇಕಾಗಿದೆ.

ಸಂಘಟನಾ ವೈಫಲ್ಯಗಳು

ಕ್ಷೀಣಿಸುತ್ತಿರುವ ಸಾಮೂಹಿಕ ನೆಲೆ ಮತ್ತು ಹಲವು ವರ್ಷಗಳ ಸ್ಥಗಿತತೆಯು ಪಕ್ಷದ ಸಂಘಟನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದ ಸ್ಥಾನಗಳಲ್ಲಿಯೂ ಪಕ್ಷದ ಸದಸ್ಯರು ಮತ್ತು ಪಕ್ಷದ ಘಟಕಗಳು ಚುನಾವಣಾ ಕೆಲಸ ಮತ್ತು ಪ್ರಚಾರದಲ್ಲಿ ಸಂಪೂರ್ಣವಾಗಿ ಭಾಗವಹಿಸಿಲ್ಲ ಎಂದು ಕೆಲವು ರಾಜ್ಯಗಳ ಚುನಾವಣಾ ಪರಿಶೀಲನಾ ವರದಿಗಳು ಸೂಚಿಸುತ್ತವೆ. ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ, ಇದು ಪಕ್ಷದ ಮೇಲೆ ವರ್ಷಗಳ ದಬ್ಬಾಳಿಕೆ ಮತ್ತು ದಾಳಿಯೊಂದಿಗೆ ಅಸಾಧಾರಣ ಪರಿಸ್ಥಿತಿಯ ಪರಿಣಾಮವಾಗಿದೆ. ಈ  ಅಸಾಧಾರಣ ಪರಿಸ್ಥಿತಿಯು ಜನರೊಂದಿಗೆ ಪಕ್ಷದ ಸಂಪರ್ಕವನ್ನು ದುರ್ಬಲಗೊಳಿಸಲು ಮತ್ತು ಅಡ್ಡಿಪಡಿಸಲು ಮತ್ತು ಪ್ರಾಥಮಿಕ ಘಟಕಗಳ ಕಾರ್ಯನಿರ್ವಹಿಸದಿರುವಿಕೆಗೆ ಕಾರಣವಾಗಿದೆ. ಆದರೆ ಇತರ ರಾಜ್ಯಗಳಲ್ಲಿಯೂ ಸಹ, ಸಂಘಟನಾ ಪರಿಸ್ಥಿತಿ ತುಂಬಾ ಅತೃಪ್ತಿಕರವಾಗಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು, ಪಕ್ಷದ ಸದಸ್ಯರು ಮತ್ತು ಪಕ್ಷದ ಘಟಕಗಳ ಒಂದು ವಿಭಾಗವು ವಿವಿಧ ಹಂತಗಳಲ್ಲಿ ನಿಷ್ಕ್ರಿಯತೆಯ ಕುರಿತು ವರದಿ ಮಾಡಿದೆ. ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರು ಪಕ್ಷದ ಧೋರಣೆಯ ವಿರುದ್ಧವಾಗಿ ಕೆಲವು ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸುವ ಅಥವಾ ಮತ ಚಲಾಯಿಸುವ ವರದಿಗಳಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಇತ್ಯಾದಿಗಳಿಗೆ ತಮ್ಮ ಸಂಕುಚಿತ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಅಭ್ಯರ್ಥಿಗಳು ಅಥವಾ ಪಕ್ಷಗಳನ್ನು ಬೆಂಬಲಿಸಲು ಆಯ್ಕೆಮಾಡುವಲ್ಲಿ ಸಂಸದೀಯ ಅವಕಾಶವಾದದ ನಿದರ್ಶನಗಳಿವೆ.

ಪಕ್ಷದ ಘಟಕಗಳು ಮತ್ತು ಪಕ್ಷದ ಸದಸ್ಯರು ಜನರೊಂದಿಗೆ ಜೀವಂತ ಸಂಬಂಧವನ್ನು ಕಾಪಾಡಿಕೊಳ್ಳುವ ವೈಫಲ್ಯದ ಹೆಚ್ಚು ಸಾಮಾನ್ಯವಾದ ಪ್ರಶ್ನೆಯೂ ಇದೆ.

ರಾಜ್ಯಗಳಲ್ಲಿ ನಡೆಸಲಾದ ಚುನಾವಣಾ ವಿಮರ್ಶೆಗಳು ನಮ್ಮ ಸಂಘಟನಾ ಕೆಲಸದಲ್ಲಿನ ದೌರ್ಬಲ್ಯಗಳು ಮತ್ತು ಕೊರತೆಗಳನ್ನು ಗುರುತಿಸಬೇಕು ಮತ್ತು ನಮ್ಮ ಸಂಘಟನಾ ಕಾರ್ಯನಿರ್ವಹಣೆ ಮತ್ತು ಕೆಲಸವನ್ನು ಸರಿಪಡಿಸಲು ಅಥವಾ ಸುಧಾರಿಸಲು ತಕ್ಷಣದ ಕ್ರಮಗಳನ್ನು ರೂಪಿಸಬೇಕು.

ಚುನಾವಣಾ ಪರಾಮರ್ಶೆಯ ಪರಿಣಾಮವಾಗಿ, ತಕ್ಷಣವೇ ತೆಗೆದುಕೊಳ್ಳಬೇಕಾದ ಕೆಲವು ರಾಜಕೀಯ-ಸಂಘಟನಾ ಕರ್ತವ್ಯಗಳು ಹೊಮ್ಮಿವೆ. ಇವು ರಾಜಕೀಯ-ಕಾರ್ಯತಂತ್ರದ ನಿಲುವುಗಳ ನಮ್ಮ ಅನುಷ್ಠಾನ ಮತ್ತು ನಮ್ಮ ಸಂಘಟನಾ ಕಾರ್ಯಗಳ ಆಳವಾದ ಪರಿಶೀಲನೆಗೆ ಕೊಂಡಿ  ಆಗಿರಬೇಕು. ಇವನ್ನು 24 ನೇ ಪಕ್ಷದ ಮಹಾಧಿವೇಶನಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ಚರ್ಚೆಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ  ಕೈಗೊಳ್ಳಲಾಗುವುದು.

ಕರ್ತವ್ಯಗಳು

  1. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಒಕ್ಕೂಟವಾದಗಳನ್ನು ರಕ್ಷಿಸಲು, ಪಕ್ಷವು ವ್ಯಾಪಕ ಏಕತೆಯ ಭಾಗವಾಗಿ ಮುಂದುವರಿಯಬೇಕು. ಎಲ್ಲಾ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳ ವ್ಯಾಪಕ ಸಜ್ಜುಗೊಳಿಸುವಿಕೆಗಾಗಿ ನಾವು ಕೆಲಸ ಮಾಡಬೇಕು.
  2. ಚುನಾವಣಾ ಫಲಿತಾಂಶವು ಹಿಂದುತ್ವದ ಮತಗಳ ಕಂತೆ ಹೆಚ್ಚು ಕಡಿಮೆ ಹಾಗೇ ಉಳಿದಿದೆ ಎಂದು ಸೂಚಿಸುತ್ತದೆ. ಇದಕ್ಕೆ ಬಿಜೆಪಿ-ಆರ್.ಎಸ್.ಎಸ್ ಮತ್ತು ಹಿಂದುತ್ವ ಶಕ್ತಿಗಳ ವಿರುದ್ಧ ಎಲ್ಲಾ ವಲಯಗಳಲ್ಲಿ ನಿರ್ದಿಷ್ಟ ರೂಪದಲ್ಲಿ ಸೈದ್ಧಾಂತಿಕ – ರಾಜಕೀಯ ಹೋರಾಟಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.
  3. ಹೊಸ ಮೋದಿ ಆಡಳಿತವು ಕೋಮುವಾದಿ-ಕಾರ್ಪೊರೇಟ್ ಕಾರ್ಯಸೂಚಿಯ ಭಾಗವಾಗಿರುವುದರಿಂದ ನವ-ಉದಾರವಾದಿ ನೀತಿಗಳೊಂದಿಗೆ ಮುಂದುವರಿಯುತ್ತದೆ. ನಾವು ಈ ನೀತಿಗಳನ್ನು ಪಟ್ಟುಬಿಡದೆ ವಿರೋಧಿಸಬೇಕು ಮತ್ತು ಜೀವನೋಪಾಯ, ಖಾಸಗೀಕರಣ, ನಿರುದ್ಯೋಗ, ಬೆಲೆ ಏರಿಕೆ ಇತ್ಯಾದಿಗಳ ಮೇಲಿನ ದಾಳಿಯ ರೂಪದಲ್ಲಿ ಈ ನೀತಿಗಳ ಪ್ರಭಾವದ ವಿರುದ್ಧ ಹೋರಾಡಲು ದುಡಿಯುವ ಜನರನ್ನು ಸಜ್ಜುಗೊಳಿಸಬೇಕು.
  4. ಎಡ ಏಕತೆ ಮತ್ತು ಎಡ ಜಂಟಿ ಕಾರ್ಯಕ್ರಮಗಳನ್ನು ರೂಪಿಸಲು ನವೀಕೃತ ಪ್ರಯತ್ನಗಳು. ನಮ್ಮ ರಾಜಕೀಯ ಪ್ರಚಾರದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಪರ್ಯಾಯವನ್ನು ಪ್ರಸ್ತುತ ಪಡಿಸಬೇಕು
  5. ಕೇರಳ ರಾಜ್ಯ ಸರ್ಕಾರ ಮತ್ತು ಕೇರಳದ ಜನರ ಮೇಲೆ ಮೋದಿ ಸರ್ಕಾರದ ಆರ್ಥಿಕ ಕತ್ತು ಹಿಸುಕಿಸುವಿಕೆಯ ವಿರುದ್ಧ ಪಕ್ಷವು ರಾಷ್ಟ್ರೀಯ ಅಭಿಯಾನವನ್ನು ನಡೆಸಬೇಕು.
  6. ವರ್ಗ ಮತ್ತು ಸಾಮೂಹಿಕ ಹೋರಾಟಗಳಲ್ಲಿ ಭಾಗವಹಿಸುವವರನ್ನು ರಾಜಕೀಯಕರಣಗೊಳಿಸುವಲ್ಲಿನ ದೌರ್ಬಲ್ಯಗಳನ್ನು ನಿವಾರಿಸಬೇಕು.  ನಿರ್ದಿಷ್ಟ ವಿಭಾಗಗಳು ಮತ್ತು ಪ್ರದೇಶಗಳಲ್ಲಿ ಪಕ್ಷದ ಕಟ್ಟುವಿಕೆ ಮತ್ತು ರಾಜಕೀಯ ಕೆಲಸಗಳನ್ನು ನಿರ್ದಿಷ್ಟವಾಗಿ ಯೋಜಿಸಬೇಕು.
  7. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿರುವ ಯುವಕರನ್ನು ಪಕ್ಷಕ್ಕೆ ಸಂಯೋಜಿಸಲು ಸಾಮಾನ್ಯವಾಗಿ ಯುವಕರನ್ನು ಎಡ ವೇದಿಕೆ ಮತ್ತು ನಿರ್ದಿಷ್ಟ ವ್ಯವಸ್ಥೆಗೆ ಸೆಳೆಯಲು ವಿಶೇಷ ಪ್ರಯತ್ನಗಳು ಆಗಬೇಕು.
  8. ಆಳುವ ಸರಕಾರಗಳು ಮಹಿಳಾ ನಿರ್ದಿಷ್ಟ ಕಲ್ಯಾಣ ಯೋಜನೆಗಳು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಮಹಿಳಾ ಬೆಂಬಲ ನೆಲೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನಗಳಲ್ಲಿ ನಾವು ಹಸ್ತಕ್ಷೇಪದ ನೇರ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.
  9. ಸಾಮಾಜಿಕ ಮಾಧ್ಯಮದ ಹಸ್ತಕ್ಷೇಪವು ಸಮರ್ಪಕವಾಗಿಲ್ಲ. ಸಾಮಾಜಿಕ ಮಾಧ್ಯಮದ ಹಸ್ತಕ್ಷೇಪವನ್ನು ಬಲಪಡಿಸಲು ಮತ್ತು ಎಲ್ಲಾ ಹಂತಗಳಲ್ಲಿ ಪ್ರಸಾರವನ್ನು ವಿಸ್ತರಿಸಲು ಆದ್ಯತೆ ನೀಡಬೇಕು.
  10. ನಮ್ಮ ಸಾಂಪ್ರದಾಯಿಕ ಮೂರು ರಾಜ್ಯಗಳ ಹೊರಗೆ ಇತ್ತೀಚಿನ ಚುನಾವಣೆಗಳು, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಲ್ಲಿ ನಾವು ಬುಡಕಟ್ಟು ಸ್ಥಾನಗಳಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ ಎಂದು ತೋರಿಸುತ್ತದೆ. ಆದ್ದರಿಂದ, ನಾವು ಆಯ್ದ ಬುಡಕಟ್ಟು ಪ್ರದೇಶಗಳಲ್ಲಿ ಕೆಲಸದ ಮೇಲೆ ಕೇಂದ್ರೀಕರಿಸಬೇಕು.
  11. ಚುನಾವಣಾ ಪ್ರಚಾರದಲ್ಲಿ ಪಕ್ಷದ ಸದಸ್ಯರ ನಿಷ್ಕ್ರಿಯತೆ, ಜನರ ಮನಸ್ಥಿತಿಯನ್ನು ನಿರ್ಣಯಿಸಲು ವಿಫಲತೆ ಗಳ ಸಂಘಟನಾ ದೌರ್ಬಲ್ಯಗಳನ್ನು ಗುರುತಿಸಿ, ನ್ಯೂನತೆಗಳನ್ನು ಸರಿಪಡಿಸಲು ನಿರ್ದಿಷ್ಟ  ಕ್ರಮಗಳನ್ನು ತೆಗೆದುಕೊಳ್ಳಬೇಕು.
  12. ಸಂಸದೀಯ ಸಂದರ್ಭಸಾಧಕತನವನ್ನು ಎದುರಿಸಬೇಕು ಮತ್ತು ತಪ್ಪು ಪ್ರವೃತ್ತಿಗಳನ್ನು ಸರಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.

****

Leave a Reply

Your email address will not be published. Required fields are marked *