ಭೂಮಿ-ವಸತಿಗಾಗಿ ಯಶಸ್ವಿ ಜೈಲು ಭರೋ : ಸಾವಿರಾರು ಬಂಧನ

ಚಿಕ್ಕಬಳ್ಳಾಪುರ : ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿ ಕೇಂದ್ರದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ತಾಲ್ಲೂಕು ಸಮಿತಿ ಕಾರ್ಯದರ್ಶಿ ರಘುರಾಮರೆಡ್ಡಿ, ಮುಖಂಡರಾದ ಚನ್ನರಾಯಪ್ಪ, ಸೇರಿದಂತೆ ಅನೇಕ ನಾಯಕರು ನೇತೃತ್ವದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ರೈತ ಮತ್ತು ಕೃಷಿಕೂಲಿಕಾರ ಮತ್ತು ಕಾರ್ಮಿಕರು ತಾಲ್ಲೂಕು ಕಛೇರಿ ಮುತ್ತಿಗೆ ಹಾಕಿದ್ದಾರೆ. ಸ್ಥಳದಲ್ಲಿ ಸಂಘರ್ಷತ್ತಾತ್ಮಕ ವಾತಾವರಣ ಉಂಟಾಗಿದ್ದು, ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.

ಗುಡಿಬಂಡೆ : ನಗರದಲ್ಲಿ ಸಿಪಿಐಎ(ಎಂ) ರಾಜ್ಯ ಸಮಿತಿ ಸದಸ್ಯರಾದ ಜಯರಾಮರೆಡ್ಡಿ ನೇತೃತ್ವದಲ್ಲಿ 2 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸುಮಾರು 200 ಜನ ರೈತ ಮುಖಂಡರನ್ನು ಬಂಧಿಸಿ, ನಗರದಿಂದ 20 ಕಿ.ಮೀ. ದೂರದಲ್ಲಿರುವ ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.  ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಎಂ.ಪಿ.ಮುನಿವೆಂಕಪ್ಪ, ಸಿದ್ಧಗಂಗಪ್ಪ, ಸೇರಿದಂತೆ ಸುಮಾರು 300ಕ್ಕೂ ಹೆಚ್ಚಿನ ರೈತ-ಕಾರ್ಮಿಕರನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡ : ಮಂಗಳೂರು ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿಗಳ ಕಛೇರಿ ಕಡೆಗೆ ಹೊರಟ ಸುಮಾರು 1,500 ಪ್ರತಿಭಟನಾಕಾರರ ಮೆರವಣಿಗೆಯು ಜಿಲ್ಲಾಧಿಕಾರಿ ಕಛೇರಿ ಸಮೀಪಕ್ಕೆ ಬರುತ್ತಿದ್ದಂತೆ ಗೇಟುಗಳನ್ನು ಬಂದ್ ಮಾಡಲಾಗಿದೆ. ಈ ಕಾರಣಕ್ಕಾಗಿ ಪ್ರತಿಭಟನಾಕಾರರು ಮತ್ತು ಆರಕ್ಷಕ ಸಿಬ್ಬಂದಿಗಳ ನಡುವೆ ಗುದ್ದಾಟ ಏರ್ಪಟ್ಟಿದ್ದು ಕೊನೆಗೆ ಸುಮಾರು 160 ಜನ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಮುಖಂಡರಾದ ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಕೆ.ಆರ್.ಶ್ರೀಯಾನ್, ಸೇರಿದಂತೆ ಇತರೆ ನಾಯಕರು ಭಾಗವಹಿಸಿದ್ದರು.

ಉಡುಪಿ : ಜಿಲ್ಲೆಯಲ್ಲೂ ಪ್ರತಿಭಟನೆ ನಡೆದಿದ್ದು, ಒಂದು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಸುಮಾರು 500 ಜನರನ್ನು ಬಂಧಿಸಲಾಗಿದೆ. ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ಮತ್ತಿತರ ಮುಖಂಡರು ಇದ್ದರು.

ಬೆಂಗಳೂರು : ನಗರದ ಟೌನ್‍ಹಾಲ್ ಮುಂಭಾಗ ಸುಮಾರು 150ಕ್ಕೂ ಹೆಚ್ಚಿನ ಪ್ರತಿಭಟನಾಕಾರರು ಭಾಗವಹಿಸಿದ್ದರು. ಮುಖಂಡರಾದ ಜಿ.ಎನ್.ನಾಗರಾಜ್, ಕೆ.ಪ್ರಕಾಶ್, ಕೆ.ಎನ್.ಉಮೇಶ್, ಎನ್.ವೆಂಕಟಾಚಲಯ್ಯ, ಚಂದ್ರಪ್ಪ ಹೊಸ್ಕೆರಾ, ಗೋಪಾಲಕೃಷ್ಣ ಅರಳಹಳ್ಳಿ ಮತ್ತಿತರ ಮುಖಂಡರು ಭಾಗವಹಿಸಿದ್ದರು. ಆನೇಕಲ್ ತಾಲ್ಲೂಕಿನಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ರೈತ ಕಾರ್ಮಿಕರು ತಹಶೀಲ್ದಾರ್ ಕಛೇರಿ ಮುತ್ತಿಗೆ ಹಾಕಿ ಬಂಧನಕ್ಕೆ ಒಳಗಾಗಿದ್ದಾರೆ. ಮುಖಂಡರಾದ ಬಿ.ಎನ್.ಮಂಜುನಾಥ್, ಡಿ.ಮಹದೇಶ್, ಬಿ.ರಾಜಶೇಖರ ಮೂರ್ತಿ, ಕೆ.ಎಸ್.ಲಕ್ಷ್ಮಿ, ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಬಳ್ಳಾರಿ : ಜಿಲ್ಲೆಯ 6 ತಾಲ್ಲೂಕುಗಳಲ್ಲೂ ಪ್ರತಿಭಟನೆ ಯಶಸ್ವಿಯಾಗಿ ನಡೆದಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 500 ಜನ, ಸಿರಗುಪ್ಪ – 2000 ಜನ, ಬಳ್ಳಾರಿ – 300 ಜನ. ಕುರಗೋಡು – 300, ಹೂವಿನ ಹಡಗಲಿ – 400, ಸಂಡೂರು – 250 ಜನ, ಹೊಸಪೇಟೆ ತಾಲ್ಲೂಕಿನಲ್ಲಿ 2000 ಜನ ಭಾಗವಹಿಸಿದ್ದರು. ಮುಖಂಡರಾದ ಯು.ಬಸವರಾಜು, ಆರ್.ಎಸ್.ಬಸವರಾಜು ಸೇರಿದಂತೆ ಜಿಲ್ಲೆಯ ಒಟ್ಟು 3000 ಜನ ಬಂಧನಕ್ಕೊಳಗಾಗಿದ್ದಾರೆ.

ಕೋಲಾರ : ಜಿಲ್ಲೆಯಲ್ಲಿ ಪ್ರತಿಭಟನೆ ಸಂಪೂರ್ಣ ಯಶಸ್ವಿಯಾಗಿದೆ. ಕೋಲಾರ, ಬಂಗಾರಪೇಟೆ, ಶ್ರೀನಿವಾಪುರ, ಮಾಲೂರು, ಮುಳಬಾಗಿಲು ತಾಲ್ಲೂಕುಗಳಲ್ಲಿ ಕ್ರಮವಾಗಿ 600, 250, 300, 200, 350 ಜನರು ಭಾಗವಹಿಸಿದ್ದರು. ಎಲ್ಲರೂ ಬಂಧನಕ್ಕೆ ಒಳಗಾಗಿದ್ದಾರೆ. ಮುಖಂಡರಾದ ನಾರಾಯಣಸ್ವಾಮಿ ಮತ್ತು ಅರ್ಜುನನ್, ವಿ.ಗೀತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕಲಬುರಗಿ : ಜಿಲ್ಲೆಯ ಕಲಬುರಗಿ – 2000 ಜನ, ಚಿಂಚೋಳ್ಳಿ – 400, ಚಿತ್ತಾಪುರ – 2000 ಜನ, ಅಳಂದ – 500 ಜನ ರೈತ, ಕೃಷಿಕೂಲಿಕಾರರು ಮತ್ತು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಲಬುರಗಿಯಲ್ಲಿ 47 ಜನ ಬಂಧನಕ್ಕೆ ಒಳಗಾಗಿದ್ದಾರೆ. ಉಳಿದ ಕಡೆ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಗಿದೆ. ಮುಖಂಡರಾದ ಮಾರುತಿ ಮಾನ್ಪಡೆ, ಶರಣಬಸಪ್ಪ ಮಮಶೆಟ್ಟಿ, ಮತ್ತಿತರ ಮುಖಂಡರು ನೇತೃತ್ವ ವಹಿಸಿದ್ದರು.

ಯಾದಗಿರಿ : ಜಿಲ್ಲೆಯ ಶಹಾಪುರದಲ್ಲಿ 70 ಜನ ಭಾಗವಹಿಸಿದ್ದು, ಮನವಿ ಪತ್ರವನ್ನು ತಹಶೀಲ್ದಾರರಿಗೆ ನೀಡಿದ್ದಾರೆ. ಯಾದಗಿರಿಯಲ್ಲಿ 170 ಜನ ಪ್ರತಿಭಟನೆ ನಡೆಸಿ ಬಂಧನಕ್ಕೆ ಒಳಗಾಗಿದ್ದಾರೆ.  ಧಾರವಾಡ : ಜಿಲ್ಲೆಯಲ್ಲಿ ಪ್ರತಿಭಟನೆ ನಡೆದಿದ್ದು ಒಟ್ಟು 475 ಜನ ಬಂಧನಕ್ಕೆ ಒಳಗಾಗಿದ್ದಾರೆ. ಬಂಧನದ ನಂತರವೂ ಜೈಲಿಗೆ ಕಳುಹಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆದಿದೆ. ಮುಖಂಡರಾದ ಬಿ.ಎಸ್.ಸೊಪ್ಪಿನ್, ಮಹೇಶ್ ಪತ್ತಾರ್ ಸೇರಿದಂತೆ ಇತರೆ ಮಖಂಡರು ಭಾಗವಹಿಸಿದ್ದಾರೆ.

ಹಾಸನ : ನಗರದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದು, ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಹೊರಟಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಪೊಲೀಸ್ ಮೈದಾನಕ್ಕೆ ಕರೆದೊಯ್ದಿದ್ದಾರೆ. ಪಟ್ಟು ಬಿಡದ ಪ್ರತಿಭಟನಾಕಾರರು ಜೈಲಿಗೆ ಕಳುಹಿಸುವಂತೆ ಪ್ರತಿಭಟನೆ ಮುಂದುವರೆಸಿದ್ದಾರೆ. ಮುಖಂಡರಾದ ಎಸ್.ವರಲಕ್ಷ್ಮಿ, ಧರ್ಮೇಶ್, ನವೀನ್‍ಕುಮಾರ್, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ.

ಮಂಡ್ಯ : ಜಿಲ್ಲೆಯ ಮಳವಳ್ಳಿ, ಮದ್ಧೂರು, ಮಂಡ್ಯ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕುಗಳಲ್ಲಿ ಪ್ರತಿಭಟನೆ ಯಶಸ್ವಿಯಾಗಿ ನಡೆದಿದೆ. ಮಳವಳ್ಳಿ ತಾಲ್ಲೂಕಿನ ಪುರಭವನದಿಂದ ಸುಮಾರು 500ಕ್ಕೂ ಹೆಚ್ಚು ಪ್ರತಿಭಟನಾಕಾರರ ಮೆರವಣಿಗೆಯು ಹೊರಟು ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸ್ ಸಿಬ್ಬಂದಿಯ ನಡುವೆ ವಾಗ್ವಾದ ಜರುಗಿದ್ದು, ಸಂಘರ್ಷತಾತ್ಮಕ ವಾತಾವರಣ ಉಂಟಾಗಿದ್ದು ಪೊಲೀಸರು ಲಾಠಿ ಚಾರ್ಜ್ ನಡೆಸಿ, ಮುಖಂಡರಾದ ಹನುಮೇಗೌಡ ಮತ್ತು ಶಿವಮಲ್ಲು ಅವರಿಗೆ ತೀವ್ರ ಪೆಟ್ಟಾಗಿದ್ದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ನಂತರವೂ ಪ್ರತಿಭಟನೆ ಮುಂದುವರೆದಿದ್ದು, 250ಕ್ಕೂ ಹೆಚ್ಚು ಪ್ರತಿಭಟನಾಕಾರರು ಬಂಧಿಸಿದ್ದಾರೆ.

ಮಂಡ್ಯದಲ್ಲಿ 650ಕ್ಕೂ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ರ್ಯಾಲಿ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮದ್ದೂರಿನಲ್ಲಿ 788 ಜನ ಪ್ರತಿಭಟನಾಕಾರರು ತಹಶೀಲ್ದಾರರ ಕಛೇರಿಗೆ ಮುತ್ತಿಗೆ ಹಾಕಿದ್ದು 188 ಜನರನ್ನು ಬಂಧಿಸಿದ್ದಾರೆ. ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿ 125 ಮತ್ತು 150 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ತುಮಕೂರಿನಲ್ಲಿ ಪ್ರತಿಭಟನೆ ಯಶಸ್ವಿಯಾಗಿ ನಡೆದಿದ್ದು ರ್ಯಾಲಿಯ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದ ಪ್ರತಿಭಟನಾಕಾರರು ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸುಮಾರು 325 ಜನ ಪ್ರತಿಭಟನಾಕಾರರು ಬಂಧಕ್ಕೆ ಒಳಗಾಗಿದ್ದಾರೆ.

ರಾಯಚೂರು : ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆದಿದ್ದು, ರಾಯಚೂರಿನಲ್ಲಿ 700 ಜನ ಭಾಗವಹಿಸಿದ್ದರು. 100 ಜನ ಬಂಧನಕ್ಕೆ ಒಳಗಾಗಿದ್ದಾರೆ. ದೇವದುರ್ಗದಲ್ಲಿ 150, ಲಿಂಗಸಗೂರು – 350, ಸಿಂಧನೂರಿನಲ್ಲಿ – 400 ಜನರು ಬಂಧನಕ್ಕೆ ಒಳಗಾಗಿದ್ದು, 700 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  ಉತ್ತರ ಕನ್ನಡ : ಕಾರವಾರದಲ್ಲಿ ಪ್ರತಿಭಟನೆ ನಡೆದಿದ್ದು 150 ಜನ ಬಂಧನಕ್ಕೆ ಒಳಗಾಗಿದ್ದಾರೆ. ಅಂಕೋಲಾದಲ್ಲಿ ಸುಮಾರು 200 ಕ್ಕೂ ಹೆಚ್ಚಿನ ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮುಖಂಡರಾದ ಎಸ್.ವೈ.ಗುರುಶಾಂತ್, ಶಾಂತರಾಂ ನಾಯಕ್, ಯಮನಾ ಗಾಂವ್ಕರ್ ಮತ್ತಿತರರು ಭಾಗವಹಿಸಿದ್ದರು. ಮೈಸೂರು : ಮೂರು ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆದಿದ್ದು, ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಮೈಸೂರು – 50 ಜನ, ಹುಣಸೂರು – 150 ಜನ, ಹೆಚ್.ಡಿ.ಕೋಟೆ – 100 ಜನ ಪ್ರತಿಭಟನಾಕಾರರು ಭಾಗವಹಿಸಿದ್ದಾರೆ.

ವಿಜಯಪುರದಲ್ಲಿ ಪ್ರತಿಭಟನೆ ನಡೆದಿದ್ದು, ಸುಮಾರು 2000 ಜನ ಜಿಲ್ಲಾಧಿಕಾರಿ ಕಛೇರಿಯನ್ನು ರೈತ, ಕೂಲಿಕಾರರು, ಕಾರ್ಮಿಕರು ಮುತ್ತಿಗೆ ಹಾಕಿದ್ದಾರೆ. ಸುಮಾರು 300 ಜನರನ್ನು ಬಂಧಿಸಿದ್ದಾರೆ.ಕೊಪ್ಪಳ : ಜಿಲ್ಲೆಯ ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದ್ದು 2500 ಜನರು ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. 500 ಜನರನ್ನು ಬಂಧಿಸಿದ್ದಾರೆ. ದಾವಣಗೆರೆ : ನಗರದಲ್ಲಿ ಮೆರವಣಿಗೆ ಹೊರಟ 500 ಜನ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕರರು ಜಿಲ್ಲಾಧಿಕಾರಿರವರನ್ನು ಕರೆಸಲು ಬೇಡಿಕೆ ಇಟ್ಟಿದ್ದರು. ಅವರ ಬದಲಿಗೆ ಬಂದ ಎ.ಸಿ. ಅವರನ್ನು ವಾಪಸ್ಸು ಕಳುಹಿಸಿ ಜಿಲ್ಲಾಧಿಕಾರಿಯವರನ್ನು ಸ್ಥಳಕ್ಕೆ ಕರೆಯಿಸಿಕೊಳ್ಳು ಯಶಸ್ವಿಯಾಗಿದ್ದಾರೆ. ಪ್ರತಿಭಟನಾಕಾರರ ಧರಣಿಗೆ ಮಣಿದ ಜಿಲ್ಲಾಧಿಕಾರಿಯು ಡಿಸೆಂಬರ್ 07ರಂದು ಅಧಿಕಾರಿಗಳ ಜೊತೆ ಸಭೆ ಕರೆಯಲು ದಿನಾಂಕವನ್ನು ಗೊತ್ತು ಮಾಡಿಸಿದ್ದಾರೆ.

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆದಿದೆ. ಕ್ರಮವಾಗಿ 400, 200, 150 ಜನರು ಬಂಧನಕ್ಕೆ ಒಳಗಾಗಿದ್ದಾರೆ. ಶಿವಮೊಗ್ಗ : ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದು, ಮನವಿ ಪತ್ರ ನೀಡಲಾಗಿದೆ. ಸುಮಾರು 100 ಜನರು ಭಾಗವಹಿಸಿದ್ದರು. ಬೆಂಗಳೂರು ಗ್ರಾಮಾಂತರ : ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆದಿದೆ. 200 ಜನರು ಭಾಗವಹಿಸಿದ್ದಾರೆ. ಬೀದರ್ : ಜಿಲ್ಲೆಯ ಹುಮ್ನಾಬಾದ್, ಬಸವ ಕಲ್ಯಾಣ, ಹೌರಾದ್, ಬಾಲ್ಕಿ ತಾಲ್ಲೂಕುಗಳಲ್ಲಿ ಪ್ರತಿಭಟನೆ ನಡೆದಿದೆ. ಕ್ರಮವಾಗಿ 500, 200, 200, 200 ಪ್ರತಿಭಟನಾಕಾರರು ಭಾಗವಹಿಸಿದ್ದರು. ತಹಶೀಲ್ದಾರರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ತಹಶೀಲ್ದಾರ್ ಕಛೇರಿ ಮುಂಭಾಗ ಧರಣಿ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಾಗೆಯೇ, ಕೊಡಗು, ಗದಗ, ಹಾವೇರಿ, ಮತ್ತಿತರ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದು ಬಂಧಕ್ಕೆ ಒಳಗಾಗಿದ್ದಾರೆ.

Leave a Reply

Your email address will not be published. Required fields are marked *