ಇಸ್ರೇಲ್ ನ ನರಹಂತಕ ಕೃತ್ಯಗಳನ್ನು ಬಲವಾಗಿ ಪ್ರತಿಭಟಿಸಿ: ಪೊಲಿಟ್ ಬ್ಯೂರೋ ಕರೆ

ಒಂದೇ ದಿನದಲ್ಲಿ 400 ಕ್ಕೂ ಹೆಚ್ಚು ಜನರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ ಗಾಜಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಸಿಪಿಐ(ಎಂ) ನ ಪೊಲಿಟ್ ಬ್ಯೂರೋ ತೀವ್ರವಾಗಿ ಖಂಡಿಸಿದೆ. ಈ ಕ್ರಿಮಿನಲ್ ಆಕ್ರಮಣದ ಮೂಲಕ,  ಶಾಂತಿ ಮತ್ತು ಯುದ್ಧಗಳಿಗೆ ಅಂತ್ಯ ಹಾಡಬಹುದಾಗಿದ್ದ ಎರಡನೇ ಹಂತದ ಕದನ ವಿರಾಮದಿಂದ ಇಸ್ರೇಲ್ ಹಿಂದೆ ಸರಿಯುತ್ತಿದೆ ಎಂಬುದನ್ನು ಸೂಚಿಸಿದೆ.

ಮಾರ್ಚ್ 2 ರಿಂದ ಗಾಜಾಗೆ ಆಹಾರ, ಇಂಧನ, ನೀರು ಮತ್ತು ಔಷಧಿಗಳ ಎಲ್ಲಾ ಸರಬರಾಜುಗಳ ಸಂಪೂರ್ಣ ದಿಗ್ಬಂಧನದ ನಂತರ ಈ ಇತ್ತೀಚಿನ ಹತ್ಯಾಕಾಂಡ ನಡೆದಿದೆ. ಗಾಜಾವನ್ನು ನೆಲಸಮಗೊಳಿಸುವ ಮತ್ತು ಜನರನ್ನು ಅವರ ತಾಯ್ನಾಡಿನಿಂದ ಹೊರಹಾಕುವ ಗುರಿ ಹೊಂದಿರುವ ಇಸ್ರೇಲ್‌ನ ಈ ಇತ್ತೀಚಿನ ಆಕ್ರಮಣಕ್ಕೆ ಟ್ರಂಪ್ ಆಡಳಿತವು ಕುಮ್ಮಕ್ಕು ನೀಡುತ್ತಿದೆ. ಇಸ್ರೇಲ್‌ನ ಮಿಲಿಟರಿ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಎರಡನೇ ಹಂತದ ಕದನ ವಿರಾಮವನ್ನು ಜಾರಿಗೆ ತರಬೇಕು. ಇದು ಪ್ರಪಂಚದಾದ್ಯಂತದ ಶಾಂತಿಪ್ರಿಯ ಜನರ ಬೇಡಿಕೆಯಾಗಿದೆ.

ಇಸ್ರೇಲ್‌ನ ಆಕ್ರಮಣಕಾರಿ ಕ್ರಮಗಳ ವಿರುದ್ಧ ಮೋದಿ ಸರ್ಕಾರ ಬಹಿರಂಗವಾಗಿ ಧ್ವನಿ ಎತ್ತಬೇಕು. ಇಡೀ ಜನಸಮೂಹ ಹಸಿವಿನಿಂದ ಮತ್ತು ಸಾಮೂಹಿಕ ಸಾವುನೋವುಗಳಿಗೆ ಒಳಗಾಗುತ್ತಿರುವಾಗ ಮೋದಿ ಸರ್ಕಾರ ಮೌನವಾಗಿರಲು ಸಾಧ್ಯವಿಲ್ಲ ಎಂದಿರುವ ಪೊಲಿಟ್ ಬ್ಯೂರೋ, ಮುಂದುವರಿದ ಇಸ್ರೇಲಿ ನರಮೇಧದ ವಿರುದ್ಧ ಮತ್ತು ತಕ್ಷಣದ ಕದನ ವಿರಾಮ ಮತ್ತು ಶಾಂತಿ ಇತ್ಯರ್ಥಕ್ಕೆ ಕರೆ ನೀಡಿ ಪ್ರತಿಭಟಿಸಲು ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *